ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್‌ಎಎಲ್‌ ಸಾಮರ್ಥ್ಯಕ್ಕೆ ಅವಮಾನವಾಗಲು ಬಿಡೆವು: ರಾಹುಲ್ ಗಾಂಧಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 13: ಎಚ್‌ಎಎಲ್‌ ನೌಕರರ ಜೊತೆ ಸಂವಾದ ನಡೆಸಿದ ರಾಹುಲ್ ಗಾಂಧಿ ಅವರು ಎಚ್‌ಎಎಲ್‌ ನೌಕರರ ಜೊತೆ ನಾವಿದ್ದೇವೆ ಎಂಬ ಭರವಸೆ ನೀಡಿದರು.

ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಸನಿಹ, ಎಚ್‌ಎಎಲ್‌ ನೌಕರರೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಚ್‌ಎಎಲ್‌ನ ಗೌರವ ಮಣ್ಣು ಪಾಡಲು ಬಿಡೆವು ಎಂದರು.

ರಫೆಲ್‌ ಒಪ್ಪಂದದ ಹಗರಣದ ಬಗ್ಗೆ ಗಟ್ಟಿ ದನಿ ಎತ್ತಿರುವ ರಾಹುಲ್ ಗಾಂಧಿ ಅವರು ಎಚ್‌ಎಎಲ್‌ ನೌಕರರ ಜೊತೆ ಮಾಡುತ್ತಿರುವ ಈ ಸಂವಾದ ಕಾರ್ಯಕ್ರಮ ದೇಶದ ಗಮನ ಸೆಳೆದಿದೆ.

Live: Rahul Gandhi interaction with HAL employees

ಮೊದಲಿಗೆ ಈ ಕಾರ್ಯಕ್ರಮವನ್ನು ಎಚ್‌ಎಎಲ್‌ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆದರೆ ಆ ನತರ ಎಚ್‌ಎಎಲ್‌ ಅನುಮತಿ ನಿರಾಕರಿಸಿದ ಕಾರಣ ಅದನ್ನು ಸ್ಥಳಾಂತರಿಸಲಾಯಿತು. ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಎಚ್‌ಎಎಲ್‌ ನೌಕರರಿಗೆ ನೊಟೀಸ್ ನೀಡಲಾಗಿದ್ದರೂ ಸಹ ಹಲವು ಜನ ನೌಕರರು ಸಂವಾದಕ್ಕೆ ಆಗಮಿಸಿದ್ದರು.

Newest FirstOldest First
5:23 PM, 13 Oct

ರಾಹುಲ್ ಗಾಂಧಿ ಅವರು ತಮ್ಮ ಭಾಷಣದಲ್ಲಿ ಯಾವುದೇ ಸಚಿವರ ಮೇಲಾಗಲಿ ಆರೋಪ ಮಾಡಲಿಲ್ಲ. ಬದಲಿಗೆ ಎಚ್‌ಎಎಲ್‌ನ ಸಾಮರ್ಥ್ಯದ ಬಗ್ಗೆ ಮಾತ್ರವೇ ಮಾತನಾಡಿ ಸಂವಾದದಲ್ಲಿ ರಾಜಕೀಯವನ್ನು ಬೆರೆಸದೆ ಘನತೆ ಮೆರೆದರು.
5:22 PM, 13 Oct

ಸಂವಾದಕ್ಕೆ ಬಂದಿರುವ, ಬರಬೇಕೆಂದುಕೊಂಡು ವ್ಯವಸ್ಥಾಪಕ ಮಂಡಳಿ ನಿಬಂಧನೆಯಿಂದ ಬರಲಾಗದವರಿಗೆ ನಾನು ಭರವಸೆ ಕೊಡುತ್ತೇನೆ ನಿಮ್ಮ ಪರವಾಗಿ ನಾವಿರುತ್ತೇವೆ ಎಂದು ಹೇಳಿದ ರಾಹುಲ್ ಗಾಂಧಿ ಮಾತು ಮುಗಿಸಿದರು. ಎಚ್‌ಎಎಲ್‌ ಸಿಬ್ಬಂದಿ ರಾಹುಲ್ ಗಾಂಧಿ ಅವರಿಗೆ ಮನವಿ ಪತ್ರಗಳನ್ನು ಸಲ್ಲಿಸಿದರು.
5:21 PM, 13 Oct

ನೀವು ಇಲ್ಲಿಗೆ ಬರಲು ನಿಮ್ಮ ವ್ಯವಸ್ಥಾಪಕ ಮಂಡಳಿ ಅವಕಾಶ ನೀಡಿಲ್ಲ, ಆದರೂ ಇಷ್ಟು ಜನ ಬಂದಿದ್ದೀರಿ. ಬರಬೇಕೆಂದುಕೊಂಡಿದ್ದರೂ ವ್ಯವಸ್ಥಾಪಕ ಮಂಡಳಿ ನಿಬಂಧನೆ ಇಂದಾಗಿ ಬರಲಾಗದವರು ಇದ್ದಾರೆ. ವ್ಯವಸ್ಥಾಪಕ ಮಂಡಳಿ ಮೇಳೆ ಒತ್ತಡಗಳಿರುತ್ತವೆ ನನಗೆ ಅರ್ಥವಾಗುತ್ತದೆ ಎಂದು ರಾಹುಲ್ ಹೇಳಿದರು.
5:19 PM, 13 Oct

ಇಲ್ಲಿ ನಾನು ಭ್ರಷ್ಟಾಚಾರವಾಗಲಿ, ಕೇಂದ್ರ ಸರ್ಕಾರದ ನೀತಿಗಳ ಬಗ್ಗೆಯಾಗಲಿ ನಾನು ಮಾತನಾಡುವುದಿಲ್ಲ. ಆದರೆ ನಿಮ್ಮ ಸಾಮರ್ಥ್ಯದ ಬಗ್ಗೆ ಮಾತ್ರವೇ ಮಾತನಾಡುತ್ತಿದ್ದೇನೆ. ನಿಮ್ಮ ಬೆಂಬಲಕ್ಕೆ ನಾನು ಸದಾ ಸಿದ್ಧ ಎಂದು ರಾಹುಲ್ ಗಾಂಧಿ ಮತ್ತೊಮ್ಮೆ ಭರವಸೆ ನೀಡಿದರು.
5:18 PM, 13 Oct

ಎಚ್‌ಎಎಲ್‌, ಇಸ್ರೋ, ಬೆಮೆಲ್‌, ಡಿಆರ್‌ಡಿಓ ಯಾವುದೇ ಸಾರ್ವಜನಿಕ ವಲಯವಾಗಲಿ ಸಮಸ್ಯೆಯಲ್ಲಿ ಇದೆ ಎಂದರೆ ನಾನು ನೆರವಿಗೆ ಬಂದೆ ಬರುತ್ತಿದ್ದೇನೆ ಎಂದರು ರಾಹುಲ್‌.
5:17 PM, 13 Oct

ನಿಮ್ಮ ಮಾತುಗಳನ್ನು ಮಾಧ್ಯಮಗಳು ಕೇಳುವುದಿಲ್ಲ ಎಂದು ನೀವು ನನ್ನನ್ನು ಕರೆದಿದ್ದೀರ. ಆದರೆ ಇತ್ತೀಚಿನ ದಿನಗಳಲ್ಲಿ ಅವರೂ ನಮ್ಮ ಮಾತುಗಳನ್ನು ಕೇಳುತ್ತಿಲ್ಲ ಎಂದು ಹಾಸ್ಯ ಮಾಡಿದರು ರಾಹುಲ್ ಗಾಂಧಿ.
5:15 PM, 13 Oct

ರಫೆಲ್‌ ಒಪ್ಪಂದ ಎಚ್‌ಎಎಲ್‌ನ ಹಕ್ಕು. ಆ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಇದ್ದ ಏಕೈಕ ಸಾರ್ವಜನಿಕ ಸಂಸ್ಥೆ ಎಚ್‌ಎಎಲ್‌ ಮಾತ್ರ : ರಾಹುಲ್‌
Advertisement
5:13 PM, 13 Oct

ನಿಮಗೆ ಕೇಂದ್ರ ಅವಮಾನ ಮಾಡಿದೆ ಅವರು ನಿಮ್ಮ ಬಳಿ ಕ್ಷಮೆ ಕೇಳರು. ಹಾಗಾಗಿ ನಾನು ಕ್ಷಮೆ ಕೇಳುತ್ತೇನೆ . ನಿಮಗೆ ಆಗಿರುವ ಅವಮಾನವನ್ನು ನಾವು ಸರಿ ಮಾಡುತ್ತೇವೆ ಎಂದು ರಾಹುಲ್ ಭರವಸೆ ನೀಡಿದರು.
5:12 PM, 13 Oct

ರಾಜಕೀಯ ಭಾಷಣ ಮಾಡಲು ನಾನು ಬಂದಿಲ್ಲ. ಎಚ್‌ಎಎಲ್‌ಗೆ ಸಾಮರ್ಥ್ಯ ಇಲ್ಲ ಎಂದು ಕೇಂದ್ರ ಹೇಳಿದೆ. ಆದರೆ ರಫೆಲ್‌ ತಯಾರಿಸಲು ಒಪ್ಪಂದ ಪಡೆದಿರುವ ಆ ವ್ಯಕ್ತಿಗೆ ಏನು ಸಾಮರ್ಥ್ಯ ಇದೆ ಎಂದು ರಾಹುಲ್ ಪ್ರಶ್ನೆ.
5:11 PM, 13 Oct

ಆಧುನಿಕ ಭಾರತದ ದೇವಸ್ಥಾನಗಳಾದ ಸಾರ್ವಜನಿಕ ವಲಯಗಳ ಮೇಲೆ ದಾಳಿ ಮಾಡಲು ನಾವು ಬಿಡುವುದಿಲ್ಲ. ನಿಮ್ಮ ಗೋರಿಯ ಮೇಲೆ ಬೇರೆಯವರು ಸೌಧ ಕಟ್ಟಲು ನಾವು ಬಿಡುವುದಿಲ್ಲ ಎಂದು ರಾಹುಲ್ ಗಾಂಧಿ ಎಚ್ಎಎಲ್‌ ಸಿಬ್ಬಂದಿಗೆ ಧೈರ್ಯ ತುಂಬಿದರು.
4:59 PM, 13 Oct

ನಿರ್ಮಲಾ ಸೀತಾರಾಮನ್‌ ಅವರು ಜೆಟ್‌ ಹಾರಾಟ ನಡೆಸಿದ ಮೊದಲ ರಕ್ಷಣಾ ಮಂತ್ರಿ ಎನಿಸಿಕೊಂಡರು ಆದರೆ ಅವರು ಹಾರಿದ್ದು ಎಚ್‌ಎಎಲ್‌ ತಯಾರಿಸಿದ ಜೆಟ್‌ ವಿಮಾನದಲ್ಲಿ ಎಂಬುದನ್ನು ಅವರು ನೆನೆಪಿಸಿಕೊಂಡು ಆ ನಂತರ ಎಚ್‌ಎಎಲ್‌ ಮೇಲೆ ಆರೋಪ ಮಾಡಬೇಕು ಎಂದು ನಿವೃತ್ತ ಎಚ್‌ಎಎಲ್‌ ಎಂಜಿನಿಯರ್ ಹೇಳಿದರು.
4:49 PM, 13 Oct

6000 ಕೋಟಿ ಮೌಲ್ಯದ ಯೋಜನೆಯನ್ನು ಒಂದೇ ವರ್ಷದಲ್ಲಿ ಹೊರಗುತ್ತಿಗೆ ನೀಡಲಾಯಿತು. ಎಸ್‌-400 ಮಿಸೈಲ್‌ ಯೋಜನೆ ಸಹ ಹೀಗೆ ಆಗುತ್ತಿದೆ ಎಂದು ಲೆಕ್ಕ ನೀಡಿದ ಸಿಬ್ಬಂದಿ ಸಂಘದ ಅಧ್ಯಕ್ಷ ಹೇಳಿದರು.
Advertisement
4:46 PM, 13 Oct

ಒಂದೂವರೆ ವರ್ಷದಿಂದ ಎಚ್‌ಎಎಲ್‌ನ ಕೆಲವು ವಿಭಾಗಗಳು ಕೆಲಸವಿಲ್ಲದೆ ಕೂತಿದೆ. ಆದರೆ ಸರ್ಕಾರ ನಮ್ಮ ಕೆಲಸವನ್ನು ಹೊರಗುತ್ತಿಗೆ ನೀಡಿದೆ ಎಂದು ಎಚ್‌ಎಎಲ್‌ ನ ಎಸ್‌ಸಿ/ಎಸ್‌ಟಿ ಸಿಬ್ಬಂದಿಗಳ ಅಧ್ಯಕ್ಷರು ಹೇಳಿದರು.
4:42 PM, 13 Oct

32,000 ಎಚ್‌ಎಎಲ್‌ ಸಿಬ್ಬಂದಿಗೆ ಅವಮಾನವಾಗಿದೆ. ಅವರ 75 ವರ್ಷದ ಕಾರ್ಯಕ್ಷಮತೆಯನ್ನು ಕೆಲವು ರಾಜಕಾರಣಿಗಳು ಮಣ್ಣು ಮುಕ್ಕಿಸಿದ್ದಾರೆ ಎಂದು ನಿವೃತ್ತ ವಾಯುಸೇನೆಯ ಎಂಜಿನಿಯರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
4:23 PM, 13 Oct

ಎಚ್‌ಎಎಲ್‌ ವ್ಯವಸ್ಥಾಪಕ ಮಂಡಳಿ ನೀಡಿದ್ದ ಸೂಚನಾ ಪತ್ರವನ್ನು ರಾಹುಲ್ ಗಾಂಧಿ ಗೆ ಹಿರಿಯ ಅಧಿಕಾರಿಗಳು ತೋರಿಸಿದರು ಹಾಗೂ ಅದನ್ನು ಪಡೆದುಕೊಂಡ ರಾಹುಲ್ ಗಾಂಧಿ ಓದಿ ತಮ್ಮ ಜೇಬಿನಲ್ಲಿ ಇರಿಸಿಕೊಂಡರು.
4:22 PM, 13 Oct

ಎಚ್‌ಎಎಲ್‌ನಲ್ಲಿ ಇದೇ ಮೊದಲ ಬಾರಿಗೆ ಸಿಬ್ಬಂದಿಗೆ ಈ ಕಾರ್ಯಕ್ರಮದಲ್ಲಿ (ಸಂವಾದ) ಭಾಗಿ ಆಗಬೇಡಿ ಎಂದು ಸೂಚನೆ ಹೊರಡಿಸಿದ್ದಾರೆ. ಎಚ್‌ಎಎಲ್‌ ವ್ಯವಸ್ಥಾಪನೆಯನ್ನು ನಾನು ವಿರೋಧಿಸುತ್ತೇನೆ ಎಂದು ಎಚ್‌ಎಎಲ್‌ ನಿವೃತ್ತ ಅಧಿಕಾರಿ ಆಕ್ರೋಶ ವ್ಯಕ್ತಪಡಿಸಿದರು.
4:19 PM, 13 Oct

ಬೈಸಿಕಲ್ ಸಹ ನಿರ್ಮಿಸಲು ಬರದಂತಹಾ ಸಂಸ್ಥೆಗೆ ರಫೆಲ್‌ ನಿರ್ಮಿಸಲು ಕೊಟ್ಟಿದ್ದಾರೆ. ಇದು ಎಚ್‌ಎಎಲ್‌ ಗೆ ಭಾರಿ ಅವಮಾನ. ನಮ್ಮದು ಗೌರವಾನ್ವಿತ ಸಂಸ್ಥೆ ಆದರೆ ಸರ್ಕಾರ ನಮಗೆ ಮೋಸ ಮಾಡಿತು ಇದು ನಮಗೆ ಭಾರಿ ದೊಡ್ಡ ಅವಮಾನ ಎಂದು ನಿವೃತ್ತ ಎಎಚ್‌ಎಲ್‌ ಅಧಿಕಾರಿ ಹೇಳಿದರು.
4:11 PM, 13 Oct

ನಾನು ಇಲ್ಲಿ ಬಂದಿರುವುದು ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳಲೇ ಹೊರತು ನನ್ನ ಮಾತುಗಳನ್ನು ಆಡಲಲ್ಲ, ನಿಮ್ಮ ಅನುಮಾನಗಳು ಏನೇ ಇರಲಿ ಕೇಳಿ ಉತ್ತರ ನೀಡುತ್ತೇನೆ ಎಂದ ರಾಹುಲ್ ಗಾಂಧಿ
4:10 PM, 13 Oct

ಅಮೆರಿಕ, ಚೀನಾಕ್ಕೆ ಸ್ಪರ್ಧೆ ಒಡ್ಡಬಹುದಾದ ಒಂದು ವಿಭಾಗವೆಂದರೆ ಎಚ್‌ಎಎಲ್‌ ಎಂದು ಒಬಾಮಾ ಹೇಳಿದ್ದರು ಎಂದ ರಾಹುಲ್
3:59 PM, 13 Oct

ಎಚ್‌ಎಎಲ್‌ ದೇಶಕ್ಕೆ ನೀಡಿರುವ ಕೊಡುಗೆಗಳು' ವಿಷಯದ ಬಗ್ಗೆ ರಾಹುಲ್ ಗಾಂಧಿ ಅವರು ಇಂದು ಎಚ್‌ಎಎಲ್‌ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಲಿದ್ದು. ಸಂವಾದ ಸ್ಥಳಕ್ಕೆ ರಾಹುಲ್ ಗಾಂಧಿ ಆಗಮಿಸಿದ್ದಾರೆ.
3:53 PM, 13 Oct

ಕುಮಾರಕೃಪ ಅತಿಥಿ ಗೃಹದಿಂದ ತೆರಳಿದ ರಾಹುಲ್ ಗಾಂಧಿ ಅವರು, ಕೆಲವೇ ಕ್ಷಣಗಳಲ್ಲಿ ಸಂವಾದ ಸ್ಥಳಕ್ಕೆ ಹಾಜರಾಗಲಿದ್ದಾರೆ. ಈಗಾಗಲೇ ಸಂವಾದಕ್ಕೆ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ.

English summary
AICC Rahul Gandhi came to Bengaluru today. He schedule to interact with HAL employees today. This interaction session grab the attention of the country because Rahul alleging that BJP government did corruption in Rafale deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X