ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೂನ್ 1ರಿಂದ ಬಿಡಿಎ ಕಾರ್ನರ್ ಸೈಟ್ ಹರಾಜು

|
Google Oneindia Kannada News

ಬೆಂಗಳೂರು, ಮೇ 22: ಕೊರೊನಾವೈರಸ್ ಲಾಕ್ಡೌನ್ ಸಂದರ್ಭದಲ್ಲಿ ಸರ್ಕಾರದ ಆದಾಯ ಹೆಚ್ಚಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಮುಂದಾಗಿದೆ. ಬಿಡಿಎ ಕಾರ್ನರ್ ಸೈಟ್ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲು ಯಡಿಯೂರಪ್ಪ ಸರ್ಕಾರ ನಿರ್ಧರಿಸಿದೆ.

Recommended Video

ಬಿಡಿಎ ಹೊಸ ಕಟ್ಟಡ ,ವಿರೋಧದ ನಡುವೆ 171 ಮರಗಳಿಗೆ ಕೊಡಲಿ ಪೆಟ್ಟು | Oneindia Kannada

ಜೂನ್ ಒಂದರಿಂದ ಬಿಡಿಎ ಕಾರ್ನರ್ ಸೈಟ್ ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು, ಹಂತ ಹಂತವಾಗಿ ಸೈಟ್ ಹರಾಜಿಗೆ ಬಿಡಿಎ ಮುಂದಾಗಿದೆ.15 ದಿನಕ್ಕೊಮ್ಮೆ ಇ- ಹರಾಜು ಮೂಲಕ ಸುಮಾರು 700 ನಿವೇಶನಗಳನ್ನು ಮಾರಾಟ ಮಾಡಲು ಸಿದ್ಧತೆ ನಡೆಸಲಾಗಿದೆ.

75 ಸಾವಿರ ಬಿಡಿಎ ನಿವೇಶನಗಳ ಸಕ್ರಮಕ್ಕೆ ಸಂಪುಟ ಅಸ್ತು75 ಸಾವಿರ ಬಿಡಿಎ ನಿವೇಶನಗಳ ಸಕ್ರಮಕ್ಕೆ ಸಂಪುಟ ಅಸ್ತು

ಬೆಂಗಳೂರಿನಲ್ಲಿ ಒಟ್ಟು 12 ಸಾವಿರ ಕಾರ್ನರ್ ಸೈಟ್ ಗುರುತಿಸಲಾಗಿದೆ. ಹಂತ ಹಂತವಾಗಿ ಸೈಟ್ ಹರಾಜು ಮಾಡಿ ಸರ್ಕಾರಕ್ಕೆ ಹಣ ನೀಡಲಾಗುತ್ತದೆ. 40x60 ಅಡಿ ಹಾಗೂ 50x80 ಅಡಿ ನಿವೇಶನದ ವಿಸ್ತೀರ್ಣವಾಗಿದೆ ಎಂದು ಬಿಡಿಎ ಆಯುಕ್ತ ಜಿ ಪ್ರಕಾಶ್ ಹೇಳಿದ್ದಾರೆ.

 54 ಬಡಾವಣೆಗಳಲ್ಲಿರುವ ನಿವೇಶನ

54 ಬಡಾವಣೆಗಳಲ್ಲಿರುವ ನಿವೇಶನ

ಬೆಂಗಳೂರಿನಲ್ಲಿ ಕಳೆದ ಒಂದು ದಶಕದಲ್ಲಿ ಸುಮಾರು 64 ಹೊಸ ಬಡಾವಣೆಗಳನ್ನು ನಿರ್ಮಿಸಲಾಗಿದೆ. ಈಗ ಸುಮಾರು 54 ಬಡಾವಣೆಗಳಲ್ಲಿರುವ 8,500 ನಿವೇಶನಗಳನ್ನು ಹರಾಜು ಹಾಕಿ, 7,000 ಕೋಟಿ ರು ಸಂಪನ್ಮೂಲ ಗಳಿಕೆಗೆ ಸರ್ಕಾರ ಮುಂದಾಗಿದೆ.

ಅಕ್ರಮ ಸಕ್ರಮದಿಂದಲೂ ಬೊಕ್ಕಸಕ್ಕೆ ಮೊತ್ತ

ಅಕ್ರಮ ಸಕ್ರಮದಿಂದಲೂ ಬೊಕ್ಕಸಕ್ಕೆ ಮೊತ್ತ

ಇದಲ್ಲದೆ, ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಮುಖ್ಯವಾಗಿ ನಗರ ಮತ್ತು ಟೌನ್ ಪ್ಲಾನಿಂಗ್ 2015 ಕಾಯ್ದೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಮೂಲಕ ರಾಜ್ಯದಲ್ಲಿರುವ 35 ಲಕ್ಷ ಕಟ್ಟಡ, ಬೆಂಗಳೂರಿನಲ್ಲಿರುವ ಸುಮಾರು 3 ಲಕ್ಷ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಲು ಸರ್ಕಾರ ಮುಂದಾಗಿದೆ. ಇದರಿಂದ ಸುಮಾರು 6,000 ಕೋಟಿ ರು ಮೊತ್ತ ಸರ್ಕಾರದ ಬೊಕ್ಕಸಕ್ಕೆ ಬಂದು ಬೀಳಲಿದೆ.

ಬಿಡಿಎ ಮೂಲೆ ನಿವೇಶನಗಳ ಮಾರಾಟ ಅಷ್ಟು ಸುಲಭವಾಗಿಲ್ಲಬಿಡಿಎ ಮೂಲೆ ನಿವೇಶನಗಳ ಮಾರಾಟ ಅಷ್ಟು ಸುಲಭವಾಗಿಲ್ಲ

2019ರಲ್ಲಿ ಬಿಡಿಎ ಮೂಲೆ ನಿವೇಶನ ಹರಾಜು

2019ರಲ್ಲಿ ಬಿಡಿಎ ಮೂಲೆ ನಿವೇಶನ ಹರಾಜು

2019ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮೂಲೆ ನಿವೇಶನಗಳ ಮಾರಾಟಕ್ಕೆ ಪ್ರಯತ್ನ ನಡೆಸಿತ್ತು. 165 ಸೈಟ್‌ಗಳ ಮಾರಾಟದ ಸಂದರ್ಭದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ. ಶೇ 60ರಷ್ಟು ಸೈಟ್‌ಗಳು ಮಾತ್ರ ಹರಾಜುಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಬಿಡಿಎ ಪ್ರಕಾರ ಎಲ್ಲೆಲ್ಲಿ ಎಷ್ಟು ಸೈಟ್ ಹರಾಜು

ಬಿಡಿಎ ಪ್ರಕಾರ ಎಲ್ಲೆಲ್ಲಿ ಎಷ್ಟು ಸೈಟ್ ಹರಾಜು

ಬಿಡಿಎ ಪ್ರಕಾರ, ಬೆಂಗಳೂರು ಉತ್ತರದಲ್ಲಿ 726 (ಅರ್ಕಾವತಿ ಲೇಔಟ್) ನಿವೇಶನಗಳಿವೆ. ಬೆಂಗಳೂರು ಪಶ್ಚಿಮ (ವಿಶ್ವೇಶ್ವರಯ್ಯ ಲೇಔಟ್, ನಾಗರಭಾವಿ ಮತ್ತು ಚಂದ್ರಾಲೇಔಟ್‌ನಲ್ಲಿ) 2177 ನಿವೇಶನಗಳಿವೆ. ಬೆಂಗಳೂರು ದಕ್ಷಿಣದ (ಅಂಜನಾಪುರ, ಜಯನಗರ, ಜೆ. ಪಿ. ನಗರ, ಬಿ. ಟಿ. ಎಂ. ಲೇಔಟ್‌) ಒಟ್ಟು 4613 ನಿವೇಶನ, ಬೆಂಗಳೂರು ಪೂರ್ವದಲ್ಲಿ 92 ನಿವೇಶನಗಳು ಮಾರಾಟಕ್ಕೆ ಇವೆ. ಕೆಂಪೇಗೌಡ ಲೇಔಟಿನ 4000 ಸೈಟಿನ ಹಂಚಿಕೆ, ಹರಾಜು ಗೊಂದಲ ಮುಂದುವರೆದಿದ್ದು, ಅಕ್ಟೋಬರ್ ವೇಳೆಗೆ ಈ ಬಡಾವಣೆಯ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ.

English summary
Lock Down 4.0: Karnataka Government is planning to go on auction BDA corner sites in layouts from June 1, 2020 in a phased manner. More than 700 sites will be e -auctioned in first phase.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X