ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿನಿಂದ ಬಿಜೆಪಿಯ 'ಮೋದಿ ವಿಜಯ ಸಂಕಲ್ಪ ಯಾತ್ರೆ' ಆರಂಭ

|
Google Oneindia Kannada News

Recommended Video

lok sabha election 2019: ಇಂದಿನಿಂದ ಬಿಜೆಪಿಯ 'ಮೋದಿ ವಿಜಯ ಸಂಕಲ್ಪ ಯಾತ್ರೆ' ಆರಂಭ

ಬೆಂಗಳೂರು, ಫೆಬ್ರವರಿ 22: ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ 'ಮೋದಿ ವಿಜಯ ಸಂಕಲ್ಪ ಯಾತ್ರೆ'ಯನ್ನು ಇಂದಿನಿಂದ(ಶುಕ್ರವಾರ) ಆರಂಭಿಸಲಿದೆ.

ಯಾತ್ರೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಚಿಕ್ಕಬಳ್ಳಾಪುರದಲ್ಲಿ ಚಾಲನೆ ನೀಡಲಿದ್ದಾರೆ. ಚಿಕ್ಕಬಳ್ಳಾಪುರದದಿಂದ ಆರಂಭವಾಗುವ ವಿಜಯ ಸಂಕಲ್ಪ ಯಾತ್ರೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಸಾಗಲಿದೆ.

ಕಾಂಗ್ರೆಸ್‌ಗೆ ದೇಶಭಕ್ತಿ ಇಲ್ಲ, ಅವರಿಂದ ನಾವು ಕಲಿಯಬೇಕಿಲ್ಲ: ಅಮಿತ್ ಶಾ ಕಾಂಗ್ರೆಸ್‌ಗೆ ದೇಶಭಕ್ತಿ ಇಲ್ಲ, ಅವರಿಂದ ನಾವು ಕಲಿಯಬೇಕಿಲ್ಲ: ಅಮಿತ್ ಶಾ

ಮಿಷನ್ 22 ಅನ್ನು ಗುರಿಯಾಗಿರಿಸಿಕೊಂಡಿರುವ ಬಿಜೆಪಿ, ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲೂ ಪರಿವರ್ತನಾ ಯಾತ್ರೆ ಗಳಿಸುವ ಮೂಲಕ ಸಾಕಷ್ಟು ಜನಬೆಂಬಲ ಪಡೆದಿತ್ತು.

Lok Sabha elections 2019: BJP Karnataka will start Modi Vijaya Sankalpa Yathre

ಯಾತ್ರೆಯು ಮಾರ್ಚ್ 21 ರಂದು, ಚಿಕ್ಕಮಗಳೂರಿನಲ್ಲಿ ಮುಕ್ತಾಯವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಾದ್ಯಂತ ಇರುವ ಬೂತ್ ಕಾರ್ಯಕರ್ತರೊಂದಿಗೆ ಫೆ.28 ರಂದು ಏಕಕಾಲಕ್ಕೆ ವಿಡಿಯೋ ಸಂವಾದ ನಡೆಸಲಿದ್ದಾರೆ.

2019ರ ಲೋಕಸಭೆ ಯುದ್ಧ, ಬಿಜೆಪಿ ಘೋಷ ವಾಕ್ಯ ಪ್ರಕಟಿಸಿದ ಮೋದಿ2019ರ ಲೋಕಸಭೆ ಯುದ್ಧ, ಬಿಜೆಪಿ ಘೋಷ ವಾಕ್ಯ ಪ್ರಕಟಿಸಿದ ಮೋದಿ

ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಯಾತ್ರೆ ನಡೆಯಲಿದ್ದು, ರಾಜ್ಯದ ಪ್ರಮುಖ ಬಿಜೆಪಿ ನಾಯಕರು ಭಾಗಿಯಾಗಲಿದ್ದಾರೆ.

English summary
BJP Karnataka will start Modi Vijaya Sankalpa Yathre from Feb 22 to March 21 ahead of Lok Sabha elections 2019. BJP national president Amit Shah will inaguarate the Yathra today in Chikkaballapur
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X