ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ ವೇಳೆಗೆ ಸಾಲಮನ್ನಾ ಪ್ರಕ್ರಿಯೆ ಪೂರ್ಣ: ಬಂಡೆಪ್ಪ ಕಾಶೆಂಪುರ

|
Google Oneindia Kannada News

ಬೆಂಗಳೂರು, ಏಪ್ರಿಲ್ 26: ಜೂನ್ ತಿಂಗಳ ಅಂತ್ಯದ ವೇಳೆಗೆ ರೈತರ ಸಾಲಮನ್ನಾ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಅವರು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ನೀತಿ ಸಂಹಿತೆ ಘೋಷಣೆ ಆಗುವ ಮೊದಲು ಸಹಕಾರಿ ಬ್ಯಾಂಕ್‌ಗಳ ಸಾಲಮನ್ನಾಕ್ಕೆ 2600 ಕೋಟಿ ಬಿಡುಗಡೆ ಮಾಡಲಾಗಿತ್ತು, ಅದರಲ್ಲಿ 2000 ಕೋಟಿ ರೈತರ ಸಾಲದ ಖಾತೆಗೆ ಜಮಾ ಆಗಿದೆ ಎಂದು ಮಾಹಿತಿ ನೀಡಿದರು.

ರೈತರ ಸಾಲಮನ್ನಾಗೆ ಚುನಾವಣಾ ಆಯೋಗದ ತಡೆ ರೈತರ ಸಾಲಮನ್ನಾಗೆ ಚುನಾವಣಾ ಆಯೋಗದ ತಡೆ

ಖಾಸಗಿ ಬ್ಯಾಂಕ್‌ಗಳಲ್ಲಿನ ರೈತರ ಬೆಳೆಸಾಲ ಮನ್ನಾಕ್ಕಾಗಿ 2800 ಕೋಟಿ ಬಿಡುಗಡೆ ಮಾಡಲಾಗಿತ್ತು, ಅದು ಸಹ ಅರ್ಹ ರೈತರ ಸಾಲದ ಖಾತೆಗೆ ಜಮಾ ಆಗಿದೆ ಎಂದು ಹೇಳಿದರು.

Loan waive off will complete by June: Bandeppa Kashempura

ಚುನಾವಣಾ ನೀತಿಸಂಹಿತೆ ಅಡ್ಡಬಂದ ಕಾರಣ ಸಾಲಮನ್ನಾ ಯೋಜನೆ ತ್ವರಿತವಾಗಿ ಆಗಲಿಲ್ಲ, ಚುನಾವಣಾ ನೀತಿಸಂಹಿತೆ ಅಂತ್ಯವಾದ ಬಳಿಕ ಯೋಜನೆಗೆ ಮತ್ತೆ ವೇಗದೊರಕಲಿದೆ ಎಂದು ಅವರು ಹೇಳಿದ್ದಾರೆ.

ಸಾಲಮನ್ನಾ ಕುರಿತು ಸುಮಲತಾ ಜನರ ದಾರಿ ತಪ್ಪಿಸುತ್ತಿದ್ದಾರೆ: ಕುಮಾರಸ್ವಾಮಿಸಾಲಮನ್ನಾ ಕುರಿತು ಸುಮಲತಾ ಜನರ ದಾರಿ ತಪ್ಪಿಸುತ್ತಿದ್ದಾರೆ: ಕುಮಾರಸ್ವಾಮಿ

ಸಾಲಮನ್ನಾ ಆಗಿಲ್ಲವೆಂದು ಮಂಡ್ಯ ಲೋಕಸಭಾ ಕ್ಷೇತ್ರ ಪಕ್ಷೇತರ ಸುಮಲತಾ ಅವರು ಆಕ್ಷೇಪ ಎತ್ತಿದ್ದಕ್ಕೆಪ್ರತಿಕ್ರಿಯಿಸಿದ ಅವರು, ಅಂಕಿ-ಅಂಶ, ಸೂಕ್ತ ಮಾಹಿತಿ ತಿಳಿಯದೆ ಯಾರೂ ಸಹ ಮಾತನಾಡಬಾರದು ಎಂದು ಹೇಳಿದರು.

9,000 ರುಪಾಯಿ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾದ ರೈತ 9,000 ರುಪಾಯಿ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾದ ರೈತ

ನಾನು ಸರ್ಕಾರ ನಡೆಸುತ್ತಿದ್ದು, ನಮ್ಮ ಬಳಿ ಮಾಹಿತಿ ಇದೆ, ಯಾರೂ ಸಹ ಆಧಾರ ರಹಿತವಾಗಿ ಆರೋಪ ಮಾಡಬಾರದು ಎಂದು ಅವರು ಹೇಳಿದರು.

English summary
Farmers loan waive off process will complete by June end says co-operation minister Bandeppa Kashempura. He said due to election code of conduct process getting slove.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X