ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂತೂ ರೈಗೆ ಕಾಂಗ್ರೆಸ್ ನೀಚತನ ಅರಿವಾಯಿತು: ಕಾಲೆಳೆದ ಸುರೇಶ್ ಕುಮಾರ್

|
Google Oneindia Kannada News

Recommended Video

Lok Sabha Elections 2019: ಬಿಜೆಪಿ ನಾಯಕನಿಂದ ಟ್ರೋಲ್ ಆದ ನಟ ಪ್ರಕಾಶ್ ರೈ | Oneindia Kannada

ಬೆಂಗಳೂರು, ಏಪ್ರಿಲ್ 18: ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್, ತಮಗೆ ಪ್ರಕಾಶ್ ರೈ ಬೆಂಬ ದೊರೆತಿದೆ ಎಂದು ಸುಳ್ಳು ಸುದ್ದಿ ಪ್ರಚಾರ ಮಾಡುತ್ತಿದ್ದಾರೆ ಎಂಬುದಾಗಿ ಕಿಡಿಕಾರಿರುವ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಅವರ ವಿರೋಧಿಗಳ ಟೀಕೆಗೆ ಆಹಾರವಾಗಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪ್ರಕಾಶ್ ರೈ ಅವರು ಮಾಡಿರುವ ವಿಡಿಯೋವನ್ನು ಹಂಚಿಕೊಂಡಿರುವ ರಾಜಾಜಿನಗರ ಶಾಸಕ ಎಸ್. ಸುರೇಶ್ ಕುಮಾರ್, 'ಅಂತೂ ಪ್ರಕಾಶ್ ರೈ ಅವರಿಗೂ ಕಾಂಗ್ರೆಸ್ ಪಕ್ಷದ 'ನೀಚ' ರಾಜಕೀಯದ ಪರಿಚಯ/ಅನುಭವ ಆಯಿತು' ಎಂದು ಕಾಲೆಳೆದಿದ್ದಾರೆ.

ಕಾಂಗ್ರೆಸ್‌ಗೆ ಪ್ರಕಾಶ್ ರೈ ಬೆಂಬಲ!: ಸುಳ್ಳು ಸುದ್ದಿಗಾಗಿ ರಿಜ್ವಾನ್ ವಿರುದ್ಧ ಆಕ್ರೋಶ ಕಾಂಗ್ರೆಸ್‌ಗೆ ಪ್ರಕಾಶ್ ರೈ ಬೆಂಬಲ!: ಸುಳ್ಳು ಸುದ್ದಿಗಾಗಿ ರಿಜ್ವಾನ್ ವಿರುದ್ಧ ಆಕ್ರೋಶ

'ಕಾಂಗ್ರೆಸ್‌ನವರ ನೀಚ ರಾಜಕೀಯ ನೋಡಿ. ರಿಜ್ವಾನ್ ಬಿಎ ಎಂದು ಹೇಳಿಕೊಳ್ಳುವ ಮಜರ್ ಅಹ್ಮದ್ ಎಂಬ ವ್ಯಕ್ತಿ ನಾನು ಮತ್ತು ರಿಜ್ವಾನ್ ಒಂದು ಸಂವಾದದಲ್ಲಿರುವ ಫೋಟೊ ತೆಗೆದುಕೊಂಡು ಪ್ರಕಾಶ್ ರಾಜ್ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಅವರಿಗೆ ವೋಟ್ ಹಾಕಿ ವ್ಯರ್ಥ ಮಾಡಿಕೊಳ್ಳಬೇಡಿ. ಅದನ್ನು ರಿಜ್ವಾನ್‌ಗೆ ಹಾಕಿ ಎಂದು ವಾಟ್ಸಾಪ್ ಚಳವಳಿ ಮಾಡುತ್ತಿದ್ದಾರೆ.

Lok Sabha Elections 2019 BJP MLA S Sureshkumar trolled Prakash Rai rizwan arshad fake news

ಕಾಂಗ್ರೆಸ್‌ನವರ ಇಂತಹ ನೀಚ ರಾಜಕೀಯವನ್ನು ನಾನು ಖಂಡಿಸುತ್ತೇನೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ. ದಯವಿಟ್ಟು ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ' ಎಂದು ಪ್ರಕಾಶ್ ರೈ ವಿಡಿಯೋ ಟ್ವೀಟ್ ಮಾಡಿದ್ದರು.

ಇದಕ್ಕೂ ಮೊದಲು ಅವರು ಟ್ವಿಟ್ಟರ್ ಮತ್ತು ಫೇಸ್‌ಬುಕ್ ಖಾತೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ನಿಖಿಲ್ ಗಿಂತಲೂ ಸುಮಲತಾ ಯೋಗ್ಯ ಅಭ್ಯರ್ಥಿ: ಪ್ರಕಾಶ್ ರೈನಿಖಿಲ್ ಗಿಂತಲೂ ಸುಮಲತಾ ಯೋಗ್ಯ ಅಭ್ಯರ್ಥಿ: ಪ್ರಕಾಶ್ ರೈ

ರಿಜ್ವಾನ್ ಅರ್ಷದ್ ಅವರು ತುಂಬಾ ನಾಚಿಕೆಗೇಡಿ. ಅವರು ಸ್ವಂತ ಹೆಸರಿನಿಂದ ಮತಗಳನ್ನು ಸಂಪಾದಿಸಿಕೊಳ್ಳಲಾರರು. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಒಂದೇ ಎಂಬುದು ಸಾಬೀತಾಗಿದೆ. ಪ್ರಕಾಶ್ ರೈ ಕಾಂಗ್ರೆಸ್ ಜತೆಗೆ ಇದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಪ್ರಕಾಶ್ ರಾಜ್ ಬೆಂಗಳೂರು ಕೇಂದ್ರ ಕ್ಷೇತ್ರದ ನಿಮ್ಮ ಅಭ್ಯರ್ಥಿ. ಅರ್ಷದ್ ರಿಜ್ವಾನ್ ಅವರೇ ನಿಮ್ಮದೇ ಮತಗಳನ್ನು ಸಂಪಾದಿಸಲು ಅಗತ್ಯವಾದಷ್ಟು ಧೈರ್ಯ ಪಡೆದುಕೊಳ್ಳಿ. ಉತ್ತಮ ಕ್ರೀಡಾಮನೋಭಾವ ಬೆಳೆಸಿಕೊಳ್ಳಿ ಎಂದು ರೈ ಹೇಳಿದ್ದರು.

English summary
Lok Sabha Elections 2019: BJP leader S Sureshkumar trolled Bangalore South independent candidate Prakash Rai retweeting his video against Congress candidate Rizwan Arshad over a circulated fake news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X