ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಬೆಂಗಳೂರು ಫೌಂಡೇಶನ್ ವತಿಯಿಂದ 24 ಕೋಟಿ ರು ದಿನಸಿ ಕಿಟ್

|
Google Oneindia Kannada News

ಬೆಂಗಳೂರು, ಮೇ 29: ಬೆಂಗಳೂರು ನಗರದ ಹಲವು ಎನ್‌ಜಿಒಗಳ ಸಹಯೋಗದೊಂದಿಗೆ, ನಮ್ಮ ಬೆಂಗಳೂರು ಫೌಂಡೇಶನ್ ವತಿಯಿಂದ (ಎನ್‌ಬಿಎಫ್) ಕೊರೊನಾವೈರಸ್ ಲಾಕ್‌ಡೌನ್‌ನಿಂದ ತೊಂದರೆಗೆ ಒಳಗಾದ 4.5 ಲಕ್ಷ ಬಡ ಕುಟುಂಬಗಳಿಗೆ 24 ಕೋಟಿ ರು ಮೌಲ್ಯದ ದಿನಸಿ ಕಿಟ್‌ಗಳನ್ನು ವಿತರಿಸಲಾಗಿದೆ ಎಂದು ಎನ್‌ಬಿಎಫ್ ತಿಳಿಸಿದೆ.

Recommended Video

ಸತ್ತ ತಾಯಿಯನ್ನು ಎಬ್ಬಿಸಲು ಪ್ರಯತ್ನಿಸಿದ ಮಗು ವಿಡಿಯೋ ವೈರಲ್ | Oneindia Kannada

ಈ ಕುರಿತು ಶುಕ್ರವಾರ ಮಾಧ್ಯಮ ಪ್ರಕಟಣೆ ನೀಡಿರುವ ಎನ್‌ಬಿಎಫ್, ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಸಂಭವಿಸಿರುವ ಈ ಬಿಕ್ಕಟ್ಟಿನ ಸಮಯದಲ್ಲಿ ಉದ್ಯೋಗವನ್ನು ಕಳೆದುಕೊಂಡಿರುವ ಅತ್ಯಂತ ದುರ್ಬಲ ಸಮುದಾಯಗಳಿಗೆ ಸಹಾಯ ಮಾಡಲು ನಮ್ಮ ಬೆಂಗಳೂರು ಪ್ರತಿಷ್ಠಾನದ ಜೊತೆಗೆ ಲಾಭೋದ್ದೇಶವಿಲ್ಲದ ಸಂಸ್ಥೆಗಳಾದ ಆಟ್ರಿಯಾ ಫೌಂಡೇಶನ್, ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ (ಜಿಐಟಿಒ), ಸತ್ಸಂಗ್ ಫೌಂಡೇಶನ್, ಗಾಡ್ವಾಡ್ ಭವನ, ಎವಿಎಎಸ್(ಆವಾಸ್), ಗಿಲ್ಗಲ್ ಚಾರಿಟೇಬಲ್ ಟ್ರಸ್ಟ್ ಮತ್ತು ಕೆಲವು ಸ್ವತಂತ್ರ ದಾನಿಗಳು ದೇಣಿಗೆ ನೀಡುವ ಮೂಲಕ ಕೈ ಜೋಡಿಸಿದರು ಎಂದು ತಿಳಿಸಿದೆ.

ಲಾಕ್‌ಡೌನ್ ಹೊಡೆತ: ಬಾಣಲೆಯಿಂದ ಬೆಂಕಿಗೆ ಬಡವರು, ಕಾರ್ಮಿಕರುಲಾಕ್‌ಡೌನ್ ಹೊಡೆತ: ಬಾಣಲೆಯಿಂದ ಬೆಂಕಿಗೆ ಬಡವರು, ಕಾರ್ಮಿಕರು

ಇದಕ್ಕಾಗಿ ಎನ್‌ಬಿಎಫ್ ಎನ್‌ಜಿಓ ಸಂಸ್ಥೆಗಳ ಜೊತೆ ಸೇರಿ 'ಫುಡ್ ಡೆಲಿವರಿ ಡ್ರೈವ್' ಎಂಬ ಅಭಿಯಾನವನ್ನು ಪ್ರಾರಂಭಿಸಿತ್ತು. ಆಹಾರ ಮತ್ತು ದಿನಸಿ ಕಿಟ್‌ಗಳನ್ನು ನೀಡುವುದರ ಜೊತೆಗೆ, ಆರೋಗ್ಯ ಮತ್ತು ನೈರ್ಮಲ್ಯ ಕಿಟ್‌ಗಳನ್ನೂ ನೀಡಲಾಯಿತು. ಅಷ್ಟೇ ಅಲ್ಲದೇ ಕೊರೊನಾ ವಾರಿಯರ್ಸ್‌ಗೆ ನಗರದ ಮೂರು ಹೋಟೆಲ್‌ಗಳಲ್ಲಿ ಉಚಿತ ಕ್ವಾರಂಟೈನ್ ಸೌಲಭ್ಯ ಒದಗಿಸಲಾಗಿತ್ತು ಎಂದು ಎನ್‌ಬಿಎಫ್ ತಿಳಿಸಿದೆ.

Lockdown In Bengaluru: Namma Bengaluru Foundation Distribute Worth Rs 24 Crore Grocery Kits To Poor People

ನಮ್ಮ ಬೆಂಗಳೂರು ಫೌಂಡೇಶನ್ (ಎನ್‌ಬಿಎಫ್) ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಬೆಂಗಳೂರು ಮತ್ತು ಅದರ ನಾಗರಿಕರ ಮತ್ತು ನೆರೆ ಹೊರೆಯವರ ಹಕ್ಕುಗಳನ್ನು ರಕ್ಷಿಸಲು ಕಾರ್ಯನಿರ್ವಹಿಸುತ್ತಿದೆ.

English summary
Lockdown In Bengaluru: Namma Bengaluru Foundation Distribute Worth Rs 24 Crore Grocery Kits To Poor People.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X