ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್‌ಡೌನ್; ಬೆಂಗಳೂರಲ್ಲಿ ಕಸದ ಉತ್ಪಾದನೆ ಶೇ 17ರಷ್ಟು ಕುಸಿತ

|
Google Oneindia Kannada News

ಬೆಂಗಳೂರು, ಜೂನ್ 30; ಕೋವಿಡ್ 2ನೇ ಅಲೆ ಹರಡುವಿಕೆ ತಡೆಯಲು ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿತ್ತು. ಬೆಂಗಳೂರು ನಗರದಲ್ಲಿ ಲಾಕ್‌ಡೌನ್ ಅವಧಿಯಲ್ಲಿ ಕಸ ಉತ್ಪಾದನೆ ಇಳಿಕೆಯಾಗಿದೆ.

ಲಾಕ್‌ಡೌನ್ ಪರಿಣಾಮ ಹೋಟೆಲ್, ರೆಸ್ಟೋರೆಂಟ್, ಅಂಗಡಿ, ಫುಡ್ ಸ್ಟ್ರೀಟ್‌ಗಳು ಮುಚ್ಚಿದ್ದರಿಂದ ಕಸ ಉತ್ಪಾದನೆ ಶೇ 17ರಷ್ಟು ಇಳಿಕೆಯಾಗಿದೆ. ಮೊದಲ ಅಲೆ ಲಾಕ್‌ಡೌನ್‌ಗೆ ಹೋಲಿಕೆ ಮಾಡಿದರೆ ಇದು ಕಡಿಮೆ.

ಬೆಂಗಳೂರು: ಕೊರೊನಾದಿಂದಾಗಿ ವಿಮಾನಯಾನ ಶೇ.66ರಷ್ಟು ಕುಸಿತಬೆಂಗಳೂರು: ಕೊರೊನಾದಿಂದಾಗಿ ವಿಮಾನಯಾನ ಶೇ.66ರಷ್ಟು ಕುಸಿತ

"ಲಾಕ್‌ಡೌನ್‌ಗೂ ಮೊದಲು ನಗರದಲ್ಲಿ 4000 ರಿಂದ 4,200 ಟನ್ ಕಸ ಪ್ರತಿದಿನ ಉತ್ಪಾದನೆಯಾಗುತ್ತಿತ್ತು. ಮೇ ತಿಂಗಳಿನಲ್ಲಿ 3 ರಿಂದ 3,500 ಟನ್ ಕಸ ಉತ್ಪತ್ತಿಯಾಗಿದೆ. ಜೂನ್ ತನಕವೂ ಇದು ಮುಂದುವರೆದಿದೆ" ಎಂದು ಘನತ್ಯಾಜ್ಯ ವಿಲೇವಾರಿ ಮುಖ್ಯ ಇಂಜಿನಿಯರ್ ಪಿ. ವಿಶ್ವನಾಥ್ ಹೇಳಿದ್ದಾರೆ.

ಬೆಂಗಳೂರು ನಗರದ ಕಸ ನಿರ್ವಹಣೆಗೆ ಬಿಬಿಎಂಪಿ ಹೊಸ ಪ್ರಯತ್ನ ಬೆಂಗಳೂರು ನಗರದ ಕಸ ನಿರ್ವಹಣೆಗೆ ಬಿಬಿಎಂಪಿ ಹೊಸ ಪ್ರಯತ್ನ

Lockdwown Garbage Production Come Down In City

2020ರಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದಾಗ ಕಸ ಉತ್ಪಾದನೆ ಪ್ರಮಾಣ ಶೇ 20 ರಿಂದ 30ರಷ್ಟು ಕಡಿಮೆಯಾಗಿತ್ತು. ಆದರೆ ಈ ಬಾರಿ ಲಾಕ್‌ಡೌನ್ ಸಂದರ್ಭದಲ್ಲಿ ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಅನುಮತಿ ಇದ್ದ ಕಾರಣ ಹಲವಾರು ಹೋಟೆಲ್ ಕಾರ್ಯ ನಿರ್ವಹಣೆ ಮಾಡಿವೆ.

ಹುಬ್ಬಳ್ಳಿ; ಅವಳಿ ನಗರದಲ್ಲಿ ಕಸ ಸುರಿದರೆ ದಂಡ ಹುಬ್ಬಳ್ಳಿ; ಅವಳಿ ನಗರದಲ್ಲಿ ಕಸ ಸುರಿದರೆ ದಂಡ

ಈಗ ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದು, ಲಾಕ್‌ಡೌನ್
ನಿಯಮಗಳಲ್ಲಿ ವಿನಾಯಿತಿ ನೀಡಲಾಗಿದೆ. ಮಳೆಗಾಲವೂ ಆರಂಭವಾಗಿದ್ದು, ಕಸ ಸಂಗ್ರಹಣೆ ಬಿಬಿಎಂಪಿಗೆ ಮತ್ತೆ ಸವಾಲಾಗಲಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮನೆ ಬಾಗಿಲಿನಲ್ಲಿಯೇ ಕಸ ಸಂಗ್ರಹಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿದೆ. ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಸ ಸುರಿದು ಬ್ಲಾಕ್ ಸ್ಪಾಟ್ ನಿರ್ಮಾಣ ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಒಣ ಮತ್ತು ಹಸಿ ಕಸವನ್ನು ವಿಂಗಡಣೆ ಮಾಡಿಕೊಡಬೇಕು. ಕಸವನ್ನು ಒಟ್ಟಿಗೆ ಕೊಡುವವರ ವಿರುದ್ಧವೂ ದಂಡ ಪ್ರಯೋಗವನ್ನು ಮಾಡುತ್ತಿದೆ. ಮನೆಯ ಬಾಗಿಲಿನಲ್ಲಿಯೇ ಜನರು ಗಾಡಿಗಳಿಗೆ ಕಸವನ್ನು ಹಾಕಬಹುದು.

Recommended Video

Sriramulu ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಭೈರತಿ ಬಸವರಾಜ್ | Oneindia Kannada

English summary
Due to lockdown in Bengalru city the amount of garbage produced in the city had come down by 17 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X