ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್‌ನವರೇ ಆರೋಗ್ಯವಂತ ವ್ಯಕ್ತಿಗಳನ್ನು ನಾಟಕಕ್ಕೆ ಬಳಸಿ: ಡಿವಿಎಸ್ ವ್ಯಂಗ್ಯ

|
Google Oneindia Kannada News

ಬೆಂಗಳೂರು, ಏಪ್ರಿಲ್ 3: ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಿರುವ ಸಂಸದ ಡಿವಿ ಸದಾನಂದ ಗೌಡ ಬುಧವಾರ ಬೆಳಿಗ್ಗೆ ಜಿಕೆವಿಕೆ ಕ್ಯಾಂಪಸ್, ಸಹಕಾರ ನಗರ, ಟಾಟಾ ನಗರ ಮತ್ತು ವಿದ್ಯಾರಣ್ಯಪುರಗಳಲ್ಲಿ ವ್ಯಾಪಕ ಪ್ರಚಾರ ನಡೆಸಿದರು.

ಬ್ಯಾಟರಾಯನಪುರದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ನೀರು, ಕಸದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದ ವ್ಯಕ್ತಿಯೊಬ್ಬನನ್ನು ಸದಾನಂದಗೌಡ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

'ಸಿದ್ದರಾಮಯ್ಯ ಸರಿಯಾದ ವಿಳಾಸ ನೀಡಿದರೆ ಪ್ರಗತಿ ವರದಿ ಕಳುಹಿಸುವೆ' 'ಸಿದ್ದರಾಮಯ್ಯ ಸರಿಯಾದ ವಿಳಾಸ ನೀಡಿದರೆ ಪ್ರಗತಿ ವರದಿ ಕಳುಹಿಸುವೆ'

ಟ್ವಿಟ್ಟರ್‌ನಲ್ಲಿ ವ್ಯಕ್ತಿಯ ಫೋಟೊ ಹಂಚಿಕೊಂಡಿರುವ ಸದಾನಂದಗೌಡ, ಆತ ಕಾಂಗ್ರೆಸ್ ಕಳುಹಿಸಿರುವ ಅರಿ ಭಯಂಕರ ನಟ ಎಂದು ಟೀಕಿಸಿದ್ದಾರೆ. ಬಿಬಿಎಂಪಿ ಕಾರ್ಪೊರೇಟರ್, ಶಾಸಕ ಮತ್ತು ಸಂಸದರ ಕೆಲಸಗಳಲ್ಲಿನ ವ್ಯತ್ಯಾಸ ತಿಳಿದವರನ್ನು ಈ ರೀತಿ ಪ್ರಶ್ನೆ ಮಾಡಲು ಕಳುಹಿಸಿ ಎಂದು ಕಾಂಗ್ರೆಸ್‌ಗೆ ತಾಕೀತು ಮಾಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ತಮ್ಮನ್ನು ಪ್ರಶ್ನಿಸಲು ಬಂದಿದ್ದ ವ್ಯಕ್ತಿಗೆ ಹೇಳಿಕೊಟ್ಟ ಸಂಭಾಷಣೆ ಮರೆತು ಹೋಗುತ್ತಿತ್ತು. ಡ್ರಾಮಾಕ್ಕೆ ಮಾಡಿಕೊಂಡ ತಯಾರಿ ಕಡಿಮೆ ಇತ್ತು. ಆದರೆ ಮನರಂಜನೆಯಂತೂ ಚೆನ್ನಾಗಿ ಸಿಕ್ಕಿತು. ಆತ ಬೆವರುವಾಗ ಅಯ್ಯೋ ಎನಿಸಿತ್ತು ಎಂದು ಟ್ವಿಟ್ಟರ್‌ನಲ್ಲಿ ಅವರು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್‌ಗೆ ಕೆಲವು ಸಲಹೆಗಳನ್ನು ಕೂಡ ನೀಡಿದ್ದಾರೆ.

ಈ ಬಗ್ಗೆ ಅವರು ಮಾಡಿರುವ ಸರಣಿ ಟ್ವೀಟ್‌ಗಳು ಇಲ್ಲಿವೆ...

ಅರಿ ಭಯಂಕರ ನಟ

ಇಂದು ಬ್ಯಾಟರಾಯನ ಪುರದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿರುವಾಗ ಕಾಂಗ್ರೆಸ್ ಪಕ್ಷ ಕಳುಹಿಸಿಕೊಟ್ಟ ಅರಿ ಭಯಂಕರ ನಟನೊಬ್ಬ, ನಮ್ಮ ವಾರ್ಡಿನಲ್ಲಿ ನೀರು ಬರುತ್ತಿಲ್ಲ ಕಸ ವಿಲೇವಾರಿ ಆಗುತ್ತಿಲ್ಲ. ನಮ್ಮ ವಾರ್ಡ್‌ನಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಿ ಅನ್ನುವ ಪ್ರಶ್ನೆಯನ್ನು ನಡುಗುವ ಏರು ದ್ವನಿಯಲ್ಲಿ ಪ್ರಶ್ನಿಸಿದ ಎಂದು ಟ್ವೀಟ್ ಮಾಡಿದ್ದಾರೆ.

ಸಂಭಾಷಣೆ ಮರೆತು ಹೋಗ್ತಾ ಇತ್ತು

ನಡು ನಡುವೆ ಆತನಿಗೆ ಸಂಭಾಷಣೆ ಮರೆತು ಹೋಗ್ತಾ ಇತ್ತು, ಡ್ರಾಮಾ ತಯಾರಿ ಸ್ವಲ್ಪ ಕಡಿಮೆ ಇತ್ತು . ಮನೋರಂಜನೆ ಚೆನ್ನಾಗಿತ್ತು. ಪ್ರಶ್ನಿಸುವ ಗಡಿಬಿಡಿಯಲ್ಲಿ ಬೆವತು ನೀರಾಗುವಾಗ ಅಯ್ಯೋ ಅನಿಸ್ತು. ಪಾಪ ಹೊಟ್ಟೆ ಪಾಡಿಗೆ ಮಾಡ್ತಾರೆ. ಇರ್ಲಿ ಬಿಡಿ. ಕಾಂಗ್ರೆಸಿಗರಲ್ಲಿ ಒಂದು ಮನವರಿಕೆ, 1. ಮುಂದಿನ ಸಲ ಇಂತಹವರನ್ನು ಕಳಿಸುವಾಗ ತಯಾರಿ ಸ್ವಲ್ಪ ಚೆನ್ನಾಗಿ ಇರಲಿ

ಮತ್ತೊಮ್ಮೆ ಮೋದಿ ಎಂಬ ಘೋಷಣೆ ಎಲ್ಲೆಡೆ ಮೊಳಗುತ್ತಿದೆ : ಸದಾನಂದ ಗೌಡ ಮತ್ತೊಮ್ಮೆ ಮೋದಿ ಎಂಬ ಘೋಷಣೆ ಎಲ್ಲೆಡೆ ಮೊಳಗುತ್ತಿದೆ : ಸದಾನಂದ ಗೌಡ

ವ್ಯತ್ಯಾಸ ಗೊತ್ತಿರಲಿ

2. ಇದು ದೇಶದ ಸಂಸದ್‌ಗೆ ನಡೆಯುವ ಚುನಾವಣೆ, ಪ್ರಶ್ನೆಗಳು ದೇಶಕ್ಕೆ ಸಂಬಂದಿಸಿದ್ದು ಇರಲಿ. ಬಿಬಿಎಂಪಿಯದ್ದು ಬೇಡ 3) ನೀವು ಕಳುಹಿಸುವ ವ್ಯಕ್ತಿಗೆ, ಬಿಬಿಎಂಪಿ ಕಾರ್ಪೊರೇಟರ್, ಶಾಸಕ, ಸಂಸದ ಚುನಾವಣೆಯ ವ್ಯತ್ಯಾಸ ಗೊತ್ತಿರಲಿ , ಪ್ರಶ್ನೆಗಳು ಸಮಂಜಸವಾಗಿರಲಿ.

ಉತ್ತರ ಕುಮಾರರು

4) ಇಂತಹ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ವಿಕೃತ ಖುಷಿ ಪಡೆಯೋ ದುರಾಲೋಚನೆ ಬಿಟ್ಟುಬಿಡಿ. ನನ್ನ ಕ್ಷೇತ್ರದ ಮತದಾರರಿಗೆ ತಮ್ಮ ಆಯ್ಕೆ ಗೊತ್ತಿದೆ. 5) ನಾವು ಶಾಂತಿ ಪ್ರಿಯರು ಚುನಾವಣೆ ಸಂದರ್ಭದಲ್ಲಿ ಇಂತಹ ಘಟನೆಯಿಂದ ಅಶಾಂತಿ ಆದರೆ ಜನರಿಗೆ ತೊಂದರೆ. ಚುನಾವಣೆಯ ದಿಕ್ಕು ತಪ್ಪುತ್ತದೆ 6) ನೇರವಾಗಿ ಎದುರಿಸಲಾಗದ ಉತ್ತರ ಕುಮಾರರು ಇಂತಹ ಚೇಷ್ಟೆಗೆ ಕೈ ಹಾಕ್ತಾರೆ.

ಗಂಡನನ್ನು ಕಳೆದುಕೊಂಡವರ ಬಗ್ಗೆ ಕೀಳಾಗಿ ಮಾತಾಡೊಲ್ಲ: ಸಿದ್ದರಾಮಯ್ಯಗೆ ಗೌಡರ ಚಾಟಿ ಗಂಡನನ್ನು ಕಳೆದುಕೊಂಡವರ ಬಗ್ಗೆ ಕೀಳಾಗಿ ಮಾತಾಡೊಲ್ಲ: ಸಿದ್ದರಾಮಯ್ಯಗೆ ಗೌಡರ ಚಾಟಿ

ಸಂಭಾವನೆ ಕೊಟ್ಟುಬಿಡಿ

7) ಮುಂದೆ ಸ್ವಲ್ಪ ಆರೋಗ್ಯವಂತ ವ್ಯಕ್ತಿಗಳನ್ನು ನಾಟಕಕ್ಕೆ ಬಳಸಿ. ಗಾಬರಿಯಿಂದ ಏನಾದ್ರೂ ಆದ್ರೆ ಪಾಪ ಅವರ ಕುಟುಂಬದ ಗತಿ? ಪಾಪ ಹೊಟ್ಟೆಪಾಡಿಗೆ ನಾಟಕ ಮಾಡಿದ ಆತನ ಸಂಭಾವನೆ ಕೊಟ್ಟುಬಿಡಿ. ಯಾಮಾರಿಸಬೇಡಿ ಎಂದು ಕಾಂಗ್ರೆಸ್‌ನವರ ಕಾಲೆಳೆದಿದ್ದಾರೆ.

ಗಿಮಿಕ್ ಗಿಲಿಟ್ ಬಿಡಿ

ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬರಿಗೆ ಇದೆ. ಅದಕ್ಕೆ ಸಮಯ ಸಂದರ್ಭಗಳಿವೆ. ಬಿಬಿಎಂಪಿಯಿಂದ ಆಗಬೇಕಾದ ಕೆಲಸಗಳನ್ನು ಕಾರ್ಪೊರೇಟರ್ ಹತ್ತಿರ ಚರ್ಚಿಸಿ, ಆತ ಸ್ಪಂದಿಸದಿದ್ದಾಗ ನಾನೇ ಎಷ್ಟೋ ಸಲ ನೇರವಾಗಿ ಪ್ರಶ್ನಿಸಿದ್ದೂ ಇದೆ. ಇನ್ನಾದರೂ ಗಿಮಿಕ್ ಗಿಲಿಟ್ ಬಿಡಿ ಅನ್ನೋದು ಕಾಂಗ್ರೆಸ್ ಗೆ ಮನವಿ.

ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಡಿವಿಎಸ್ ಅಸ್ತಿ ಎಷ್ಟಿದೆ?ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಡಿವಿಎಸ್ ಅಸ್ತಿ ಎಷ್ಟಿದೆ?

ಕಾಂಗ್ರೆಸ್ ನಟ ಹನುಮಂತಿ

ಮತದಾರನ ಸೋಗಿನಲ್ಲಿ ಬಂದು ನನ್ನನ್ನು ಪ್ರಶ್ನಿಸಿದ ಬ್ಯಾಟರಾಯನಪುರದ ಕಾಂಗ್ರೆಸ್ ನಟ ಹನುಮಂತಿ. ಜನ ಗುರುತಿಸಲಿ ಅನ್ನೋ ಕಾರಣದಿಂದ ಈತನ ಫೋಟೋ. ಈತ ಯಾರ ಜೊತೆ ಇರ್ತಾನೆ. ಯಾರ ಏಜೆಂಟ್ ಅನ್ನೋದು ಎಲ್ಲರಿಗೆ ಗೊತ್ತು. ಈತ ಪ್ರಶ್ನೆ ಮಾಡ್ತಾನೆ, ಇನ್ನೋರ್ವ ವಿಡಿಯೋ ತೆಗಿತಾನೆ. ಜನರ ದಾರಿ ತಪ್ಪಿಸೋ ಗಿಮಿಕ್ ಎಂದು ಸದಾನಂದಗೌಡ ಫೋಟೊ ಹಂಚಿಕೊಂಡಿದ್ದಾರೆ.

English summary
Lok Sabha elections 2019: Bengaluru north BJP candidate DV Sadananda Gowda slams for sending a person to question him in Byatarayanapura campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X