ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ 25 ಕೆರೆಗಳ ಒತ್ತುವರಿ: ಲೋಕಾಯುಕ್ತರಿಂದ ವಿಚಾರಣೆ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 2: ಬೆಂಗಳೂರಿನ 25 ಕೆರೆಗಳು ಅವಸಾನದ ಅಂಚಿನಲ್ಲಿದ್ದು ಅವುಗಳನ್ನು ರಕ್ಷಿಸಬೇಕೆಂದು ಕೋರಿ ಸ್ವಾತಂತ್ರ್ಯ ಹೋರಾಟಗಾರ ಎಚ್‌ಎಸ್‌ ದೊರೆಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಗುರುವಾರ ಮಧ್ಯಾಹ್ನ ನಡೆಸಲಿದ್ದಾರೆ.

ಯುನೈಟೆಡ್‌ ಬೆಂಗಳೂರು ಸಂಸ್ಥೆಯ ಸದಸ್ಯರು ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ 2017ರ ಮೇ 15ರಂದು ಬೆಂಗಳೂರಿನ 25 ಕೆರೆಗಳನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಿಸಿರುವುದಲ್ಲದೇ ಸಾರ್ವಜನಿಕರು ಸಾರ್ವಜನಿಕರು ತ್ಯಾಜ್ಯವಸ್ತುಗಳನ್ನು ಹಾಗೂ ಚರಂಡಿ ತ್ಯಾಜ್ಯವನ್ನೂ ಕೂಡ ಕೆರೆಗೆ ಹರಿಬಿಡಲಾಗುತ್ತಿದೆ.

Lokayukta will hear lake encroachment case today

ಕೆರೆ ಅಭಿವೃದ್ಧಿ ಪ್ರಾಧಿಕಾರವನ್ನೇ ಆಹುತಿ ಪಡೆಯುತ್ತಾ ರಾಜ್ಯ ಸರ್ಕಾರ?ಕೆರೆ ಅಭಿವೃದ್ಧಿ ಪ್ರಾಧಿಕಾರವನ್ನೇ ಆಹುತಿ ಪಡೆಯುತ್ತಾ ರಾಜ್ಯ ಸರ್ಕಾರ?

ಈ ಹಿನ್ನೆಲೆಯಲ್ಲಿ ಕೆರೆಗಳು ನಶಿಸಿ ಹೋಗುತ್ತಿವೆ ಕೆರೆಗಳ ರಕ್ಷಣೆಗಾಗಿ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಕುರಿತು ಸಂಸದ ರಾಜೀವ್‌ ಚಂದ್ರಶೇಖರ್‌ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕೆರೆಗಳ ರಕ್ಷಣೆಗಾಗಿ ಯುನೈಟೆಡ್‌ ಬೆಂಗಳೂರಿನ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

English summary
Lokayukta Justice Vishwanath Shetty will hear the case about encroachment of 25 lakes in Bengaluru filed by freedom fighter H.S.Doreswamy at 3pm on August 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X