ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೋಶನ್ ಬೇಗ್ ಸಚಿವ ಸ್ಥಾನ ಸದ್ಯಕ್ಕೆ ಅಬಾಧಿತ

By Srinath
|
Google Oneindia Kannada News

lokayukta-police-give-clean-chit-to-minister-roshan-baig-keonics-case
ಬೆಂಗಳೂರು, ಜ.23- ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಎಸ್ ಆರ್ ಹಿರೇಮಠರಿಗೆ ಇದು ಬ್ಯಾಡ್ ನ್ಯೂಸ್. ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ 'ಕಳಂಕಿತ'ಪಟ್ಟ ಹೊತ್ತಿದ್ದ ಆರ್ ರೋಶನ್ ಬೇಗ್ ಗೆ ಸಚಿವ ಸ್ಥಾನ ಸದ್ಯಕ್ಕೆ ಅಬಾಧಿತವಾಗಿದೆ.

ಮುಖ್ಯವಾಗಿ ಕಿಯೋನಿಕ್ಸ್ ಆಸ್ತಿ ಕಬಳಿಕೆ ಪ್ರಕರಣದಲ್ಲಿ ವಾರ್ತಾ ಸಚಿವ ರೋಶನ್ ಬೇಗ್ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿದೆ. ಕಿಯೋನಿಕ್ಸ್ ಆಸ್ತಿ ದುರ್ಬಳಕೆ ಪ್ರಕರಣವು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಲೋಕಾಯುಕ್ತ ಪೊಲೀಸರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸಿ ವರದಿ (clean chit) ಸಲ್ಲಿಸಿದ ಹಿನ್ನೆಲೆಯಲ್ಲಿ ಜಸ್ಟೀಸ್ ಎನ್ ಕೆ ಸುಧೀಂದ್ರರಾವ್ ಅವರು ಸಚಿವ ರೋಶನ್ ಬೇಗ್ ವಿರುದ್ಧದ ಪ್ರಕರಣವನ್ನು ಕೈಬಿಟ್ಟಿದ್ದಾರೆ.

ಹೈಕಮಾಂಡಿನ ಒತ್ತಡದ ಮೇರೆಗೆ ಸಿಎಂ ಸಿದ್ದರಾಮಯ್ಯ ಅವರು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕಳಂಕಿತರಾದ ರೋಶನ್ ಬೇಗ್ ಮತ್ತು ಡಿಕೆ ಶಿವಕುಮಾರ್ ಅವರುಗಳನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದರು. ( ಸೋದರನಿಗೆ ಬೆದರಿಕೆ: ರಕ್ಷಣೆಗೆ ನ್ಯಾ ಸುಧೀಂದ್ರರಾವ್ ಮೊರೆ )

ದೂರುದಾರ ಶಿವಾಜಿನಗರದ ಅಬ್ದುಲ್ ಹಕ್ ಸುರತಿ ಪರ ವಕೀಲರು, ಪೊಲೀಸರ ವರದಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಶೀಘ್ರದಲ್ಲೇ ಪುನರ್ ಪರಿಶೀಲನೆಗೆ ಅರ್ಜಿ ಸಲ್ಲಿಸುತ್ತೇವೆ, ಇದಕ್ಕಾಗಿ ಒಂದು ವಾರ ಅವಕಾಶ ನೀಡುವಂತೆ ಮನವಿ ಮಾಡಿದರು. ( ಎಚ್ಡಿಕೆಯನ್ನು ತರಾಟೆಗೆ ತೆಗೆದುಕೊಂಡ ನ್ಯಾ ಸುಧೀಂದ್ರರಾವ್ )

ಪ್ರಕರಣದ ಸಂಬಂಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ ವರದಿಯನ್ನು ಕೂಲಂಕಶವಾಗಿ ಪರಿಶೀಲಿಸಿದ ಜಸ್ಟೀಸ್ ಸುಧೀಂದ್ರ ರಾವ್ ಅವರು ಸುಮಾರು ಒಂದು ಗಂಟೆ ಕಾಲ ಪೊಲೀಸರನ್ನು ಮತ್ತಷ್ಟು ವಿಚಾರಿಸಿದರು.

ಪ್ರಕರಣವು ಯಾವ ರೀತಿ ಮತ್ತು ಯಾವ ಕಾರಣಕ್ಕಾಗಿ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ವ್ಯಾಪ್ತಿಗೆ ಬರುವುದಿಲ್ಲ ಎಂಬುದನ್ನೂ ಮತ್ತು ತನಿಖೆ ಯಾವ ರೀತಿಯಲ್ಲಿ ನಡೆಸಲಾಗಿದೆ ಎಂಬುದರ ಬಗ್ಗೆಯೂ ವಿವರಣೆ ನೀಡುವಂತೆ ನಿರ್ದೇಶನ ನೀಡಿದ್ದು, ಪ್ರಕರಣವನ್ನು ಜನವರಿ 25ಕ್ಕೆ ಮುಂದೂಡಿದರು. ( ರೋಷನ್ ಬೇಗ್ ಪತ್ನಿ ವಿರುದ್ದವೂ ಬಿತ್ತು ಕೇಸ್ )

English summary
Sitting lack of evidence Lokayukta police has given clean-chit to tainted minister Roshan Baig Keonics case. Under pressure from High Command, Chief Minister Siddaramaiah has inducted senior legislator R Roshan Baig recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X