ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಕೇಂದ್ರ: ಕಾಂಗ್ರೆಸ್‌-ಬಿಜೆಪಿ ನಡುವೆ ನಿಕಟ ಸ್ಪರ್ಧೆ

|
Google Oneindia Kannada News

ಬೆಂಗಳೂರು, ಮೇ 23: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್ ಹಾಗೂ ಬಿಜೆಪಿ ಪಿಸಿ ಮೋಹನ್ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿದೆ.

ಕಳೆದ ಬಾರಿ ಸಂಸದರಾಗಿ ಎರಡನೇ ಪ್ರಯತ್ನಕ್ಕೆ ಕೈ ಹಾಕಿದ್ದ ಪಿ.ಸಿ.ಮೋಹನ್ ಅವರು ಮಧ್ಯಾಹ್ನದ ವರೆಗೂ ಹಿನ್ನಡೆ ಅನುಭವಿಸಿದ್ದರು ಆದರೆ ನಂತರ ಏಕಾ-ಏಕಿ ಮುನ್ನಡೆಗೆ ಬಂದಿದ್ದಾರೆ.

ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರುಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು

ರಿಜ್ವಾನ್ ಅರ್ಷದ್ ಅವರು ಮಧ್ಯಾಹ್ನ 1 ಗಂಟೆ ವೇಳೆಗೆ 460815 ಮತಗಳನ್ನು ಪಡೆದಿದ್ದರು, ಸಮೀಪ ಪ್ರತಿಸ್ಪರ್ಧಿ ಪಿ.ಸಿ.ಮೋಹನ್ ಅವರು 476590 ಮತಗಳಿಸಿ ಮುನ್ನಡೆಯಲ್ಲಿದ್ದಾರೆ.

Lok sabha election results 2019: Bengaluru central constituency

ಇನ್ನೂ ಕೆಲವು ಸುತ್ತುಗಳ ಮತ ಎಣಿಕೆ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಬಾಕಿ ಇದ್ದು, ಈ ಕ್ಷೇತ್ರದ ಫಲಿತಾಂಶವು ಕೊನೆಯ ಸುತ್ತಿನ ಮತ ಎಣಿಕೆ ವರೆಗೂ ವಿಜಯಲಕ್ಷ್ಮಿ ಚಂಚೆಲೆಯಾಗುವ ಎಲ್ಲ ಸಾಧ್ಯತೆ ಇಲ್ಲಿ ಇದೆ.

ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರುಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು

ಬೆಂಗಳೂರು ನಗರದ ಮೂರು ಕ್ಷೇತ್ರಗಳಲ್ಲಿ ಎರಡರಲ್ಲಿ ಈಗಾಗಲೇ ಬಿಜೆಪಿ ಬಹುವಾಗಿ ಮುನ್ನಡೆ ಪಡೆದು ವಿಜಯದತ್ತ ದಾಪುಗಾಲು ಹಾಕಿದೆ. ಬೆಂಗಳೂರು ಕೇಂದ್ರ ಕ್ಷೇತ್ರ ಮಾತ್ರ ಕುತೂಹಲ ಮೂಡಿಸಿದೆ.

English summary
Lok sabha election results 2019: updates in Kannada. Congress candidate Rizwan Arshad, BJP candidate PC Mohan, neck to neck fight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X