ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಆನ್‌ಲೈನ್‌ನಲ್ಲಿ ಸಿಗರೇಟ್ ಮಾರಾಟ, ಇಬ್ಬರನ್ನು ಬಂಧಿಸಿದ ಸಿಸಿಬಿ

|
Google Oneindia Kannada News

ಬೆಂಗಳೂರು, ಏ. 24: ಲಾಕ್‌ಡೌನ್‌ನಿಂದಾಗಿ ಜನರ ಜೀವನ ಅಸ್ತವ್ಯಸ್ತವಾಗಿದೆ. ಜನರು ಮನೆಯಿಂದ ಹೊರಗೆ ಬರಬಾರದು ಎಂದು ಸರ್ಕಾರ ಕಟ್ಟುನಿಟ್ಟಿನ ಲಾಕ್‌ಡೌನ್ ನಿಯಮ ಜಾರಿ ಮಾಡಿದೆ. ಮದ್ಯ, ಸಿಗರೇಟು, ಗುಟ್ಕಾ ಹಾಗೂ ತಂಬಾಕು ಸೇವನೆಯಿಂದ ಸೋಂಕು ಹರಡುವುದು ಹೆಚ್ಚಾಗುವುದರಿಂದ ಕಟ್ಟುನಿಟ್ಟಾಗಿ ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆ ನಿಷೇಧಿಸಲಾಗಿದೆ.

ಆದರೂ ಬೆಂಗಳೂರಿನಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಆನ್‌ಲೈನ್‌ನಲ್ಲಿ ಮಾದಕ ವಸ್ತುಗಳ ಮಾರಾಟ ನಡೆದಿದೆ. ಆನ್‌ಲೈನ್ ಮೂಲಕ ಸಿಗರೇಟ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮೂನ್‌ಲೈಟ್ ಡಿಲಿವರಿಸ್ ಎಂಬ ಆನ್‌ಲೈನ್‌ ತಾಣದ ಮೂಲಕ ಅಖ್ತರ್ ಮಿರ್ಜಾ, ತಸುಬುದ್ದೀನ್ ಮೊಯಿದ್ದಿನ್ ಎಂಬ ಆರೋಪಿಗಳು ದೇಶಿ ಹಾಗೂ ವಿದೇಶಗಳ ಸಿಗರೇಟ್ ಮಾರಾಟ ಮಾಡುತ್ತಿದ್ದರು. ಲಾಕ್‌ಡೌನ್ ಮಾರ್ಗದರ್ಶಿಗಳ ನಿಯಮದಂತೆ ಗುಟ್ಕಾ, ಸಿಗರೇಟ್, ತಂಬಾಕು ಮಾರಾಟ ಮಾಡುವಂತಿಲ್ಲ.

Bangalore CCB police have arrested two men who were selling cigarettes online

ಕಸ್ತೂರ್ ಬಾ ರಸ್ತೆಯಲ್ಲಿ ಸಿಗೇಟರ್ ಡಿಲಿವರಿ ಕೊಡಲು ಬಂದಿದ್ದಾಗ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಮೂರು ಲಕ್ಷ ರೂ. ಗಳ ಮೌಲ್ಯದ ದೇಶ-ವಿದೇಶಗಳ ಸಿಗರೇಟ್ ವಶಕ್ಕೆ ಪಡೆಯಲಾಗಿದ್ದು, ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Bangalore CCB police have arrested two men who were selling cigarettes online. The accused Akhtar Mirza and Tasubuddin Moiduddin were selling cigarettes, both domestic and foreign, through an online site called Moonlight delivery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X