ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ: ಕಾಂಗ್ರೆಸ್ಸಿಗೆ ಎಷ್ಟು ಅಸೆಂಬ್ಲಿ ಕ್ಷೇತ್ರಗಳಲ್ಲಿ ಹಿನ್ನಡೆ

By Srinath
|
Google Oneindia Kannada News

ಬೆಂಗಳೂರು, ಮೇ 29: ಕರ್ನಾಟಕದ ಮತದಾರರ ಒಲವೇ ಹಾಗಿದೆ: ಲೋಕಸಭೆ ಮತ್ತು ವಿಧಾನಸಭೆಗೆ ಪರಸ್ಪರ ವಿರೋಧಿ ಪಕ್ಷಗಳನ್ನು ಆರಿಸಿ ಕಳುಹಿಸುವ ತಾಕತ್ತು ನಮ್ಮ ಮತದಾರರದ್ದು. ಈ ಬಾರಿಯೂ ಹಾಗೆಯೇ ಆಗಿದೆ: ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ಸಿಗೆ ವಿರುದ್ಧವಾಗಿ ಕೇಂದ್ರದಲ್ಲಿ ಬಿಜೆಪಿಯನ್ನು ಪ್ರತಿಷ್ಠಾಪಿಸಿದ್ದಾರೆ.

ಆದರೆ ಲೋಕಸಭಾ ಚುನಾವಣೆಯ ಫಲಿತಾಂಶಗಳನ್ನು ತುಲನೆ ಮಾಡಿ ನೋಡಿದಾಗ ಅನೇಕ ಹೊಸ ಹೊಳಹುಗಳು ರಾಚುತ್ತವೆ. ಮೇಲ್ನೋಟಕ್ಕೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 17 ಕ್ಷೇತ್ರಗಳನ್ನು ಬಿಜೆಪಿ ಮಡಿಲಿಗೆ ಹಾಕಿರುವ ಮತದಾರ, 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನೂ ಮತ್ತು ಎರಡರಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಚುನಾಯಿಸಿದ್ದಾರೆ.

ಲೆಕ್ಕಾಚಾರದ ಪ್ರಕಾರ ಪ್ರತಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸರಾಸರಿ 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಪ್ರಸ್ತುತ 224 ಸ್ಥಾನಗಳ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ ಅಗತ್ಯವಿರುವುದು 113 ಸ್ಥಾನಗಳು. ಸದ್ಯಕ್ಕೆ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನಗಳನ್ನು ಗಳಿಸಿ, ಉತ್ತಮ ಸ್ಥಿತಿಯಲ್ಲಿದೆ.

Lok Sabha election Results 2014 compared to Assembly segments in Karnataka

ಆದರೆ ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಮೋದಿ ಅಲೆಯಲ್ಲಿ 17 ಲೋಕಸಭಾ ಸ್ಥಾನಗಳನ್ನು ಗಳಿಸುವ ಮೂಲಕ ಮೇಲಿನ ಲೆಕ್ಕಾಚಾರವನ್ನು ಏರುಪೇರು ಮಾಡಿದೆ. ಎಲ್ಲಾ 28 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಪಕ್ಷವು 132 ವಿಧಾನಸಭಾ ಕ್ಷೇತ್ರಗಳಲ್ಲಿ ಮತಗಳಿಕೆಯಲ್ಲಿ ಸ್ಪಷ್ಟ ಮುನ್ನಡೆ ಸಾಧಿಸಿದೆ. ಅದರರ್ಥ ಬಿಜೆಪಿಯ ಹಾಲಿ ಬಲಾಬಲ 44 ಪ್ಲಸ್ ಗಿಂತ ಮೂರು ಪಟ್ಟು ಹೆಚ್ಚು ಸ್ಥಾನಗಳನ್ನು ಗಳಿಸಿದೆ ಎಂದಾಯಿತು.

ಆದರೆ ಲೋಕಸಭಾ ಚುನಾವಣೆಯೇ ಬೇರೆ ಅಸೆಂಬ್ಲಿ ಎಲೆಕ್ಷನ್ನುಗಳೇ ಬೇರೆ. ಎರಡನ್ನೂ ಹೋಲಿಕೆ ಮಾಡುವುದು ಸರ್ವಥಾ ಸಲ್ಲದು. ಆದರೂ ಸದ್ಯದ ಲೆಕ್ಕಾಚಾರದಲ್ಲಿ ಬಿಜೆಪಿ ಸಾಮರ್ಥ್ಯ ವೃದ್ಧಿಸಿರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.

ಗಮನಾರ್ಹವೆಂದರೆ ಅನಂತಕುಮಾರ್, ಯಡಿಯೂರಪ್ಪ, ಶಿವಕುಮಾರ್ ಉದಾಸಿ ಮತ್ತು ಶೋಭಾ ಕರಂದ್ಲಾಜೆ ಅವರು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಸಂಪೂರ್ಣವಾಗಿ ಬಾಚಿಕೊಂಡಿದ್ದಾರೆ.

ಆದರೆ ಚಾಮರಾಜನಗರ ಕ್ಷೇತ್ರದಲ್ಲಿ ಮಾತ್ರ (ಧ್ರುವನಾರಾಯಣ್) ಕಾಂಗ್ರೆಸ್ ಎಂಟೂ ವಿಧಾನಸಭಾ ಕ್ಷೇತ್ರಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ಇನ್ನು, ದೇವೇಗೌಡರ ಪ್ರಾಬಲ್ಯದ ಹಾಸನದಲ್ಲಿ ಕಾಂಗ್ರೆಸ್ ಒಂದು ಕ್ಷೇತ್ರದವನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಉಳಿದ ಏಳರಲ್ಲಿ ದೇವೇಗೌಡರು ಏಳಿಗೆ ಕಂಡಿದ್ದಾರೆ. 6 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಸಮಬಲ ಸಾಧಿಸಿವೆ.

ಹಾಸನ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜೆಡಿಎಸ್ 12 ವಿಧಾನಸಭಾ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಿದೆ. ಈ ಮೂರೂ ಪಕ್ಷಗಳನ್ನು ಹೊರತು ಪಡಿಸಿ ಉಳಿದ ಯಾವುದೇ ಪಕ್ಷವೂ ಒಂದೇ ಒಂದು ವಿಧಾನಸಭಾ ಕ್ಷೇತ್ರದಲ್ಲಿಯೂ ಮೇಲುಗೈ ಸಾಧಿಸಿಲ್ಲ.

ಲೋಕಸಭಾ ಕ್ಷೇತ್ರದಲ್ಲಿ ಪಕ್ಷಗಳ ಬಲ: ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷಗಳ ಬಲಾಬಲ
1. ಬೆಂಗಳೂರು ದಕ್ಷಿಣ (ಬಿಜೆಪಿ) : ಬಿಜೆಪಿ- 8
2. ಬೆಂಗಳೂರು ಕೇಂದ್ರ (ಬಿಜೆಪಿ) : ಬಿಜೆಪಿ- 5 ಕಾಂಗ್ರೆಸ್ - 3
3. ಬೆಂಗಳೂರು ಉತ್ತರ (ಬಿಜೆಪಿ) : ಬಿಜೆಪಿ- 7 ಕಾಂಗ್ರೆಸ್ - 1
4. ಬೆಂಗಳೂರು ಗ್ರಾ (ಬಿಜೆಪಿ) : ಬಿಜೆಪಿ- 3 ಕಾಂಗ್ರೆಸ್ - 5
5. ಚಿಕ್ಕಬಳ್ಳಾಪುರ (ಕಾಂಗ್ರೆಸ್) : ಬಿಜೆಪಿ- 1 ಕಾಂಗ್ರೆಸ್ - 4 ಜೆಡಿಎಸ್ - 2, ಪಕ್ಷೇತರ 1
6. ತುಮಕೂರು (ಕಾಂಗ್ರೆಸ್) : ಬಿಜೆಪಿ- 4 ಕಾಂಗ್ರೆಸ್ - 4
7. ಕೋಲಾರ (ಕಾಂಗ್ರೆಸ್) : ಬಿಜೆಪಿ- 2 ಕಾಂಗ್ರೆಸ್ - 4 ಜೆಡಿಎಸ್ - 2
8. ಹಾಸನ (ಜೆಡಿಎಸ್) : ಕಾಂಗ್ರೆಸ್ - 1 ಜೆಡಿಎಸ್ - 7
9. ಮಂಡ್ಯ (ಜೆಡಿಎಸ್) : ಕಾಂಗ್ರೆಸ್ - 5 ಜೆಡಿಎಸ್ - 3
10. ಚಾಮರಾಜನಗರ (ಕಾಂಗ್ರೆಸ್) : ಕಾಂಗ್ರೆಸ್ - 8
11. ಬಿಜಾಪುರ (ಬಿಜೆಪಿ) : ಬಿಜೆಪಿ - 6 ಕಾಂಗ್ರೆಸ್ - 2
12. ಚಿಕ್ಕೋಡಿ (ಕಾಂಗ್ರೆಸ್) : ಬಿಜೆಪಿ - 4 ಕಾಂಗ್ರೆಸ್ - 4
13. ಬೀದರ್ (ಬಿಜೆಪಿ) : ಬಿಜೆಪಿ - 5 ಕಾಂಗ್ರೆಸ್ - 3
14 ಗುಲ್ಬರ್ಗ (ಕಾಂಗ್ರೆಸ್) : ಬಿಜೆಪಿ - 3 ಕಾಂಗ್ರೆಸ್ - 5
15. ಬಾಗಲಕೋಟೆ (ಬಿಜೆಪಿ) : ಬಿಜೆಪಿ - 7 ಕಾಂಗ್ರೆಸ್ - 1
16. ಧಾರವಾಡ (ಬಿಜೆಪಿ) : ಬಿಜೆಪಿ- 6 ಕಾಂಗ್ರೆಸ್ - 2
17. ಬೆಳಗಾವಿ (ಬಿಜೆಪಿ) : ಬಿಜೆಪಿ- 6 ಕಾಂಗ್ರೆಸ್ - 2
18. ರಾಯಚೂರು (ಕಾಂಗ್ರೆಸ್) : ಬಿಜೆಪಿ- 4 ಕಾಂಗ್ರೆಸ್ - 4
19. ಚಿತ್ರದುರ್ಗ (ಕಾಂಗ್ರೆಸ್) : ಬಿಜೆಪಿ- 2 ಕಾಂಗ್ರೆಸ್ - 6
20. ಬಳ್ಳಾರಿ (ಬಿಜೆಪಿ) : ಬಿಜೆಪಿ- 7 ಕಾಂಗ್ರೆಸ್ - 1
21. ಕೊಪ್ಪಳ (ಬಿಜೆಪಿ) : ಬಿಜೆಪಿ- 4 ಕಾಂಗ್ರೆಸ್ - 4
22. ಹಾವೇರಿ (ಬಿಜೆಪಿ) : ಬಿಜೆಪಿ- 8
23 ಉತ್ತರ ಕನ್ನಡ (ಬಿಜೆಪಿ) : ಬಿಜೆಪಿ- 7 ಕಾಂಗ್ರೆಸ್ - 1
24. ಶಿವಮೊಗ್ಗ (ಬಿಜೆಪಿ) : ಬಿಜೆಪಿ- 8
25. ದಾವಣಗೆರೆ (ಬಿಜೆಪಿ) : ಬಿಜೆಪಿ- 4 ಕಾಂಗ್ರೆಸ್ - 4
26. ದಕ್ಷಿಣ ಕನ್ನಡ (ಬಿಜೆಪಿ) : ಬಿಜೆಪಿ- 7 ಕಾಂಗ್ರೆಸ್ - 1
27. ಮೈಸೂರು (ಬಿಜೆಪಿ) : ಬಿಜೆಪಿ- 4 ಕಾಂಗ್ರೆಸ್ - 4
28. ಉಡುಪಿ-ಚಿಕ್ಕಮಗಳೂರು (ಬಿಜೆಪಿ) : ಬಿಜೆಪಿ- 8

English summary
Lok Sabha election Results 2014 compared to Assembly segments in Karnataka. Here goes the tally BJP leads in 132 Assembly segments while Congress leads in 78 and JDS leads in just 12 and Independent 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X