ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇವಿಎಂ-ವಿವಿಪ್ಯಾಟ್ ಮತಗಳ ತಾಳೆಯಲ್ಲಿ ಲೋಪ ಆಗಿಲ್ಲ: ಬಿಇಎಲ್ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಜೂನ್ 1: ಇವಿಎಂ ಮತ್ತು ವಿವಿಪ್ಯಾಟ್ ತಾಳೆಯಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂಬ ವರದಿಗಳನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ತಳ್ಳಿಹಾಕಿದೆ.

ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಮತ್ತು ಮತದಾನ ದೃಢೀಕರಣ ರಸೀದಿ ಯಂತ್ರಗಳಲ್ಲಿ (ವಿವಿಪ್ಯಾಟ್‌) ದಾಖಲಾದ ಮತಗಳಲ್ಲಿ ಯಾವುದೇ ವ್ಯತ್ಯಾಸ ಎದುರಾಗಿಲ್ಲ ಎಂದು ಬಿಇಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂವಿ ಗೌತಮ ತಿಳಿಸಿದ್ದಾರೆ.

ವಿರೋಧಪಕ್ಷಗಳ ಆರೋಪದಲ್ಲಿ ಹುರುಳಿಲ್ಲ: ಇವಿಎಂ-ವಿವಿಪ್ಯಾಟ್ ತಾಳೆ ಸಂಪೂರ್ಣ ಪಕ್ಕಾವಿರೋಧಪಕ್ಷಗಳ ಆರೋಪದಲ್ಲಿ ಹುರುಳಿಲ್ಲ: ಇವಿಎಂ-ವಿವಿಪ್ಯಾಟ್ ತಾಳೆ ಸಂಪೂರ್ಣ ಪಕ್ಕಾ

'ಬಿಇಎಲ್‌ನ ವಾರ್ಷಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಮತಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದದ್ದು ವರದಿಯಾಗಿಲ್ಲ. ಅಂತಹ ಒಂದೇ ಒಂದು ಪ್ರಕರಣ ಕಂಡುಬಂದಿಲ್ಲ ಎಂದಿದ್ದಾರೆ.

Lok sabha election results 2019 BEL clarifies no mismatch between EVMs and VVPATs

ಸಿವಿಎಂಗಳಲ್ಲಿ ಯಾವುದೇ ವಂಚನೆ ಎಸಗಲು ಸಾಧ್ಯವೇ ಇಲ್ಲ. ಇವಿಎಂ ಮತ್ತು ವಿವಿಪ್ಯಾಟ್‌ಗಳಲ್ಲಿ ಮತಗಳು ತಾಳೆಯಾಗದ ಒಂದೂ ನಿದರ್ಶನ ಬಿಇಎಲ್‌ಗೆ ದೊರೆತಿಲ್ಲ. ಇವಿಎಂ ಕುರಿತಾದ ಎಲ್ಲ ವಿವಾದಗಳೂ ಈಗ ಬಗೆಹರಿದಿವೆ. ಇವಿಎಂಅನ್ನು ಹ್ಯಾಕ್ ಮಾಡಲು ಆಗುವುದಿಲ್ಲ ಎಂಬುದು ರಾಜಕೀಯ ಪಕ್ಷಗಳಿಗೆ ಚೆನ್ನಾಗಿ ಗೊತ್ತಾಗಿದೆ ಎಂದು ಹೇಳಿದ್ದಾರೆ.

ಇವಿಎಂ ಬಗ್ಗೆ ಮತ್ತೆ ತಕರಾರು ಎತ್ತಿದ ಕಾಂಗ್ರೆಸ್ ಮುಖಂಡರು ಇವಿಎಂ ಬಗ್ಗೆ ಮತ್ತೆ ತಕರಾರು ಎತ್ತಿದ ಕಾಂಗ್ರೆಸ್ ಮುಖಂಡರು

ನಾವು ಇವಿಎಂಗಳನ್ನು ಮಾತ್ರ ಬಳಸಿದಾಗ ಭಾರತದ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ. ಇವಿಎಂ ಜತೆ ವಿವಿಪ್ಯಾಟ್‌ಗಳು ಚುನಾವಣೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂಬುದನ್ನು ದೃಢಪಡಿಸಿಕೊಳ್ಳಲು ನೆರವಾಗುತ್ತದೆ. ಒಂದು ವೇಳೆ ಅಕ್ರಮ ನಡೆದರೂ ಅದನ್ನು ಪತ್ತೆಹಚ್ಚಬಹುದು. ಪೇಪರ್ ಬ್ಯಾಲಟ್‌ಗಳನ್ನು ಬಳಸಿದಾಗ ಅಕ್ರಮಗಳು ನಡೆದರೂ ಏನೂ ಮಾಡಲು ಆಗುವುವಿಲ್ಲ ಎಂದು ವಿವರಿಸಿದ್ದಾರೆ.

ಚುನಾವಣಾ ಆಯೋಗಕ್ಕೆ ಬಿಇಎಲ್ ಹತ್ತು ಲಕ್ಷ ಮತಯಂತ್ರಗಳನ್ನು ಪೂರೈಸಿತ್ತು ಎಂದು ಅವರು ಹೇಳಿದ್ದಾರೆ.

ಇವಿಎಂ ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ: ಐಪಿಎಸ್ ಅಧಿಕಾರಿ ರೂಪಾ ಇವಿಎಂ ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ: ಐಪಿಎಸ್ ಅಧಿಕಾರಿ ರೂಪಾ

373ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಇವಿಎಂ ಮತ್ತು ವಿವಿಪ್ಯಾಟ್‌ಗಳಲ್ಲಿ ಮತಗಳ ನಡುವೆ ವ್ಯತ್ಯಾಸ ಕಂಡುಬಂದಿತ್ತು ಎಂದು 'ದಿ ಕ್ವಿಂಟ್' ವರದಿ ಮಾಡಿತ್ತು.

ಇವುಗಳಲ್ಲಿ ತಾಳೆಯಾಗಿಲ್ಲ ಎನ್ನುವುದಕ್ಕೆ ಅಲ್ಲಿ ಎಣಿಕೆಯಾದ ಇವಿಎಂ ಮತಗಳು ಹಾಗೂ ಚುನಾವಣಾ ಆಯೋಗ ನೀಡಿದ ಡೇಟಾದ ನಡುವಿನ ವ್ಯತ್ಯಾಸವೇ ಸಾಕ್ಷಿ ಎಂದು ಅದು ವರದಿಯಲ್ಲಿ ಹೇಳಿತ್ತು. ಈ ವ್ಯತ್ಯಾಸದ ಬಗ್ಗೆ ಮಾಹಿತಿ ಕೇಳಿದಾಗ ಚುನಾವಣಾ ಆಯೋಗ ಯಾವುದೇ ವಿವರಣೆ ನೀಡಿಲ್ಲ ಎಂದು ಅದು ತಿಳಿಸಿತ್ತು.

English summary
Lok sabha election results 2019: BEL CMD clarified that, no mismatch reported between votes recorded in EVM and VVPAT during the Lok Sabha elections 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X