ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಮುವಾದಿ ಶಕ್ತಿಗಳನ್ನು ತಿರಸ್ಕರಿಸಿ: ಬಿ ಕೆ ಹರಿಪ್ರಸಾದ್

|
Google Oneindia Kannada News

ಬೆಂಗಳೂರು, ಏಪ್ರಿಲ್ 7: ಕೋಮುವಾದಿ ಶಕ್ತಿಗಳನ್ನು ತಿರಸ್ಕರಿಸುವ ಮೂಲಕ ದೇಶದ ಅಭಿವೃದ್ದಿಗೆ ಕೊಡುಗೆಯನ್ನು ನೀಡಿ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ಕೆ ಹರಿಪ್ರಸಾದ್ ಕರೆ ನೀಡಿದರು.

ನಗರದ ಬಿಟಿಎಂ ಲೇಔಟ್ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರಗಳಲ್ಲಿಂದು ಬಿರುಸಿನ ಪ್ರಚಾರ ನಡೆಸಿದ ಅವರು ಭರ್ಜರಿ ರೋಡ್ ಶೋ ನಡೆಸಿದರು. ಮಾಜಿ ಗೃಹ ಸಚಿವ ಹಾಗೂ ಬಿಟಿಎಂ ಲೇಔಟ್ ಶಾಸಕರಾದ ರಾಮಲಿಂಗಾ ರೆಡ್ಡಿ, ಜಯನಗರ ಶಾಸಕಿ ಸೌಮ್ಯರೆಡ್ಡಿ ಅವರ ಜೊತೆಯಲ್ಲಿ ಬಿರುಸಿನ ರೊಡ್ ಶೋ ನಡೆಸಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನಂತರ ಮಾತನಾಡಿದ ಅವರು, ದೇಶದಲ್ಲಿ ಕೋಮುವಾದಿ ಶಕ್ತಿಗಳನ್ನು ತಿರಸ್ಕರಿಸುವ ಸಮಯ ಬಂದಿದೆ. ದೇಶದ ಅಭಿವೃದ್ದಿಗೆ ಕಾಂಗ್ರೆಸ್ ಹಲವಾರು ಕೊಡುಗೆಗಳನ್ನು ನೀಡಿದೆ. ಆದರೆ, ಕೇವಲ ಧರ್ಮದ ಆಧಾರದ ಮೇಲೆ ಮತ ಕೇಳುತ್ತಿರುವ ಬಿಜೆಪಿ ದೇಶಕ್ಕೆ ತಾನು ಮಾಡಿರುವ ಹಾನಿಗಳನ್ನು ಮರೆಮಾಚುತ್ತಿದೆ ಎಂದರು.

ಇಂಡಿಯಾ ಟಿವಿ ಸಮೀಕ್ಷೆ: ಮ್ಯಾಜಿಕ್ ನಂಬರ್ 272 ದಾಟಲಿದೆ ಎನ್ಡಿಎ ಇಂಡಿಯಾ ಟಿವಿ ಸಮೀಕ್ಷೆ: ಮ್ಯಾಜಿಕ್ ನಂಬರ್ 272 ದಾಟಲಿದೆ ಎನ್ಡಿಎ

ದೇಶದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಾಗಿದೆ, ಅಭಿವೃದ್ದಿ ಕೇವಲ ಕೆಲವೇ ಜನಗಳ ಅಭಿವೃದ್ದಿಯಾಗಿದ್ದು ಜನ ಸಾಮಾನ್ಯರ ಬಗ್ಗೆ ತೀವ್ರ ನಿಷ್ಕಾಳಜಿಯನ್ನು ತೋರಿಸುತ್ತಿದೆ. ಇಂತಹ ಶಕ್ತಿಗಳನ್ನು ಮಟ್ಟಹಾಕಲು ಸರಿಯಾದ ಸಮಯ ಬಂದಿದ್ದು, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ದೇಶದ ಅಭಿವೃದ್ದಿಗೆ ಸಾತ್ ನೀಡಿ ಎಂದು ಮನವಿ ಮಾಡಿದರು.

ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ

ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ

ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳಲ್ಲಿ ಯಾವುದೇ ಗೊಂದಲವಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಿದ್ದೇವೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಯ ಪರ ಬಿರುಸಿನ ಪ್ರಚಾರವನ್ನು ಕೈಗೊಂಡಿದ್ದೇವೆ ಎಂದರು.

 ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ

ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ನಾವು ನಮ್ಮ ಚುನಾವಣಾ ಪ್ರಚಾರವನ್ನು ಬಿರುಸುಗೊಳಿಸಿದ್ದೇವೆ. ನಮ್ಮ ಅಭ್ಯರ್ಥಿ ಯಾಗಿರುವ ಬಿ ಕೆ ಹರಿಪ್ರಸಾದ್ ಅವರ ಗೆಲವು ನಿಶ್ಚಿತ ಎಂದರು.

ಮುಂಜಾನೆಯಿಂದಲೇ ರೋಡ್ ಶೋ ಜಾರಿ

ಮುಂಜಾನೆಯಿಂದಲೇ ರೋಡ್ ಶೋ ಜಾರಿ

ಇಂದು ಬೆಳಗಿನ ಜಾವದಿಂದಲೇ ಪ್ರಚಾರ ಕೈಗೊಂಡ ಬಿ ಕೆ ಹರಿಪ್ರಸಾದ್ ಅವರು ಹೆಚ್ ಎಸ್ ಆರ್ ಲೇಔಟ್ ನ ಅಗರ ಕೆರೆ, ಸೆಂಟ್ ಥಾಮಸ್ ಫೆರೋನ್ ಚರ್ಚ್‍ಗೆ ಭೇಟಿ ನೀಡಿ ಮತಯಾಚಿಸಿದರು. ಗುರಪ್ಪನ ಪಾಳ್ಯ, ಮದರ್ ಸಾಬ್ ಲೇಔಟ್, ನಾರಾಯಣಪ್ಪ ಗಾರ್ಡ್‍ನ್, ನಿಮಾನ್ಸ್ ಲೇಔಟ್, ಅರಸು ಕಾಲೋನಿ, ಕಾರ್ಪೋರೇಷನ್ ಕಾಲೋನಿ, ಇಂದಿರಾಗಾಂಧಿ ಸ್ಲಮ್, ಪುಟ್ಟೇನಪಾಳ್ಯದಲ್ಲಿ ಬೆಳಗ್ಗೆ ರೋಡ್ ಶೋ ನಡೆಸಿದರು.

ಹಲವಾರು ಪ್ರದೇಶಗಳಲ್ಲಿ ರೋಡ್ ಶೋ

ಹಲವಾರು ಪ್ರದೇಶಗಳಲ್ಲಿ ರೋಡ್ ಶೋ

ಭಾನುವಾರದ ಮಧ್ಯಾಹ್ನದ ವೇಳೆ, ಲಕ್ಕಸಂದ್ರ, ಚಂದ್ರಪ್ಪ ನಗರ, ಮಹಾಲಿಂಗೇಶ್ವರ ಲೇಔಟ್, ಆಡುಗೋಡಿ, ಕೋರಮಂಗಲ, ರಾಜೇಂದ್ರ ನಗರ, ಈಜಿಪುರ, ಮಡಿವಾಳ, ಸಿದ್ದಾರ್ಥ ಕಾಲೋನಿ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ರೋಡ್ ಶೋ ನಡೆಸಿದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜಾತ್ಯತೀತ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಚಿಂತಕರು, ಬುದ್ಧಿಜೀವಿಗಳು ಮತ್ತು ಸಾಹಿತಿಗಳು ಕರೆ ನೀಡಿರುವುದರಿಂದ ಬಿಕೆ ಹರಿ ಪ್ರಸಾದ್ ಅವರಿಗೆ ಹೆಚ್ಚಿನ ಬಲ ಬಂದಿದೆ.

English summary
Lok Sabha Elections 2019 : Reject Communal forces and vote for secular forces said Congress candidate for Bangalore south BK Hariprasad during his campaign today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X