ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾಸ್ಕರ್ ರಾವ್ ರಾಜೀನಾಮೆ, ಅಶ್ವಿನ್ ಬಂಧನಕ್ಕೆ ಲೋಕಸತ್ತಾ ಆಗ್ರಹ

By Mahesh
|
Google Oneindia Kannada News

ಬೆಂಗಳೂರು, ಜುಲೈ 23: ಲೋಕಾಯುಕ್ತ ಸಂಸ್ಥೆ ಭ್ರಷ್ಟಾಚಾರದ ನಡೆದಿರುವ ಹಿನ್ನೆಲೆಯಲ್ಲಿ ಹಿಂದಿನ ಲೋಕಾಯುಕ್ತ ಕಾಯ್ದೆಯನ್ನು ತೆಗೆದು ಹಾಕಿ, ಶಕ್ತಿಹೀನ ನೂತನ ಕಾಯ್ದೆಯನ್ನು ಜಾರಿಗೆ ತರಲು ಹೊರಟಿರುವ ಸರ್ಕಾರದ ಕ್ರಮವನ್ನು ಲೋಕಸತ್ತಾ ಪಕ್ಷವು ಬಲವಾಗಿ ವಿರೋಧಿಸುತ್ತದೆ. ಲೋಕಾಯುಕ್ತ ಭಾಸ್ಕರ್ ರಾವ್ ಅವರ ರಾಜೀನಾಮೆ ಹಾಗೂ ಅವರ ಪುತ್ರ ಅಶ್ವಿನ್ ರಾವ್ ಬಂಧನಕ್ಕೆ ಲೋಕಸತ್ತಾ ಪಕ್ಷ ಆಗ್ರಹಿಸಿದೆ.

ಅಶ್ವಿನ್ ರಾವ್ ನನ್ನು ಇದುವರೆಗೂ ಬಂಧಿಸದಿರುವುದು ಸಂಶಯಕ್ಕೆ ಈಡು ಮಾಡುತ್ತದೆ. ಪ್ರಮುಖ ಆರೋಪಿ ಮತ್ತು ಅಶ್ವಿನ್ ವೈ. ನನ್ನು ಬಂಧಿಸುವ ಬದಲು ಉಳಿದ ಸಣ್ಣ ಪುಟ್ಟ ಆರೋಪಿಗಳನ್ನು ಬಂಧಿಸುತ್ತಿರುವುದು, ಪ್ರಮುಖ ಆರೋಪಿಯು ತನಿಖೆಯ ವ್ಯಾಪ್ತಿಯಿಂದ ಆಚೆ ಉಳಿಯಲು ಅವಕಾಶ ಮಾಡಿಕೊಡಲಾಗುತ್ತಿದೆ. ಕೂಡಲೇ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಲೋಕಸತ್ತಾ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಅಶ್ವಿನ್ ಮಹೇಶ್ ಹೇಳಿದ್ದಾರೆ.

ಕಾಯ್ದೆ ತಿದ್ದುಪಡಿ ಅಗತ್ಯವಿಲ್ಲ: ಕೇವಲ ಒಬ್ಬ ಭ್ರಷ್ಟ ಲೋಕಾಯುಕ್ತರನ್ನು ತೆಗೆಯಲು ಸಾಧ್ಯವಾಗುತ್ತಿಲ್ಲ ಎಂದು ಹೊಸ ಕಾಯ್ದೆಯನ್ನು ತರುತ್ತೇವೆ ಎನ್ನುತ್ತಿರುವುದು ತಮ್ಮ ಹಿತರಕ್ಷಣೆಗೆ ಮಾಡುತ್ತಿರುವ ಕೆಲಸವಾಗಿದೆ. ಸರ್ಕಾರವೇ ಭ್ರಷ್ಟ ಭಾಸ್ಕರ್ ರಾವ್ ಅವರ ರಕ್ಷಣೆಗೆ ನಿಂತಿರುವುದರಿಂದ ಅವರು ರಾಜಿನಾಮೆಯ ಬಗ್ಗೆ ಯೋಚಿಸುತ್ತಿಲ್ಲ. ಕಾಂಗ್ರೆಸ್ ಪಕ್ಷ ಮತ್ತು ಪ್ರಮುಖ ವಿರೋಧ ಪಕ್ಷಗಳು ಲೋಕಾಯುಕ್ತರ ರಾಜಿನಾಮೆಗೆ ಬಲವಾಗಿ ಒತ್ತಾಯಿಸಿದ್ದರೆ, ಅವರು ತಮ್ಮ ಸ್ಥಾನದಿಂದ ನಿರ್ಗಮಿಸುತ್ತಿದ್ದರು.

ಆದರೆ, ಇದೇ ಕಾರಣ ನೀಡಿ ಶಕ್ತಿಹೀನ ಕಾಯ್ದೆ ಜಾರಿಗೆ ತರಲು ಹೊರಟಿರುವುದು ದುರದೃಷ್ಟಕರ. ಈ ಪ್ರಕರಣದ ತನಿಖೆಯನ್ನು ಉಚ್ಚ ನ್ಯಾಯಾಲಯದ ಉಸ್ತುವಾರಿಯಲ್ಲಿ ಸಿಬಿಐಗೆ ವಹಿಸಿದ್ದರೆ ಹೊಸ ಕಾಯ್ದೆಯ ಅವಶ್ಯಕತೆ ಇರುತ್ತಿರಲಿಲ್ಲ.

ಭಾಸ್ಕರ್ ರಾವ್ ರಾಜೀನಾಮೆ ಪಡೆಯಲು ಮನಸ್ಸಿಲ್ಲವೇ?

ಭಾಸ್ಕರ್ ರಾವ್ ರಾಜೀನಾಮೆ ಪಡೆಯಲು ಮನಸ್ಸಿಲ್ಲವೇ?

ಲೋಕಾಯುಕ್ತ ಭಾಸ್ಕರ್ ರಾವ್ ಅವರು ತಮ್ಮ ಮತ್ತು ತಮ್ಮ ಮಗನ ರಕ್ಷಣೆಗಾಗಿ ತನಿಖೆಯನ್ನು ವಿಷೇಶ ತನಿಖಾ ತಂಡದಿಂದ ಮಾಡಿಸಬೇಕು ಮತ್ತು ಲೋಕಾಯುಕ್ತ ಪೋಲಿಸರು ಮಾಡುತ್ತಿದ್ದ ತನಿಖೆಗೆ ತಡೆ ಒಡ್ಡುವ ಪ್ರಯತ್ನ ಮಾಡುತ್ತಿರುವುದು ಕಾನೂನು ಬಾಹಿರವಾಗಿದೆ. ಈ ಒಂದು ಅಂಶದ ಮೇಲೆಯೇ ಭಾಸ್ಕರ್ ರಾವ್ ಅವರನ್ನು ಶಾಸನ ಸಭೆಯಲ್ಲಿ ಅಭಿಯೋಜನೆಗೆ ಒಳಪಡಿಸುವ ಮೂಲಕ ತೆಗೆದು ಹಾಕಬಹುದಿತ್ತು.

ಕಳ್ಳರ ಗುಂಪಿಗೆ ತನಿಖೆಯ ಹೊಣೆ ನೀಡಲಾಗಿದೆ

ಕಳ್ಳರ ಗುಂಪಿಗೆ ತನಿಖೆಯ ಹೊಣೆ ನೀಡಲಾಗಿದೆ

ಅವರ ಕಾನೂನು ಬಾಹಿರ ಪತ್ರದ ಆಧಾರದ ಮೇಲೆಯೇ ವಿಶೇಷ ತನಿಖಾ ತಂಡ ರಚನೆಯಾಗಿರುವುದು ಇಲ್ಲಿನ ವಿಶೇಷ. ಕಳ್ಳನೇ ಯಾವ ರೀತಿಯ ತನಿಖೆಯಾಗಬೇಕು ಮತ್ತು ಯಾರು ತನಿಖೆ ಮಾಡಬೇಕು ಅಂದು ಹೇಳಿರುವುದು ಮತ್ತು ಅದರಂತೆ ಸರ್ಕಾರ ನಡೆದುಕೊಂಡಿರುವುದು ಶೋಚನೀಯವಾಗಿದೆ.

ಕೇವಲ ಬಲಿಷ್ಠ ಲೋಕಾಯುಕ್ತ ಅಥವಾ ಲೋಕಪಾಲ್ ಒಂದರಿಂದ ನಮ್ಮ ವ್ಯವಸ್ಥೆ ಸುಧಾರಣೆಯಾಗುವುದಿಲ್ಲ. ಈಗ ಲೋಕಾಯುಕ್ತದಲ್ಲಿ ಮತ್ತು ನ್ಯಾಯಾಂಗದಲ್ಲಿ ನಡೆದಿರುವ ಬೆಳವಣಿಗೆಗಳು ನಮ್ಮ ಎಲ್ಲಾ ಅಂಗಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ಸುಧಾರಣೆ ಆಗಬೇಕಾಗಿರುವುದು ಅತ್ಯವಶ್ಯಕವಾಗಿದೆ.
ಪ್ರಸ್ತಾಪಿತ ಕಾಯ್ದೆ ಅಪಾಯಕಾರಿ

ಪ್ರಸ್ತಾಪಿತ ಕಾಯ್ದೆ ಅಪಾಯಕಾರಿ

ಪ್ರಸ್ತಾಪಿತ ಕಾಯ್ದೆಯಲ್ಲಿರುವ ಅಂಶಗಳು ಬಹಳ ಅಪಾಯಕಾರಿಯಾಗಿದ್ದು, ಲೋಕಾಯುಕ್ತ ಮತ್ತು ಉಪಲೋಕಾಯುಕ್ತರನ್ನು ಒಂದನೇ ಮೂರಷ್ಟು ಬಹುಮತದಿಂದ ವಜಾಗೊಳಿಸುವ ಅಧಿಕಾರವು ಇಡೀ ಲೋಕಾಯುಕ್ತ ಸಂಸ್ಥೆಯ ಸ್ವಾಯುತ್ತತೆಯನ್ನೇ ಕಿತ್ತು ಹಾಕುತ್ತದೆ. ಈ ಕಾಯ್ದೆಯನ್ನು ಪ್ರಸ್ತುತ ಬೆಂಬಲಿಸುತ್ತಿರುವವರು ಕೂಡ ಅಷ್ಟೇ ದೋಷದಿಂದ ಕೂಡಿದ್ದಾರೆ.

ಆದರೆ, ಈಗಿನ ಕಾಯ್ದೆಯಲ್ಲಿನ ಪ್ರಕಾರ ಯಾವುದೇ ಲೋಕಾಯುಕ್ತರನ್ನಾಗಲಿ ಅಥವಾ ನ್ಯಾಯಾಧೀಶರನ್ನಾಗಲಿ ಇದುವರೆಗೆ ಜಾರಿಗೊಳಿಸಿದ ಉದಾಹರಣೆ ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿ ಇಲ್ಲ

ಸರವಣ ರಾಜೀನಾಮೆ ನೀಡಲಿ

ಸರವಣ ರಾಜೀನಾಮೆ ನೀಡಲಿ

ಮೇಲ್ಮನೆ ಸದಸ್ಯರಾದ ಜೆಡಿಎಸ್ ನ ಟಿ. ಎನ್. ಸರವಣ, ತಮ್ಮನ್ನೂ ಕೂಡ ಅಶ್ವಿನ್ ವೈ. ಕಪ್ಪ ನೀಡುವಂತೆ ಸಂಪರ್ಕಿಸಿದ್ದರೆಂದು ಸದನದಲ್ಲಿ ಬಹಿರಂಗಪಡಿಸಿದ್ದಾರೆ. ಇದು ಅಪರಾಧ ಮತ್ತು ಇಡೀ ರಾಜ್ಯದ ಹಿತಾಸಕ್ತಿಗೆ ಧಕ್ಕೆ ತರುವಂತಹುದು. ಈ ಕೂಡಲೇ ಅವರು ದೂರು ದಾಖಲಿಸಬೇಕು ಮತ್ತು ತಮ್ಮ ಕರ್ತವ್ಯ ಲೋಪಕ್ಕಾಗಿ ಈ ಕೂಡಲೇ ರಾಜಿನಾಮೆ ನೀಡಬೇಕು ಎಂದು ಲೋಕಸತ್ತಾ ಪಕ್ಷ ಒತ್ತಾಯಿಸುತ್ತದೆ.

English summary
Bhaskar Rao should step down as the Lokayukta. One of the first responsibilities to any high office is to protect its integrity, even at a personal cost. Karnataka doesn't need new Lokayukta Law said Loksatta National Vice President Dr. Ashwin Mahesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X