• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ ಜೀ ನೀವು ಬಂದ್ರೆ 28ಕ್ಕೆ 28 ಬೆಂಬಲಿಗರಿಂದ ಟ್ವಿಟ್ಟರ್ ಟ್ರೆಂಡ್

|

ಬೆಂಗಳೂರು, ಮಾರ್ಚ್ 24: 2019ರ ಲೋಕಸಭೆ ಚುನಾವಣೆಯಲ್ಲಿ ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪರ್ಧಿಸುತ್ತಿದ್ದಾರೆ. ಕಳೆದ ಬಾರಿ ವಡೋದರಾ ಹಾಗೂ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಿ ಎರಡು ಕಡೆ ಗೆಲುವು ಸಾಧಿಸಿದ್ದ ಮೋದಿ ಅವರು ಈ ಬಾರಿ ವಡೋದರಾ ಬದಲು ಮತ್ತೊಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸುವಂತೆ ಬಿಜೆಪಿ ಬೆಂಬಲಿಗರು ಮನವಿ ಮಾಡಿದ್ದಾರೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಈ ನಿಟ್ಟಿನಲ್ಲಿ ಭಾನುವಾರಂದು ಟ್ವಿಟ್ಟರ್ ನಲ್ಲಿ ಮೋದಿ ಅವರು ಬೆಂಗಳೂರಿನಿಂದ ಸ್ಪರ್ಧಿಸಲಿ ಎಂದು ಕೋರಿ 'ನೀವು ಬಂದ್ರೆ 28ಕ್ಕೆ28' ಎಂದು ಹ್ಯಾಶ್ ಟ್ಯಾಗ್ ಬಳಸಿ ಟ್ವಿಟ್ಟರ್ ಟ್ರೆಂಡ್ ಮಾಡಲಾಗುತ್ತಿದೆ. ಟೀಂ ಮೋದಿಯ ಮುಂದಾಳು ಚಕ್ರವರ್ತಿ ಸೂಲಿಬೆಲೆ ಅವರು ಟ್ವಿಟ್ಟರ್ ನಲ್ಲಿ ಈ ಟ್ರೆಂಡಿಂಗ್ ಗೆ ಚಾಲನೆ ನೀಡಿ, ದಿವಂಗತ ಅನಂತ್ ಕುಮಾರ್ ಅವರು ಸಂಸದರಾಗಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕೋರಿದ್ದಾರೆ.

ಬೆಂಗಳೂರಿನಿಂದ ಮೋದಿ ಸ್ಪರ್ಧಿಸಿದರೆ ಸೋಲು ಗ್ಯಾರಂಟಿ: ಸೌಮ್ಯಾ ರೆಡ್ಡಿ

* 'ಕರ್ನಾಟಕ ರಾಜ್ಯ ಎಂದರೆ ಬರೀ ತಂದೆ ಮಕ್ಕಳ ಮೂರು ಜಿಲ್ಲೆ ಮಾತ್ರವಲ್ಲ ಎಂಬುದನ್ನು ಮುಖ್ಯಮಂತ್ರಿಗೆ ಮನವರಿಕೆ ಮಾಡಲು ನೀವೇ ಬರಬೇಕು',

* ಕರ್ನಾಟಕ ರಾಜ್ಯ ಎಂದರೆ ಬರೀ ತಂದೆ ಮಕ್ಕಳ ಮೂರು ಜಿಲ್ಲೆ ಮಾತ್ರವಲ್ಲ ಎಂಬುದನ್ನು ಮುಖ್ಯಮಂತ್ರಿಗೆ ಮನವರಿಕೆ ಮಾಡಲು ನೀವೇ ಬರಬೇಕು'

* 'ಮೋದಿ ಜಿ ದಕ್ಷಿಣ ಭಾರತದಿಂದ ಹೆಚ್ಚು ಸ್ಥಾನ ನಾವು ತಾಯಿ ಭಾರತಿಗೆ ಅರ್ಪಿಸಬೇಕು, ಅದು ನೀವು ಕರ್ನಾಟಕದಲ್ಲಿ ಚುನಾವಣೆಗೆ ನಿಂತರೆ ಸಾಧ್ಯವಾಗುತ್ತದೆ'

* 'ಮೋದಿ ಜಿ ಗುಲಾಮರು ಕರ್ನಾಟಕವನ್ನು ನಾಲಾಯಕರ ಕೈಗೆ ಕೊಟ್ಟಿದ್ದಾರೆ. ನೀವು ನಮ್ಮ ರಾಜ್ಯಕ್ಕೆ ಬನ್ನಿ ಕರ್ನಾಟಕವನ್ನು ಭಾರತಮಾತೆಗೆ ಕೊಡ್ತೀವಿ' ಎಂಬಿತ್ಯಾದಿ ವಾಕ್ಯಗಳನ್ನು ಬಳಸಿ ಅನೇಕ ಮಂದಿ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದಲ್ಲೆಡೆ ಕರೆಂಟ್ ನೀಡಲು ಬನ್ನಿ

ಗುಜರಾತಿನಲ್ಲಿ ನೀವು 15 ವರ್ಷದ ಹಿಂದೆಯೇ 24/7 ಕರೆಂಟ್ ಕೊಟ್ಟಿದ್ದೀರಿ. ಕರ್ನಾಟಕದಲ್ಲಿ ಅದಿನ್ನೂ ಕನಸಾಗಿಯೇ ಇದೆ. ನಮ್ಮ ರಾಜ್ಯಕ್ಕೆ ಬನ್ನಿ ಮೋದಿಜಿ #ನೀವ್_ಬಂದ್ರೆ_28ಕ್ಕೆ28

ಅಮೇಥಿಯಲ್ಲಿ ರಾಹುಲ್ ಗಾಂಧಿ ಹೆದರಿದ್ದಾರೆ.

ಸ್ಮೃತಿ ಇರಾನಿ ಅವರು ಮತ್ತೊಮ್ಮೆ ಸ್ಪರ್ಧಿಸುವ ಮೂಲಕ ಅಮೇಥಿಯಲ್ಲಿ ರಾಹುಲ್ ಗಾಂಧಿ ಹೆದರುವಂತೆ ಮಾಡಿದ್ದೀರಿ. ಈಗ ಭಯದಿಂದ ದಕ್ಷಿಣದಲ್ಲಿ ಸೀಟು ಹುಡುಕುತ್ತಿದ್ದಾರೆ. ನೀವು ಕರ್ನಾಟಕದಿಂದ ಸ್ಪರ್ಧಿಸಿ ಸರಿಯಾದ ಹೊಡೆತ ನೀಡಿ.

ಬೆಂ ದಕ್ಷಿಣ ಕ್ಷೇತ್ರದಲ್ಲಿ ಹೆಚ್ಚಿನ ಅಂತರದಿಂದ ಗೆಲುವು ಖಚಿತ: ಆರ್ ಅಶೋಕ

ಎಸ್ಟಿ ತಳವಾರ ಸಮುದಾಯಕ್ಕೆ ನೆರವಾದ ಮೋದಿ

ತಳವಾರ ಸಮುದಾಯದ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ ಮೋದಿ ಜೀ ಕರುನಾಡಿನಿಂದ ಸ್ಪರ್ಧಿಸಿದರೆ ನಾವು ಹಗಲು ರಾತ್ರಿ ದುಡಿದು ರಾಜ್ಯದ 28 ಕ್ಷೇತ್ರವನ್ನು ಗೆಲ್ಲಿಸಿಕೊಡುತ್ತೇವೆ.

ಕಾಳು ಮೆಣಸು ಬೆಳೆಗಾರರಿಗೆ ನೆರವಾದ ಮೋದಿ

ರಾಜ್ಯದ ಕಾಳುಮೆಣಸು ಬೆಳೆಗಾರರ ಮನವಿಗೆ ತಕ್ಷಣವೇ ಸ್ಪಂದಿಸಿ ಕಾಳುಮೆಣಸಿಗೆ ಬೆಂಬಲ ಬೆಲೆ ಘೋಷಿಸಿದ್ದಲ್ಲದೇ, ಹೊರ ದೇಶಗಳಿಂದ ಆಮದಾಗುತ್ತಿದ್ದ ಕಾಳುಮೆಣಸನ್ನ ನಿಷೇಧಿಸಿ, ಕಾಳುಮೆಣಸು ಧಾರಣೆಯಲ್ಲಿ ಏರಿಕೆಯಾಗುವಂತೆ ಮಾಡಿ ಕರುನಾಡಿನ ರೈತರ ಮನವಿಗೆ ಕಿವಿಯಾದ ಮೋದಿ ಅವರು ರಾಜ್ಯದಿಂದ ಸ್ಪರ್ಧಿಸಲಿ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸ್ಥೂಲ ಪರಿಚಯ

ಆಯುಷ್ಮಾನ್ ಭಾರತ ತಂದ ಮೋದಿ

ಭಾರತದೆಲ್ಲೆಡೆ ಆಯುಷ್ಮಾನ್ ಭಾರತ್ ಯೋಜನೆ ಸಾಕಾರಗೊಂಡಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೈಜೋಡಿಸಿ ಹೇಗೆ ಒಂದು ಒಳ್ಳೆ ಯೋಜನೆ ಯಶಸ್ವಿಗೊಳಿಸಬಹುದು ಎಂಬುದು ಇದರಿಂದ ತಿಳಿಯುತ್ತದೆ.

ಕರ್ನಾಟಕಕ್ಕೆ ಒಲಿದ ಅನೇಕ ರೈಲು ಯೋಜನೆಗಳು

ಕೇಂದ್ರ ಸರ್ಕಾರದಿಂದ ಸುಮಾರು 789 ಕೋಟಿ ರು ರೈಲ್ವೆ ಇಲಾಖೆ ಅಭಿವೃದ್ಧಿಗೆ ನೀಡಲಾಗಿದ್ದು, ಅನೇಕ ಯೋಜನೆಗಳು ಮಂಜೂರಾಗಿದೆ. ಹೀಗಾಗಿ, ಮೋದಿ ಇಲ್ಲಿ ಸ್ಪರ್ಧಿಸಿದರೆ ಇಡೀ ದಕ್ಷಿಣ ಭಾರತಕ್ಕೆ ನೆರವಾಗಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lok Sabha Elections 2019 : Twitter trend Neevu Bandre(if you come) 28 out of 28 by Modi Bhakts. Bengaluru south is waiting for you Modi Ji says trending tweets requesting PM Modi to contest from Bangalore south. We would like to have you as our candidate for Bengaluru south. If that happens we promise you of 28 seats from Karnataka! Please consider Tweeted Chakaravathy Sulibele.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more