• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ ಭಕ್ತರನ್ನು ಕೆಣಕಿದ್ದ ರಮ್ಯಾಗೆ ಟ್ವೀಟ್ ಬಾಣ ಬಿಟ್ಟ ಜಗ್ಗೇಶ್

|

ಸದಾ ಒಂದಿಲ್ಲೊಂದು ವಿವಾದಾತ್ಮಕ ಟ್ವೀಟ್ ಗಳ ಮೂಲಕ ಸಕ್ರಿಯವಾಗಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳನ್ನು ಕೆರಳಿಸುವ ಟ್ವೀಟ್ ಹಾಕಿದ್ದು ಗೊತ್ತಿರಬಹುದು. ಈ ಟ್ವೀಟ್ ಗೆ ಪ್ರತಿಯಾಗಿ ನಟ ಕಮ್ ರಾಜಕಾರಣಿ ಜಗ್ಗೇಶ್ ಅವರು ತಮ್ಮದೇ ಸ್ಟೈಲಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮೋದಿ ಮತ್ತು ಬಿಜೆಪಿ ವಿರುದ್ಧ ಈ ರೀತಿ ಟ್ವೀಟ್‌ಗಳನ್ನು ಮಾಡುವ ರಮ್ಯಾ ಅವರು ಇದಕ್ಕೆ ಬರುವ ಪ್ರತಿಕ್ರಿಯೆಗಳಿಗೆ ಪ್ರತ್ಯುತ್ತರ ಕೊಡುವ ಗೋಜಿಗೆ ಹೋಗುವುದಿಲ್ಲ. ಆದರೆ, ಬಿಜೆಪಿ ಬೆಂಬಲಿಗರು ಮಾತ್ರ, ರಮ್ಯಾ ಅವರ ಪ್ರತಿ ಟ್ವೀಟ್ ಗಮನಿಸುತ್ತಲೇ ಇರುತ್ತಾರೆ.

ನರೇಂದ್ರ ಮೋದಿ ಬೆಂಬಲಿಗರನ್ನು 'ಮೂರ್ಖರು' ಎಂದು ಕರೆದ ರಮ್ಯಾ

ಕಾಂಗ್ರೆಸ್​ ಸೋಶಿಯಲ್​ ಮೀಡಿಯಾ ವಿಭಾಗದ ಮುಖ್ಯಸ್ಥೆ, ಮಂಡ್ಯದ ಮಾಜಿ ಸಂಸದೆ, ನಟಿ ರಮ್ಯಾ ವಿರುದ್ಧ ನಟ ಜಗ್ಗೇಶ್​ಅವರು ಮತ್ತೊಮ್ಮೆ ವಿರುದ್ಧ ಗುಡುಗಿದ್ದಾರೆ.

ಜಗ್ಗೇಶ್ -ರಮ್ಯಾ ಟ್ವೀಟ್ ವಾರ್

ಜಗ್ಗೇಶ್ -ರಮ್ಯಾ ಟ್ವೀಟ್ ವಾರ್

ಹಾಗೆ ನೋಡಿದರೆ, ಜಗ್ಗೇಶ್ ಅವರಿಗೆ ಟ್ವಿಟ್ಟರ್ ನ ಮೊದಲ ಪಾಠ ಹೇಳಿಕೊಟ್ಟಿದ್ದು ರಮ್ಯಾ, ನೀರ್ ದೋಸೆ ಸಮಯದಲ್ಲಿ ಟ್ವಿಟ್ಟರ್ ಬಗ್ಗೆ ಕಲಿತ ಜಗ್ಗೇಶ್ ಅವರು ಈಗ ಟ್ವೀಟ್ ಬಾಣಗಳನ್ನು ಬಿಡುತ್ತಿದ್ದಾರೆ. ಪ್ರತಿನಿತ್ಯ ನೀತಿ ಬೋಧನೆ, ವಚನ, ಗೀತೆ, ರಾಯರ ಬಗ್ಗೆ ತಮ್ಮ ಅಭಿಮಾನಿಗಳಿಗೆ ಹೇಳುತ್ತಿದ್ದಾರೆ. ಆದರೆ, ಟ್ವಿಟ್ಟರ್ ನಲ್ಲೇ ನವರಸಗಳನ್ನು ಹರಿಸುತ್ತಿರುವ ನಟ ಕಮ್ ರಾಜಕಾರಣಿ ಜಗ್ಗೇಶ್, ಅವರು ಅಧಿಕ ಪ್ರಸಂಗಿತನ ಮಾಡಿದ ಅಭಿಮಾನಿಗಳನ್ನು ಬ್ಲಾಕ್ ಮಾಡಿದ ಪ್ರಸಂಗಗಳು ಇವೆ.

ಯತಃರಾಜತಥಃಪ್ರಜ!

ಸಹವಾಸ ದೋಷದಲ್ಲಿ ಸನ್ಯಾಸಿಕೆಟ್ಟ!

ಗಾದೆ ಮಾತು ನೆನಪಿದೆಯಾ?

ಸಹವಾಸ ಯಾರದ್ದು!ಸನ್ಯಾಸಿ ಯಾರು!

ಯಜಮಾನಿಗೆ ಮಾತಾಡಲು ಬರೋಲ್ಲಾ!

ಅಂದ ಮೇಲೆ ಅವರಮನೆ ಮುಸುರೆ ತಿಕ್ಕುವವರಿಗೆ ಬರುತ್ತದೆಯೇ! ಎಂದು ಟ್ವೀಟ್ ಮಾಡಿದ ಜಗ್ಗೇಶ್

ಮನುಷ್ಯರಿಗೆ ಬುದ್ಧಿ ಹೇಳಬಹುದು

ಆಕೆ ಮಾನಸಿಕ ಅಸ್ವಸ್ಥೆ!, ಯಾರಿಗೆ ವಂಶವಾಹಿನಿ ಅರಿವಿರುತ್ತದೋ ಅವರು ಜವಾಬ್ದಾರಿ ಮನುಷ್ಯರು! ಮನುಷ್ಯರಿಗೆ ಬುದ್ಧಿ ಹೇಳಬಹುದು ಮೃಗಕ್ಕೆ ಅಲ್ಲಾ!v

ಮೋದಿ ಬಗ್ಗೆ ಟೀಕಿಸುವ ಮುನ್ನ ಉತ್ತರಿಸಿ

ಮಂಡ್ಯದ ಮಾಜಿ ಸಂಸದೆಯಾದ ನೀವು ಮತದಾನವನ್ನೆ ಮಾಡಿಲ್ಲ. ಮೋದಿ ಅವರನ್ನು ಟೀಕಿಸುವ ಮೊದಲು ಈ ಬಗ್ಗೆ ಉತ್ತರ ನೀಡಿ ಎಂದು ಟ್ವೀಟ್.

ಮೂರ್ಖನ್ ಬೆನ್ನಗ್ ಕಟ್ಟಿಕೊಂಡಿದ್ದಾಳೆ

ಜಗ್ಗೇಶ್ ಟ್ವೀಟ್ ಗೆ ಬೆಂಬಲ ವ್ಯಕ್ತಪಡಿಸಿ, ರಮ್ಯಾ ವಿರುದ್ಧ ಕಿಡಿಕಾರಿದ ಉಮಾ ಪ್ರಕಾಶ್ ಎಂಬುವವರು, ಇವಳೆಂಥ ಮೂರ್ಖನ್ ಬೆನ್ನಗ್ ಕಟ್ಟಿಕೊಂಡಿದ್ದಾಳೆ ಅನ್ನೋದೆ ಗೊತ್ತಿಲ್ಲ ...ಮೋದಿ followers ಬಗ್ಗೆ ಮಾತಾಡ್ತಳೆ😡😡 ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಗ್ಗಣ್ಣ, ಆಕೆ ಇತ್ತಿಚೆಗೆ ತುಂಬಾ ಅತಿಯಾಗಿ ಮೋದಿಯವರ ಬಗ್ಗೆ ಅವಹೇಳನ ಮಾಡುತ್ತ ಇದ್ದಾಳೆ..ತುಂಬಾ ಸಿಟ್ಟು ಬರುತ್ತೆ , ಇದಕ್ಕೆ ಕಾಲವೇ ಉತ್ತರಿಸುತ್ತೆ ಅಂತ ಸುಮ್ಮನೆ ಇರಬೇಕೆ ? ಅಥವಾ ಕ್ಯಾಕರಿಸಿ ಬಾಯಿಗೆ ಬಂದ ಹಾಗೆ ಉಗಿಬೇಕೆ ?

— Harsha Surathkal (@harshasurathkal) March 14, 2019

ಇದಕ್ಕೆ ಕಾಲವೇ ಉತ್ತರಿಸುತ್ತೆ

ಇದಕ್ಕೆ ಕಾಲವೇ ಉತ್ತರಿಸುತ್ತೆ ಅಂತ ಸುಮ್ಮನೆ ಇರಬೇಕೆ ? ಅಥವಾ ಕ್ಯಾಕರಿಸಿ ಬಾಯಿಗೆ ಬಂದ ಹಾಗೆ ಉಗಿಬೇಕೆ ?

ಕಳ್ಳರ ಮಾತು ಯಾರು ಕೇಳ್ತಾರೆ

ಬೈಯೋದು ಬೈಕೋಳೋದು .ಮಾಡಿದರೆ ಅವರನ್ನ ನಾವೇ ಜೀವಂತ ಇಟ್ಟಂತೆ .ಇವರನ್ನ ಸತ್ತ ವರ ಪಾಲಿಗೆ ಸೇರಿಸಿ ಮರೆಯುವುದು ಸರಿ ಅನಿಸುತ್ತೆ- ಉಪಾದ್ರಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress Social media chief Ramya alias Divya Spandana often triggered Modi followers with her tweets. Her latest tweet on Modi Bhakts has gone wrong, BJP leader Jaggesh reacted saying she has lost her mind.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more