ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಲಾಕ್ ಡೌನ್; ಕೆಎಸ್ಆರ್‌ಟಿಸಿ ಬಸ್‌ಗಳಿಲ್ಲ

|
Google Oneindia Kannada News

ಬೆಂಗಳೂರು, ಜುಲೈ 14 : ಕರ್ನಾಟಕ ಸರ್ಕಾರದ ಆದೇಶದಂತೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಗೆ ಬಂದಿದೆ. ಎರಡೂ ಜಿಲ್ಲೆಗಳಲ್ಲಿ ಕೆಎಸ್ಆರ್‌ಟಿಸಿ ಬಸ್‌ಗಳ ಸಂಚಾರ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಮಂಗಳವಾರ ರಾತ್ರಿ 8ರಿಂದ ಜುಲೈ 22ರ ಬೆಳಗ್ಗೆ 5 ಗಂಟೆಯ ತನಕ ಲಾಕ್ ಡೌನ್ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬಸ್‌ಗಳು ಸಂಚಾರ ನಡೆಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಬೆಂಗಳೂರು ಲಾಕ್ ಡೌನ್; ಬಿಎಂಟಿಸಿಯ ಸೂಚನೆಗಳು ಬೆಂಗಳೂರು ಲಾಕ್ ಡೌನ್; ಬಿಎಂಟಿಸಿಯ ಸೂಚನೆಗಳು

Lockdown In Bengaluru Direction From KSRTC

ಈ ಅವಧಿಯಲ್ಲಿ ಬೆಂಗಳೂರು ನಗರದಿಂದ ವಿವಿಧ ಸ್ಥಳಗಳಿಗೆ ಮತ್ತು ಇತರೆ ಸ್ಥಳಗಳಿಂದ ಬೆಂಗಳೂರಿಗೆ ಬರುವ ಬಸ್ಸುಗಳ ಮುಂಗಡ ಟಿಕೆಟ್‌ ಬುಕ್ಕಿಂಗ್‌ಗಳನ್ನು ರದ್ದುಪಡಿಸಲಾಗಿದೆ ಎಂದು ಕೆಎಸ್ಆರ್‌ಟಿಸಿ ಹೇಳಿದೆ.

ಬೆಂಗಳೂರು ಲಾಕ್ ಡೌನ್; ಮಾರ್ಗಸೂಚಿ ಪ್ರಕಟ ಬೆಂಗಳೂರು ಲಾಕ್ ಡೌನ್; ಮಾರ್ಗಸೂಚಿ ಪ್ರಕಟ

ಕೆಎಸ್‌ಆರ್‌ಟಿಸಿ ಸೂಚನೆಗಳು

* ಮುಂಗಡ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಹಣ ಮರುಪಾವತಿ ಮಾಡಲಾಗುತ್ತದೆ.

* ಎರಡು‌ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳ ಜಿಲ್ಲಾಡಳಿತದ ಆದೇಶದನ್ವಯ ಬಸ್‌ಗಳ ಸಂಚಾರ ಇರುತ್ತದೆ.

ಬೆಂಗಳೂರು ಲಾಕ್ ಡೌನ್ ಆರಂಭ; ರಸ್ತೆ, ಫ್ಲೈ ಓವರ್ ಬಂದ್ ಬೆಂಗಳೂರು ಲಾಕ್ ಡೌನ್ ಆರಂಭ; ರಸ್ತೆ, ಫ್ಲೈ ಓವರ್ ಬಂದ್

* ಮಂಗಳವಾರ ರಾತ್ರಿ 8 ಗಂಟೆಯ ತನಕ ಒಟ್ಟು 1300 ಬಸ್ ಬೆಂಗಳೂರಿನಿಂದ ಸಂಚಾರಗೊಳಿಸಿದೆ. 26,000 ಪ್ರಯಾಣಿಕರು ಈಗ ಪ್ರಯಾಣ ಬೆಳೆಸಿದ್ದಾರೆ.

* ಪ್ರಮುಖ ಸ್ಥಳಗಳಾದ ಹೊಸದುರ್ಗ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ‌ಮೈಸೂರು,‌ ಬಳ್ಳಾರಿ, ಯಾದಗಿರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಸಂಚಾರ ನಡೆಸಿವೆ.

* ಇಂದು 160 ಬಸ್ ಮುಂಗಡ ಟಿಕೆಟ್ ಬುಕ್ಕಿಂಗ್ ಆಗಿವೆ.

English summary
One week long lock down in Bengaluru Urban and Rural district. Here are directions for people form KSRTC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X