ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಸೆಂಟ್ರಲ್ : ಪ್ರಕಾಶ್ ರಾಜ್‌ಗೆ ಭಾರಿ ಹಿನ್ನಡೆ

|
Google Oneindia Kannada News

ಬೆಂಗಳೂರು, ಮೇ 23 : ನಟ, ನಿರ್ದೇಶಕ ಪ್ರಕಾಶ್ ರಾಜ್ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಅವರು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಪಿ.ಸಿ.ಮೋಹನ್ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ.

ಲೋಕಸಭಾ ಚುನಾವಣೆ ಮತ ಎಣಿಕೆ ಬಿರುಸಿನಿಂದ ನಡೆಯುತ್ತಿದೆ. ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಬಿಜೆಪಿಯ ಪಿ.ಸಿ.ಮೋಹನ್ ಅವರು ಜಯಗಳಿಸಿದ್ದಾರೆ. 70,988 ಮತಗಳ ಅಂತರದಿಂದ ಅವರು ಗೆಲುವು ಸಾಧಿಸಿದ್ದಾರೆ.

ನನಗೆ ಇದು ಬಲವಾದ ಕಪಾಳಮೋಕ್ಷ: ಸೋಲಿನ ಬಳಿಕ ಪ್ರಕಾಶ್ ರೈ ಹೇಳಿಕೆನನಗೆ ಇದು ಬಲವಾದ ಕಪಾಳಮೋಕ್ಷ: ಸೋಲಿನ ಬಳಿಕ ಪ್ರಕಾಶ್ ರೈ ಹೇಳಿಕೆ

Lok Sabha Election Result 2019 : Prakash Raj trailing in Bangalore Central

ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಪ್ರಕಾಶ್ ರಾಜ್ ಅವರು 28,906 ಮತಗಳನ್ನು ಪಡೆದು ಸೋಲು ಅನುಭವಿಸಿದರು. ಪ್ರಕಾಶ್ ರಾಜ್ ಅವರು ನಿರೀಕ್ಷೆ ಮಾಡಿದ್ದಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದಾರೆ.

ಆಟೋದಲ್ಲಿ ಬಂದು ಮತದಾನ ಮಾಡಿದ ರಿಜ್ವಾನ್ ಅರ್ಷದ್ಆಟೋದಲ್ಲಿ ಬಂದು ಮತದಾನ ಮಾಡಿದ ರಿಜ್ವಾನ್ ಅರ್ಷದ್

ಬಿಜೆಪಿಯ ಪಿ.ಸಿ.ಮೋಹನ್ ಅವರು 602853, ಕಾಂಗ್ರೆಸ್‌-ಜೆಡಿಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರು 5,31,885 ಮತಗಳನ್ನು ಪಡೆದಿದ್ದಾರೆ. ಪ್ರಕಾಶ್ ರಾಜ್ 28,906 ಮತಗಳನ್ನು ಪಡೆದಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರುಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು

ಪಿ.ಸಿ.ಮೋಹನ್ ಮತ್ತು ರಿಜ್ವಾನ್ ಅರ್ಷದ್ ಅವರು 2014ರ ಚುನಾವಣೆಯಲ್ಲಿಯೂ ಎದುರಾಳಿಯಾಗಿದ್ದರು. 1,37,500 ಮತಗಳಿಂದ ಪಿ.ಸಿ.ಮೋಹನ್ ಅವರು ಜಯಗಳಿಸಿದ್ದರು.

ಲೋಕಸಭಾ ಚುನಾವಣೆ ಫಲಿತಾಂಶದಿಂದ ನನಗೆ ಕಪಾಳ ಮೋಕ್ಷವಾಗಿದೆ. ಸೋಲಿನಿಂದ ಸಾಮಾಜಿಕ ಜಾಲತಾಣದಲ್ಲಿ ಇನ್ನಷ್ಟು ನಿಂದನೆ ಎದುರಿಸಬೇಕಿದೆ. ನಾನು ಎಲ್ಲವನ್ನೂ ಎದುರಿಸುತ್ತೇನೆ. ಜಾತ್ಯಾತೀತ ತತ್ವದ ಉಳಿವಿಗಾಗಿ ಹೋರಾಟ ಮುಂದುವರೆಸುತ್ತೇನೆ ಎಂದು ಪ್ರಕಾಶ್ ರೈ ಹೇಳಿದ್ದಾರೆ.

English summary
Actor, Film director, Producer Prakash Raj trailing in Bangalore Centrral Lok Sabha seat. BJP's P.C.Mohan 1089 votes lead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X