ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್ ಡೌನ್; ಬಿಎಂಟಿಸಿಯಿಂದ 150 ಬಸ್ ಸಂಚಾರ

|
Google Oneindia Kannada News

ಬೆಂಗಳೂರು, ಏಪ್ರಿಲ್ 27; ಕರ್ನಾಟಕದಲ್ಲಿ ಕೋವಿಡ್ 2ನೇ ಅಲೆ ಹರಡುವಿಕೆ ತಡೆಯಲು 14 ದಿನಗಳ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಮಂಗಳವಾರ ರಾತ್ರಿ 9 ಗಂಟೆಯಿಂದ ಲಾಕ್ ಡೌನ್ ಜಾರಿಗೆ ಬಂದಿದೆ.

ಲಾಕ್ ಡೌನ್ ಅವಧಿಯಲ್ಲಿ ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಲಿದೆ. ಆದರೆ, ಅಗತ್ಯ ಸೇವೆಗಳಿಗಾಗಿ ಬೆಂಗಳೂರು ನಗರದಲ್ಲಿ ಬಿಎಂಟಿಸಿ 150 ಬಸ್‌ಗಳನ್ನು ಓಡಿಸಲಿದೆ.

ಲಾಕ್ ಡೌನ್; ರಾತ್ರಿ 9ರ ನಂತರ ಸರ್ಕಾರಿ ಬಸ್ ಇಲ್ಲ ಲಾಕ್ ಡೌನ್; ರಾತ್ರಿ 9ರ ನಂತರ ಸರ್ಕಾರಿ ಬಸ್ ಇಲ್ಲ

96 ಮಾರ್ಗಗಳಲ್ಲಿ ಬೆಳಗ್ಗೆ 6 ರಿಂದ ಸಂಜೆ 7 ಗಂಟೆಯ ತನಕ ಏಪ್ರಿಲ್ 27 ರಿಂದ ಮೇ 12ರ ತನಕ ಬಸ್‌ಗಳನ್ನು ಓಡಿಸಲಾಗುತ್ತದೆ ಎಂದು ಬಿಎಂಟಿಸಿ ಹೇಳಿದೆ. ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕಾರ್ಯ ನಿರ್ವಹಣೆ ಮಾಡುವ ಉದ್ಯೋಗಿಗಳು ಈ ಸೇವೆ ಬಳಸಿಕೊಳ್ಳಬಹುದು.

ಲಾಕ್ ಡೌನ್ ಅವಧಿಯಲ್ಲಿ ಸಂಚರಿಸಲಿದೆ ಫ್ಲೈಬಸ್ ಲಾಕ್ ಡೌನ್ ಅವಧಿಯಲ್ಲಿ ಸಂಚರಿಸಲಿದೆ ಫ್ಲೈಬಸ್

Lock Down BMTC To Operate 150 Bus For Essential Services

ರಾಜ್ಯ, ಕೇಂದ್ರ ಸರ್ಕಾರದ ಅಗತ್ಯ ಸೇವೆಗಳ ಇಲಾಖೆಗಳ ನೌಕರರು ಈ ಬಸ್ ಸೌಲಭ್ಯವನ್ನು ಪಡೆಯಬಹುದು ಎಂದು ಬಿಎಂಟಿಸಿ ಹೇಳಿದೆ. ಉಳಿದಂತೆ ಕೆಎಸ್ಆರ್‌ಟಿಸಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಸಂಚಾರ ನಡೆಸುವ ಫ್ಲೈ ಬಸ್ ಮಾತ್ರ ಸಂಚಾರ ನಡೆಸಲಿದೆ.

ಕರ್ನಾಟಕ; 14 ದಿನ ಲಾಕ್ ಡೌನ್, ಏನು ಓಪನ್, ಕ್ಲೋಸ್? ಕರ್ನಾಟಕ; 14 ದಿನ ಲಾಕ್ ಡೌನ್, ಏನು ಓಪನ್, ಕ್ಲೋಸ್?

ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ಯೋಗಿಗಳನ್ನು ಹೊರತುಪಡಿಸಿ ಯಾವುದೇ ಸಾಮಾನ್ಯ ಜನರು ಬಸ್‌ಗಳಲ್ಲಿ ಸಂಚಾರ ನಡೆಸಲು ಅವಕಾಶವಿಲ್ಲ. 14 ದಿನಗಳ ಕಾಲ ಬೆಂಗಳೂರಿನಲ್ಲಿ ಬಿಎಂಟಿಸಿ, ನಮ್ಮ ಮೆಟ್ರೋ ಸಂಚಾರ ಬಂದ್ ಆಗಿರಲಿದೆ.

ಮಂಗಳವಾರ ರಾತ್ರಿಯಿಂದಲೇ ಕರ್ನಾಟಕದಲ್ಲಿ ಲಾಕ್ ಡೌನ್ ಜಾರಿಗೆ ಬಂದಿದೆ. ಜನರು ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಬೆಳಗ್ಗೆ 6 ರಿಂದ 10 ಗಂಟೆ ತನಕ ಅವಕಾಶವನ್ನು ನೀಡಲಾಗಿದೆ. ಹೋಟೆಲ್‌ಗಳಲ್ಲಿ ಪಾರ್ಸೆಲ್ ಸೇವೆ ಲಭ್ಯವಿರಲಿದೆ.

English summary
BMTC to operate 150 essential services in 96 routes between 6 am and 7 pm from April 27 to May 12. Employees working in state and central govt offices can use this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X