ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

12 ಕ್ಷೇತ್ರ ಕೇಳಿದ್ದಕ್ಕೆ 5 ಜೆಡಿಎಸ್ ಗೆ, ಕಾಂಗ್ರೆಸ್ ರಣತಂತ್ರ

|
Google Oneindia Kannada News

Recommended Video

Lok Sabha Elections 12 ಕ್ಷೇತ್ರಗಳನ್ನ ಕೇಳಿದ್ದ ಜೆಡಿಎಸ್ ಗೆ ಕೇವಲ 5 ಕ್ಷೇತ್ರಗಳನ್ನ ಕೊಡಲು ಕಾಂಗ್ರೆಸ್ ಚಿಂತನೆ

ಬೆಂಗಳೂರು, ಫೆಬ್ರವರಿ 05: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಲಿಗೆ ಮೈತ್ರಿ ಸರ್ಕಾರವು ಬಲ ಹಾಗೂ ದೌರ್ಬಲ್ಯ ಎರಡು ಆಗಬಲ್ಲದು. ಪ್ರಮುಖವಾಗಿ 28 ಕ್ಷೇತ್ರಗಳ ಪೈಕಿ ಯಾವ ಯಾವ ಕ್ಷೇತ್ರದಲ್ಲಿ ಮೈತ್ರಿ ಸರ್ಕಾರದ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಯಬೇಕು, ಯಾವ ಕ್ಷೇತ್ರದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಬೇಕು ಎಂಬ ಲೆಕ್ಕಾಚಾರ ಎರಡು ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಲೋಕಸಭೆ ಚುನಾವಣೆಗೂ ಮುನ್ನ ಇಲ್ಲಿ ತನಕ ಬಂದಿರುವ ಸಮೀಕ್ಷೆಗಳು, ಆಂತರಿಕ ಸಮೀಕ್ಷೆಗಳನ್ನು ಆಧಾರವಾಗಿಟ್ಟುಕೊಂಡು ಕಾಂಗ್ರೆಸ್ ತನ್ನ ಕಾರ್ಯತಂತ್ರ ರೂಪಿಸುತ್ತಿದೆ. ಸದ್ಯಕ್ಕೆ ಲಭ್ಯ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ಜೆಡಿಎಸ್ ಗೆ 3 ರಿಂದ 5 ಕ್ಷೇತ್ರಗಳನ್ನು ಮಾತ್ರ ಬಿಟ್ಟುಕೊಡುವುದು ಉತ್ತಮ ಎಂಬ ನಿರ್ಧಾರಕ್ಕೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಬಂದಿದ್ದಾರೆ. ಈ ಕುರಿತಂತೆ ಸಂಕ್ಷಿಪ್ತ ವರದಿಯೊಂದನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಸಲ್ಲಿಸಲಾಗಿದೆ.

ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಕರ್ನಾಟಕದ ಉಸ್ತುವಾರಿ ಕೆಸಿ ವೇಣುಗೋಪಾಲ್ ಅವರು ದೆಹಲಿಯಲ್ಲಿ ಇತ್ತೀಚೆಗೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಈ ವಿಷಯ ತಿಳಿಸಿದ್ದಾರೆ.

ಯಾವ ಯಾವ ಕ್ಷೇತ್ರಗಳು ಜೆಡಿಎಸ್

ಯಾವ ಯಾವ ಕ್ಷೇತ್ರಗಳು ಜೆಡಿಎಸ್

ಮಂಡ್ಯ : ಹಾಲಿ ಸಂಸದ ಎಲ್ ಆರ್ ಶಿವರಾಮೇಗೌಡ(ಕಾಂಗ್ರೆಸ್)
ಹಾಸನ : ಎಚ್ ಡಿ ದೇವೇಗೌಡ (ಜೆಡಿಎಸ್)
ಚಿಕ್ಕಬಳ್ಳಾಪುರ: ಎಂ ವೀರಪ್ಪಮೊಯ್ಲಿ (ಕಾಂಗ್ರೆಸ್)
ಶಿವಮೊಗ್ಗ: ಬಿ. ವೈ ರಾಘವೇಂದ್ರ (ಬಿಜೆಪಿ)
ತುಮಕೂರು : ಎಸ್. ಪಿ ಮುದ್ದಹನುಮೇಗೌಡ (ಕಾಂಗ್ರೆಸ್)

ಈ ಐದು ಕ್ಷೇತ್ರಗಳಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಯಾವುದೇ ಅಭ್ಯಂತರವಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಚಿಕ್ಕಬಳ್ಳಾಪುರ ಹಾಗೂ ತುಮಕೂರಿನಲ್ಲಿ ಕಾಂಗ್ರೆಸ್ ಸಂಸದರಿದ್ದು ಈ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ದೇವೇಗೌಡ ಅವರು ಸ್ಪರ್ಧಿಸಲಿ ಎಂದು ಆಫರ್ ನೀಡಿದೆ.

ದೇವೇಗೌಡರು ಬೆಂಗಳೂರಲ್ಲಿ ಸ್ಪರ್ಧಿಸಬಾರದೇಕೆ?

ದೇವೇಗೌಡರು ಬೆಂಗಳೂರಲ್ಲಿ ಸ್ಪರ್ಧಿಸಬಾರದೇಕೆ?

ಮಾಜಿ ಪ್ರಧಾನಿ ದೇವೇಗೌಡರು ಹಾಸನ ಕ್ಷೇತ್ರವನ್ನು ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟು, ಬೇರೆ ಕ್ಷೇತ್ರದತ್ತ ಮುಖ ಮಾಡುವ ಸಾಧ್ಯತೆಗಳಿವೆ. ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವ ಸುದ್ದಿಯಿದೆ. ಆದರೆ, ದೇವೇಗೌಡರು ಬೆಂಗಳೂರಿನಲ್ಲಿ ಸ್ಪರ್ಧಿಸಿದರೆ ಕಾಂಗ್ರೆಸ್ಸಿನ ಲೆಕ್ಕಾಚಾರ ಉಲ್ಟಾ ಆಗಲಿದೆ. ಇನ್ನು ಮೈಸೂರು ಕ್ಷೇತ್ರವನ್ನು ಕೇಳಿದರೂ, ಬಿಟ್ಟು ಕೊಡುವುದು ಬೇಡ. ಜೆಡಿಎಸ್ ಆ ಕ್ಷೇತ್ರದಲ್ಲಿ ಗೆಲುವು ಸಾಧಿಸಿಲ್ಲ. ಚಿಕ್ಕಬಳ್ಳಾಪುರ ಅಥವಾ ತುಮಕೂರು ಕ್ಷೇತ್ರವನ್ನು ಬಿಟ್ಟು ಕೊಡೋಣ ಎಂದು ಕಾಂಗ್ರೆಸ್ ನಿರ್ಧರಿಸಿರುವ ಸುದ್ದಿ ಬಂದಿದೆ ಇದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೇಡಿಕೆಯಾಗಿದೆ.

ಜೆಡಿಎಸ್ ಮೂಲ ಬೇಡಿಕೆ ಏನಾಗಿತ್ತು?

ಜೆಡಿಎಸ್ ಮೂಲ ಬೇಡಿಕೆ ಏನಾಗಿತ್ತು?

ಜೆಡಿಎಸ್ ನಾಯಕ ಡ್ಯಾನಿಶ್ ಅಲಿ ಅವರು ಪಕ್ಷದ ಪರವಾಗಿ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಲೋಕಸಭೆ ಚುನಾವಣೆ ಟಿಕೆಟ್ ಹಂಚಿಕೆ ಕುರಿತಂತೆ ಚರ್ಚಿಸಿದ್ದರು. ಈ ಸಂದರ್ಭದಲ್ಲಿ ಜೆಡಿಎಸ್ ಗೆ 12 ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟು ಕೊಡುವಂತೆ ಕೇಳಿಕೊಂಡಿದ್ದಾರೆ. ಕೊನೆಗೆ 12 ಕ್ಷೇತ್ರಗಳ ಬದಲು 8 ಕ್ಷೇತ್ರಗಳು ಮಾತ್ರ ಸಿಗುವ ಭರವಸೆ ಇತ್ತು. ಆದರೆ, ಈಗ 5 ಕ್ಷೇತ್ರಗಳು ಮಾತ್ರ ಸಿಗುವ ಸಾಧ್ಯತೆಯಿದೆ.

ಕನಿಷ್ಟ ಪಕ್ಷ 8 ಕ್ಷೇತ್ರ ಸಿಗುವ ಭರವಸೆ ಇತ್ತು

ಕನಿಷ್ಟ ಪಕ್ಷ 8 ಕ್ಷೇತ್ರ ಸಿಗುವ ಭರವಸೆ ಇತ್ತು

12 ಕ್ಷೇತ್ರಗಳ ಬೇಡಿಕೆ ಇಟ್ಟಿದ್ದ ಜೆಡಿಎಸ್ ಗೆ ಕನಿಷ್ಟ 8 ಕ್ಷೇತ್ರಗಳು ಸಿಗುವ ಭರವಸೆ, ನಿರೀಕ್ಷೆಯಿತ್ತು. ಶಿವಮೊಗ್ಗ, ಬೆಂಗಳೂರು ಉತ್ತರ, ಬೀದರ್, ಮಂಡ್ಯ,ವಿಜಯಪುರ,ಹಾಸನ, ರಾಯಚೂರು ಹಾಗೂ ಮೈಸೂರು ಕ್ಷೇತ್ರಗಳು ಅಂತಿಮಗೊಂಡಿತ್ತು. ಆದರೆ, ಕೊನೆಗೆ 5 ಕ್ಷೇತ್ರ ಸಿಕ್ಕಿರೆ ಅದೇ ಹೆಚ್ಚು ಎನ್ನಲಾಗಿದೆ. ಆದರೆ, ಕಾಂಗ್ರೆಸ್ ಸೂತ್ರಕ್ಕೆ ಒಪ್ಪದೇ ಜೆಡಿಎಸ್ ಏನಾದರೂ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಬಿಜೆಪಿಗೆ ಲಾಭವಾಗುವ ಸಾಧ್ಯತೆಗಳಿವೆ. ಹೀಗಾಗಿ, ಇದು ಸೂಕ್ಷ್ಮವಾಗಿ ನಿಭಾಯಿಸಬೇಕಾದ ವಿಚಾರವಾಗಿದೆ.

English summary
Lok Sabha elections 2019: JDS likely to get only 5 seats from Congress. Former CM Siddaramaiah and KPCC president Dinesh Gundurao have informed AICC president Rahul Gandhi about this during the recent meet at Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X