ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೋಮವಾರದಿಂದ ಬಿಎಂಟಿಸಿ ಬಸ್ ಸಂಚಾರ; ಷರತ್ತು ಅನ್ವಯ

|
Google Oneindia Kannada News

ಬೆಂಗಳೂರು, ಜೂನ್ 13; ಕರ್ನಾಟಕದಲ್ಲಿ ಲಾಕ್‌ಡೌನ್‌ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ. ಜೂನ್ 14ರ ಸೋಮವಾರದಿಂದ ಹೊಸ ಆದೇಶ ಜಾರಿಗೆ ಬರಲಿದೆ. ಬೆಂಗಳೂರು ನಗರದಲ್ಲಿಯೂ ನಿಯಮಗಳನ್ನು ಸಡಿಲಿಕೆ ಮಾಡಲಾಗಿದ್ದು,ಕೆಲವು ಬಿಎಂಟಿಸಿ ಬಸ್‌ಗಳ ಸಂಚಾರ ಆರಂಭವಾಗಲಿದೆ.

ಜೂನ್ 14ರ ಬೆಳಗ್ಗೆ 6 ಗಂಟೆಗೆ ಲಾಕ್‌ಡೌನ್ ಪೂರ್ಣಗೊಳ್ಳಲಿದೆ. 11 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಕಡೆ ಲಾಕ್‌ಡೌನ್ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿದೆ.

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಮತ್ತಷ್ಟು ವಿಳಂಬಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಮತ್ತಷ್ಟು ವಿಳಂಬ

ಹೊಸ ಮಾರ್ಗಸೂಚಿ ಅನ್ವಯ ಬಿಎಂಟಿಸಿ ಮತ್ತು ಕೆಎಸ್ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಅವಕಾಶವಿಲ್ಲ. ಆದರೆ ಅಗತ್ಯ ಸೇವೆಗಳಿಗಾಗಿ ಬಸ್‌ಗಳು ಸಂಚಾರ ನಡೆಸಲಿವೆ. ಹಲವು ಷರತ್ತಿನ ಮೇಲೆ ಬಸ್‌ಗಳು ಸಂಚಾರ ನಡೆಸಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಿಎಂಟಿಸಿ ಟಿಕೆಟ್ ದರ ಹೆಚ್ಚಳ ಪ್ರಸ್ತಾಪ; ಸಾರಿಗೆ ಸಚಿವರು ಹೇಳುವುದೇನು?ಬಿಎಂಟಿಸಿ ಟಿಕೆಟ್ ದರ ಹೆಚ್ಚಳ ಪ್ರಸ್ತಾಪ; ಸಾರಿಗೆ ಸಚಿವರು ಹೇಳುವುದೇನು?

ಅಗತ್ಯ ಸೇವೆಗಳಡಿ ಬರುವ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳ ಸಿಬ್ಬಂದಿ ಸೇರಿದಂತೆ ಇತರರು ಸಂಚಾರ ನಡೆಸಲು ಬಸ್ ಸೇವೆಯನ್ನು ಆರಂಭಿಸಲಾಗುತ್ತಿದೆ. ಈ ಕುರಿತು ಬಿಎಂಟಿಸಿ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಸಾಮಾನ್ಯ ಜನರು ಬಸ್‌ಗಳಲ್ಲಿ ಸಂಚಾರ ನಡೆಸಲು ಅವಕಾಶವಿಲ್ಲ.

ಬಿಎಂಟಿಸಿ ಖಾಸಗೀಕರಣ; ಹೇಗೆ ನಡೆಯಲಿದೆ ಪ್ರಕ್ರಿಯೆ? ಬಿಎಂಟಿಸಿ ಖಾಸಗೀಕರಣ; ಹೇಗೆ ನಡೆಯಲಿದೆ ಪ್ರಕ್ರಿಯೆ?

ಯಾರು ಸಂಚಾರ ನಡೆಸಬಹುದು

ಯಾರು ಸಂಚಾರ ನಡೆಸಬಹುದು

ಸರ್ಕಾರಿ, ಅರೆ ಸರ್ಕಾರಿ ಸಿಬ್ಬಂದಿಗಳು. ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು, ನರ್ಸ್, ಅಧಿಕಾರಿಗಳು, ಸಿಬ್ಬಂದಿ, ಪ್ರಯೋಗಶಾಲಾ ತಂತ್ರಜ್ಞರು ಪ್ರಯಾಣಿಸಬಹುದು. ಪ್ಯಾರಾಮೆಡಿಕಲ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೊಲೀಸ್ & ಗೃಹ ರಕ್ಷದ ದಳ, ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ. ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ ಸಿಬ್ಬಂದಿಗಳು ಸಂಚಾರ ನಡೆಸಬಹುದು.

ಗುರುತಿನ ಚೀಟಿ ತೋರಿಸಬೇಕು

ಗುರುತಿನ ಚೀಟಿ ತೋರಿಸಬೇಕು

ಬಸ್ ಹತ್ತುವಾಗ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ತೋರಿಸಬೇಕು. ಅನುಮತಿ ನೀಡಿದವರು ಮಾತ್ರ ಬಸ್‌ಗಳಲ್ಲಿ ಸಂಚಾರ ನಡೆಸಬೇಕು. ಪಾಸ್ ಇಲ್ಲದಿದ್ದರೆ ಟಿಕೆಟ್ ಪಡೆದು ಪ್ರಯಾಣ ನಡೆಸಬೇಕು. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು.

ಶೇ 50ರಷ್ಟು ಜನರ ಸಂಚಾರ

ಶೇ 50ರಷ್ಟು ಜನರ ಸಂಚಾರ

ಬಸ್‌ಗಳ ಆಸನ ಸಾಮರ್ಥ್ಯದ ಶೇ 50ರಷ್ಟು ಜನರು ಮಾತ್ರ ಸಂಚಾರ ನಡೆಸಬೇಕು. ಬಸ್ ಹತ್ತುವಾಗ ಇಳಿಯುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಬಸ್‌ನಲ್ಲಿ ಸಂಚಾರ ನಡೆಸುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕರ್ತವ್ಯ ನಿರ್ವಹಣೆ ಮಾಡುವ ಚಾಲಕ, ನಿರ್ವಾಹಕರು ಸಹ ಮಾಸ್ಕ್ ಧರಿಸಬೇಕು ಎಂದು ಬಿಎಂಟಿಸಿ ಮಾರ್ಗಸೂಚಿಯಲ್ಲಿ ತಿಳಿಸಿದೆ.

Recommended Video

Biharನ ಬ್ಯಾಂಕ್ ಒಂದರಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ | Bank Robbery | Oneindia Kannada
ಬಸ್‌ನಲ್ಲಿ ಶುಚಿತ್ವ ಕಾಪಾಡುವುದು

ಬಸ್‌ನಲ್ಲಿ ಶುಚಿತ್ವ ಕಾಪಾಡುವುದು

ಸಿಬ್ಬಂದಿ ಬಸ್‌ ಸ್ಯಾನಿಟೈಸ್ ಮಾಡಿ ಶುಚಿತ್ವವನ್ನು ಕಾಪಾಡಬೇಕು. ಬಸ್‌ನಲ್ಲಿ ಮಾರ್ಗ ಸಂಖ್ಯೆ, ಬಸ್ ತಲುಪುವ ಸ್ಥಳದ ಮಾಹಿತಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಬಿಎಂಟಿಸಿ ಸೂಚನೆ ನೀಡಿದೆ.

English summary
Lockdown relaxation announced in Karnataka from June 14. BMTC to resume bus services for government officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X