ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುಪಿಎ ಆಡಳಿತದಲ್ಲಿ ಸೈನಿಕರಿಗೆ ಸ್ವಾತಂತ್ರ್ಯವಿರಲಿಲ್ಲ: ಸದಾನಂದಗೌಡ

|
Google Oneindia Kannada News

ಬೆಂಗಳೂರು, ಏಪ್ರಿಲ್ 5: ಪುಲ್ವಾಮಾ ದಾಳಿಯ ನಂತರ ಪಾಕಿಸ್ತಾನದ ನೆಲಕ್ಕೆ ನುಗ್ಗಿ ನಮ್ಮ ಸೈನಿಕರು ಉಗ್ರರನ್ನು ಸದೆ ಬಡಿದಿದ್ದಾರೆ. ದೇಶದ ರಕ್ಷಣೆ ವಿಷಯದಲ್ಲಿ ರಾಜಿಯಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನರೇಂದ್ರ ಮೋದಿಯವರು ಜಗತ್ತಿಗೆ ಈ ಮೂಲಕ ಸಾರಿದ್ದಾರೆ ಎಂದು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಹೇಳಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಶುಕ್ರವಾರ ಬೆಳಿಗ್ಗೆ ಯಶವಂತಪುರ ವಿಧಾನ ಕ್ಷೇತ್ರದ ತಾವರೇಕೆರೆ ಹೋಬಳಿ ವ್ಯಾಪ್ತಿಯಲ್ಲಿ ಮತಯಾಚನೆ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಂಗಳೂರಲ್ಲಿ ಸಂಸದರ ನಿಧಿ ಬಳಕೆ: ಸದಾನಂದಗೌಡರೇ ನಂಬರ್ ಒನ್ ಬೆಂಗಳೂರಲ್ಲಿ ಸಂಸದರ ನಿಧಿ ಬಳಕೆ: ಸದಾನಂದಗೌಡರೇ ನಂಬರ್ ಒನ್

ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕೇಂದ್ರದಲ್ಲಿ ಆಡಳಿತದಲ್ಲಿದ್ದಾಗ ಸೈನಿಕರಿಗೆ ಸರಿಯಾದ ಸ್ವಾತಂತ್ರ್ಯ ನೀಡಿರಲಿಲ್ಲ. ಉಗ್ರರ ಬಗ್ಗೆ ಮೃದು ಧೋರಣೆ ಅನುಸರಿಸಲಾಗಿತ್ತು. ಆದ್ದರಿಂದಲೇ ಪಾಕಿಸ್ತಾನ ಚಿಗಿತುಕೊಂಡಿತ್ತು. ಮೋದಿಯವರು ಈಗ ಪಾಕ್‌ಗೆ ಸರಿಯಾಗಿ ಪಾಠ ಕಲಿಸಿದ್ದಾರೆ. ವಿಶ್ವದಲ್ಲಿ ಈಗ ಪಾಕಿಸ್ತಾನ ಒಬ್ಬಂಟಿಯಾಗಿದೆ ಎಂದು ಹೇಳಿದರು.

Lok Sabha elections 2019 Bangalore north bjp dv sadananda gowda indian army narendra modi

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ ಐದು ವರ್ಷದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಇದೆಲ್ಲವನ್ನೂ ಕ್ಷೇತ್ರದ, ನಾಡಿನ, ದೇಶದ ಜನತೆ ಗಮನಿಸಿದ್ದು ಈ ಬಾರಿಯೂ ಕೇಂದ್ರದಲ್ಲಿ ಬಿಜೆಪಿ ಪುನಃ ಅಧಿಕಾರಕ್ಕೆ ಬರಲಿದೆ. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ಸಂಸದರಲ್ಲಿ ಯಾರ ವಿರುದ್ಧ ಎಷ್ಟು ಕ್ರಿಮಿನಲ್ ಪ್ರಕರಣಗಳಿವೆ?

ದೇಶಕ್ಕೆ ಇಂದು ಸುಭದ್ರ ಮತ್ತು ಸುಸ್ಥಿರ ಆಡಳಿತ ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಜ್ಞಾವಂತ ಮತದಾರರು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.

ದ್ವಾರಕನಾಥ್ ಗುರೂಜಿ ಭೇಟಿಯಾದ ಡಿ.ವಿ.ಸದಾನಂದ ಗೌಡ ದ್ವಾರಕನಾಥ್ ಗುರೂಜಿ ಭೇಟಿಯಾದ ಡಿ.ವಿ.ಸದಾನಂದ ಗೌಡ

Lok Sabha elections 2019 Bangalore north bjp dv sadananda gowda indian army narendra modi

ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಯಶವಂತಪುರ ವಿಧಾನ ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ ಮಾರೇಗೌಡ, ಮುಖಂಡರಾದ ಆಂಜಿನಪ್ಪ, ಚಂದ್ರಮ್ಮ ಮುನಿಯಪ್ಪ, ಗೋಪಾಲ್, ಮುನಿಯಪ್ಪ, ವೀರೇಶ್, ರಮೇಶ್, ನಾಗರಾಜ್, ಬಸವರಾಜ್ ಮತ್ತಿತರರು ಹಾಜರಿದ್ದರು.

ಮುಖಂಡರ ಮನೆಗಳಿಗೆ ಡಿವಿಎಸ್ ಭೇಟಿ
ಡಿ.ವಿ.ಸದಾನಂದಗೌಡ ಅವರು ಶುಕ್ರವಾರ ಬೆಳಿಗ್ಗೆ ಯಶವಂತಪುರ ವಿಧಾನ ಕ್ಷೇತ್ರದ ತಾವರೇಕೆರೆ ಹೋಬಳಿ ವ್ಯಾಪ್ತಿಯಲ್ಲಿ ಮುಖಂಡರ ಮನೆಗಳಿಗೆ ಭೇಟಿ ನೀಡಿ, ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿದರು. ಹಲವು ಪ್ರಮುಖರನ್ನು ಭೇಟಿ ಮಾಡಿ ತಮ್ಮ ವ್ಯಾಪ್ತಿಗಳಲ್ಲಿ ಹೆಚ್ಚು ಲೀಡ್ ಬರುವಂತೆ ನೋಡಿಕೊಳ್ಳುವಂತೆ ಮನವಿ ಮಾಡಿದರು.

ಸಬ್‍ ಅರ್ಬನ್ ರೈಲಿಗೆ ಬಾಣಸವಾಡಿಯಲ್ಲಿ ಕಾರ್ ಶೆಡ್ ಸ್ಥಾಪನೆ : ಡಿವಿಎಸ್ ಸಬ್‍ ಅರ್ಬನ್ ರೈಲಿಗೆ ಬಾಣಸವಾಡಿಯಲ್ಲಿ ಕಾರ್ ಶೆಡ್ ಸ್ಥಾಪನೆ : ಡಿವಿಎಸ್

ಚನ್ನೇನಹಳ್ಳಿಯಲ್ಲಿರುವ ಜಿಲ್ಲಾ ಪಂಚಾಯತ್ ಸದಸ್ಯ ನರಸಿಂಹಮೂರ್ತಿ ನಿವಾಸ, ಯಲಚಗುಪ್ಪದ ರಂಗಸ್ವಾಮಿ, ಜೈಪ್ರಕಾಶ್, ರಮೇಶ್, ಹೆನ್ನಗನಹಟ್ಟಿಯ ವರಲಕ್ಷ್ಮೀ ವೀರೇಶ್, ಮೇಟಿಪಾಳ್ಯದ ಗ್ರಾಪಂ ಸದಸ್ಯ ಬಸವರಾಜು ನಿವಾಸಗಳಿಗೆ ತೆರಳಿ ಮಾತುಕತೆ ನಡೆಸಿದರು.

ನಂತರ ವರ್ತೂರು ಗ್ರಾಮ ದೇವತೆ ಮಾರಮ್ಮದೇವಿ ದೇವಸ್ಥಾನಕ್ಕೆ ತೆರಳಿದ ಸದಾನಂದಗೌಡರು ಪೂಜೆ ಸಲ್ಲಿಸಿದರು. ಮುಖಂಡ ನಾಗರಾಜ್ ಮನಗೆ ತೆರಳಿ ಬೆಂಬಲ ಯಾಚಿಸಿದರು. ಪೆದ್ದನಪಾಳ್ಯ ಮುಖಾಂತರ ಗಾಣಕಲ್‍ಗೆ ತೆರಳಿ ಮುಖಂಡ ರಮೇಶ್ ನಿವಾಸ, ಕನಕನಗರದ ಲಕ್ಕಪ್ಪ, ಮನೆಗೆ ತೆರಳಿ ಮತ ಯಾಚಿಸಿದರು. ಬಳಿಕ ತಾವರೇಕೆರೆ ಮಾರಮ್ಮದೇವಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಬಳಿಕ ಕುಡುಸಿದ್ದನಪಾಳ್ಯ, ಚಿಕ್ಕನಹಳ್ಳಿ, ಗೊಲ್ಲಹಳ್ಳಿ, ದೊಡ್ಡೇರಿ, ಉದ್ದಂಡನಹಳ್ಳಿ, ಚುಂಚನಗುಪ್ಪೆ, ಗಣಪತಿಹಳ್ಳಿ, ಕೇತೋಹಳ್ಳಿ, ಕೋಲೂರು, ಚಿಕ್ಕೆಲ್ಲೂರು, ಸುಬ್ಬರಾಯನಪಾಳ್ಯ ಮತ್ತಿತರ ಕಡೆ ತೆರಳಿ ಮುಖಂಡರ ಮನೆಗಳಿಗೆ ಭೇಟಿ ನೀಡಿ ಮತ ಯಾಚಿಸಿದರು.

English summary
Lok Sabha elections 2019: Bangalore North BJp candidate DV Sadananda Gowda claimed there was no freedom to Armymen in UPA ruling, so the Pakistan went strong. But the NDA Prime Minister Narendra Modi has sent a message to the world we will not compromise in the matter of Nationa security.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X