ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲ್ಲಿದ್ದೀಯಪ್ಪ ಬಾಲಕೃಷ್ಣ? ಐಟಿ ಮುಖ್ಯಸ್ಥರ ಮೇಲೆ ಸಿಎಂ ಏಕವಚನದ ವಾಗ್ದಾಳಿ

|
Google Oneindia Kannada News

Recommended Video

Lok Sabha Elections 2019: ಐಟಿ ಮುಖ್ಯಸ್ಥರ ಮೇಲೆ ಸಿಎಂ ಏಕವಚನದ ವಾಗ್ದಾಳಿ

ಬೆಂಗಳೂರು, ಏಪ್ರಿಲ್ 10: ಆದಾಯ ತೆರಿಗೆ ಇಲಾಖೆ ಮುಖ್ಯಸ್ಥ ಬಾಲಕೃಷ್ಣ ಅವರ ವಿರುದ್ಧ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಹರಿಪ್ರಸಾದ್ ಪರ ಮಂಗಳವಾರ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 'ಎಲ್ಲಿದ್ದೀಯಪ್ಪ ಬಾಲಕೃಷ್ಣ? ನಮ್ಮ ಜತೆ ಚೆಲ್ಲಾಟವಾಡಬೇಡ. ಮಂಡ್ಯಕ್ಕೆ 300 ಜನರನ್ನು ಕಳುಹಿಸಿ ರೇಡ್ ಮಾಡ್ತೀಯಾ' ಎಂದು ಹರಿಹಾಯ್ದರು.

ಐಟಿ ಇಲಾಖೆಯವರು ದರೋಡೆಕೋರರು: ಕುಮಾರಸ್ವಾಮಿ ಐಟಿ ಇಲಾಖೆಯವರು ದರೋಡೆಕೋರರು: ಕುಮಾರಸ್ವಾಮಿ

ಚುನಾವಣಾ ಆಯೋಗಕ್ಕೆ ಬಾಲಕೃಷ್ಣ ನೀಡಿರುವ ದೂರು ಬಿಜೆಪಿಯ ಹೆಡ್ ಕ್ವಾಟ್ರಸ್‌ನಲ್ಲಿ ಸಿದ್ಧವಾಗಿದೆ. ಐಟಿ ಮುಖ್ಯಸ್ಥ ಬಾಲಕೃಷ್ಣ ಬಿಜೆಪಿಯ ಏಜೆಂಟ್. ಅವರ ಆಟಕ್ಕೆ ನಾವು ಹೆದರುವುದಿಲ್ಲ ಎಂದು ಕಿಡಿಕಾರಿದರು.

lok sabha elections 2019 HD Kumaraswamy accused IT chief Balakrishna as bjp agent

ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಅವರ ವರ್ಗಾವಣೆಗೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿದ ಅವರು, ಈ ಚುನಾವಣೆಯಲ್ಲಿ ಆರು ಜಿಲ್ಲಾಧಿಕಾರಿಗಳನ್ನು ಬದಲಾಯಿಸಲಾಗಿದೆ. ಚುನಾವಣಾ ಆಯೋಗವೇ ಜಿಲ್ಲಾಧಿಕಾರಿಗಳನ್ನು ನೇಮಿಸಿದೆ. ನಾಳೆ ಹೊಸ ಜಿಲ್ಲಾಧಿಕಾರಿ ಮೇಲೆ ದೂರು ನೀಡಿದರೆ ಅವರನ್ನೂ ವರ್ಗಾವಣೆ ಮಾಡುತ್ತೀರಾ? ಎಂದು ಕೋಪದಿಂದ ಪ್ರಶ್ನಿಸಿದರು.

ರೈಲ್ವೆ ಅಧಿಕಾರಿಗಳ ಸೋಗಿನಲ್ಲಿ ಐಟಿ ಅಧಿಕಾರಿಗಳು: ಮತ್ತೊಂದು ಬಾಂಬ್ ಸಿಡಿಸಿದ ಎಚ್‌ಡಿಕೆ ರೈಲ್ವೆ ಅಧಿಕಾರಿಗಳ ಸೋಗಿನಲ್ಲಿ ಐಟಿ ಅಧಿಕಾರಿಗಳು: ಮತ್ತೊಂದು ಬಾಂಬ್ ಸಿಡಿಸಿದ ಎಚ್‌ಡಿಕೆ

ಇಂತಹ ಚುನಾವಣಾ ಆಯೋಗವನ್ನು ನಾನು ಎಲ್ಲಿಯೂ ನೋಡಿಲ್ಲ. ಚುನಾವಣಾ ಆಯೋಗ, ಜಾರಿ ನಿರ್ದೇಶನಾಲಯ, ಐಟಿ, ಸಿಬಿಐ ಎಲ್ಲವೂ ಪ್ರಧಾನಿ ಮೋದಿ ಅವರ ಸೂಚನೆಯಂತೆ ಕಾರ್ಯ ನಿರ್ವಹಿಸುತ್ತಿವೆ ಎಂದು ಆರೋಪಿಸಿದರು.

ಐಟಿ ದಾಳಿ ಮಾಡಿ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ: ಎಚ್‌ಡಿಕೆ ಐಟಿ ದಾಳಿ ಮಾಡಿ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ: ಎಚ್‌ಡಿಕೆ

ಪುಲ್ವಾಮಾ ಉಗ್ರರ ದಾಳಿಯ ಕುರಿತು ಮಾಜಿ ಯೋಧರೊಬ್ಬರು ನನ್ನ ಬಳಿ ಹೇಳಿದ್ದನ್ನು ನಾನು ಪ್ರಸ್ತಾಪಿಸಿದ್ದೆ. ಆದರೆ, ಕೆಲವು ಮಾಧ್ಯಮಗಳು ನನ್ನ ಭಾಷಣವನ್ನು ತಿರುಚಿ ಪ್ರಸಾರ ಮಾಡಿವೆ. ನೀವು ಬೇಕಾದರೆ ನನ್ನ ಭಾಷಣವನ್ನು ಆಲಿಸಿ. ವಾಸ್ತವ ಏನೆಂದು ನಿಮಗೇ ಅರ್ಥವಾಗುತ್ತದೆ ಎಂದು ಹೇಳಿದರು.

English summary
lok sabha elections 2019: Chief Minister HD Kumaraswamy accused Income Tax Department chief Balakrishna as BJP agent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X