• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅನಂತ್ ಕುಮಾರ್ ನನ್ನ ಮೊದಲ ಗುರು: ತೇಜಸ್ವಿ ಸೂರ್ಯ

|
   Tejasvi Surya: ತೇಜಸ್ವಿ ಸೂರ್ಯ: ಅನಂತ್ ಕುಮಾರ್ ನನ್ನ ಮೊದಲ ಗುರು | Oneindia Kannada

   ಬೆಂಗಳೂರು, ಮಾರ್ಚ್ 26: ಬೆಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಯುವ ಮುಖಂಡ ತೇಜಸ್ವಿ ಸೂರ್ಯ ಅತೀವ ಉತ್ಸಾಹದಲ್ಲಿದ್ದಾರೆ. ಟಿಕೆಟ್ ಘೋಷಣೆಯಾಗುತ್ತಿದ್ದಂತೆಯೇ ಅವರು ಸಂತೋಷವನ್ನು ಸರಣಿ ಟ್ವೀಟ್‌ಗಳಲ್ಲಿ ಹಂಚಿಕೊಂಡಿದ್ದಾರೆ.

   ಹಾಗೆಯೇ ಕೆಲವು ಟ್ವೀಟ್‌ಗಳಲ್ಲಿ ವಿಚಾರಗಳನ್ನು ಹಂಚಿಕೊಳ್ಳುವಾಗ ಅವರು ಭಾವುಕರಾಗಿದ್ದಾರೆ. ತೇಜಸ್ವಿ ಸೂರ್ಯ ಸ್ಪರ್ಧಿಸುತ್ತಿರುವುದು ಮಾಜಿ ಸಚಿವ, ದಿವಂಗತ ಅನಂತ್ ಕುಮಾರ್ ಸತತ 22 ವರ್ಷ ಪ್ರತಿನಿಧಿಸಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ.

   ತೇಜಸ್ವಿನಿಗೆ ತಪ್ಪಿದ ಟಿಕೆಟ್, ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ

   ತಮಗೆ ಟಿಕೆಟ್ ದೊರೆತ ಸಂದರ್ಭದಲ್ಲಿ ಅವರು ಅನಂತ್ ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ. ತೇಜಸ್ವಿನಿ ಅನಂತ್ ಕುಮಾರ್ ಅವರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

   ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

   ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ನೀಡಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಸೋಮವಾರ ರಾತ್ರಿ ಬಿಜೆಪಿ ಪ್ರಕಟಿಸಿದ ಪಟ್ಟಿಯಲ್ಲಿ ಹೊಸ ಮುಖ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

   ಅನಂತ್ ಕುಮಾರ್ ಅವರ ಗರಡಿಯಲ್ಲಿ ಬೆಳೆದ ತೇಜಸ್ವಿ, ಅನಂತ್ ಕುಮಾರ್ ಅವರೇ ನನಗೆ ಮೊದಲ ಗುರು ಎಂದು ಹೇಳಿಕೊಂಡಿದ್ದಾರೆ. ಹಾಗೆಯೇ ಶಿಷ್ಯನಾಗಿ ಗುರುವಿನ ಸ್ಮರಣೆ ಮಾಡಿದ್ದಾರೆ.

   ನನ್ನ ಮೊದಲ ಸಾರ್ವಜನಿಕ ಗುರು

   ಅನಂತ್ ಕುಮಾರ್ ಅವರು ನನ್ನ ಸಾರ್ವಜನಿಕ ಜೀವನದ ಮೊದಲ ಗುರು. ನನ್ನ ಹೈಸ್ಕೂಲು ದಿನಗಳಿಂದಲೂ ನನ್ನ ಬೆಳವಣಿಗೆಯನ್ನು ಅವರು ನೋಡಿದ್ದಾರೆ. ಅವರನ್ನು ನೋಡುತ್ತಾ, ಅವರೊಂದಿಗೆ ಮಾತನಾಡುತ್ತಾ ಮತ್ತು ಅವರು ಕೆಲಸಗಳನ್ನು ಕೇವಲ ನೋಡುತ್ತಲೇ ಸಾಕಷ್ಟು ಕಲಿತಿದ್ದೇನೆ. ಅವರು ಕರ್ನಾಟಕದ ಅತ್ಯಂತ ಗಣ್ಯ ನಾಯಕರಲ್ಲಿ ಒಬ್ಬರು. ಅವರಿಗೆ ಎಂದೆಂದಿಗೂ ಕೃತಜ್ಞನಾಗಿರುತ್ತೇನೆ ಎಂದು ತೇಜಸ್ವಿ ಟ್ವೀಟ್ ಮಾಡಿದ್ದಾರೆ.

   ನಾನು ಬೆಳೆಯಲು ನೀವೇ ಕಾರಣ

   ನನ್ನನ್ನು ಪ್ರೌಢಶಾಲಾ ದಿನಗಳಿಂದಲೂ ಅನಂತ್ ಕುಮಾರ್ ಮತ್ತು ತೇಜಸ್ವಿನಿ ಅನಂತ್ ಕುಮಾರ್ ಮೇಡಂ ಬೆಳೆಸಿದ್ದಾರೆ. 'ಜನ ಚೇತನಾ ಯಾತ್ರೆ'ಯಲ್ಲಿ ಅನಂತ್ ಕುಮಾರ್ ಅವರೊಂದಿಗೆ ಕಳುಹಿಸುವಂತೆ ತೇಜಸ್ವಿನಿ ಮೇಡಂ ಅವರಿಗೆ ತುಂಬಾ ಕಾಟ ಕೊಟ್ಟಿದ್ದೆ. ಅವರು ಅದು ಹೇಗೋ ಸರ್ ಅವರನ್ನು ಮನವೊಲಿಸಿ ನನ್ನನ್ನು ಜತೆಯಲ್ಲಿ ಕರೆದೊಯ್ಯುವಂತೆ ಮಾಡಿದ್ದರು. ನಾನು ನನ್ನ ಮೊದಲ ಭಾರತ ದರ್ಶನವನ್ನು ಮಾಡಿದ್ದೆ. ಇಂದು ನಾನು ಏನಾಗಿದ್ದೇನೆಯೋ ಅದಕ್ಕೆ ನೀವಿಬ್ಬರೇ ಕಾರಣ ಎಂದು ಭಾವುಕರಾಗಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.

   OMG! ಟಿಕೆಟ್ ಸಿಕ್ಕಿದ್ದಕ್ಕೆ ತೇಜಸ್ವಿ ಸೂರ್ಯ ಭಾವುಕ ಟ್ವೀಟ್

   ಆಧುನಿಕ ಬೆಂಗಳೂರು ನಿರ್ಮಾರ್ತೃ

   ಅನಂತ್ ಕುಮಾರ್ ಅವರು ನಿಜವಾದ ಆಧುನಿಕ ಬೆಂಗಳೂರಿನ ನಿರ್ಮಾರ್ತೃ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ, ಕಾವೇರಿ ನಾಲ್ಕನೇ ಹಂತ, ಉಪನಗರ ರೈಲು ಮತ್ತು ಇನ್ನೂ ಅನೇಕ ಕೊಡುಗೆಗಳನ್ನು ಈ ನಗರಕ್ಕೆ ಅವರು ನೀಡಿದ್ದಾರೆ. ನಿಮ್ಮೆಲ್ಲರ ಹಾರೈಕೆಗಳಿಂದ ನಮ್ಮ ನಗರವನ್ನು ಇನ್ನೊಂದು ಮಟ್ಟಕ್ಕೆ ಕೊಂಡೊಯ್ಯಲು ಬಯಸಿದ್ದೇನೆ. ಬೆಂಗಳೂರು ಜಗತ್ತಿನ ಅತ್ಯುತ್ತಮ ಮೆಟ್ರೊಪೊಲಿಸ್ ಆಗಲು ಎಲ್ಲ ಅರ್ಹತೆ ಹೊಂದಿದೆ ಎಂದು ತೇಜಸ್ವಿ ಹೇಳಿದ್ದಾರೆ.

   ದೇಶ ಮೊದಲು ಎಂಬುದೇ ಸಿದ್ಧಾಂತ

   ದೇಶ ಮೊದಲು ಎಂಬುದೇ ಸಿದ್ಧಾಂತ

   ಬಿಜೆಪಿ ಕೈಗೊಂಡ ನಿರ್ಣಯಕ್ಕೆ ನಾವು ಬದ್ಧರಾಗಿದ್ದೇವೆ. ನಾವು ಯಾವಾಗಲೂ ಪಕ್ಷದ ಸಿದ್ಧಾಂತದ ಜತೆಗಿದ್ದೇವೆ. ದೇಶ ಮೊದಲು ಎನ್ನುವುದು ನಮ್ಮ ಪಕ್ಷದ ಸಿದ್ಧಾಂತ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಪ್ರಚಾರ ಮಾಡುತ್ತೇವೆ. ತೇಜಸ್ವಿ ಸೂರ್ಯ ಅವರ ಪರ ಪ್ರಚಾರದಲ್ಲಿ ತೊಡಗಿಸಿಕೊಳ್ಳೋಣ ಎಂದು ತೇಜಸ್ವಿನಿ ಅನಂತ್ ಕುಮಾರ್ ಪ್ರತಿಕ್ರಿಯೆ ನೀಡಿದರು.

   ಬೆಂಗಳೂರು ಗ್ರಾಮಾಂತರದಿಂದ ಅಶ್ವತ್ಥ್ ನಾರಾಯಣ್ ಕಣಕ್ಕೆ

   English summary
   Lok Sabha elections 2019: Bengaluru South BJP candidate Tejasvi surya said, former Union Minister Ananth Kumar was his firt guru in public life.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X