• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಂಬಾರರ ಜೀವನಾನುಭವ ಮತ್ತು ಸಾಹಿತ್ಯ ಕುರಿತು ಸಂವಾದ

By Nayana
|

ಬೆಂಗಳೂರು, ಮೇ 09: ಲೋಕಚಚರಿತ ಸಾಂಸ್ಕೃತಿಕ ಬಳಗವು ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಮುದಾಯ ಕೂಟವನ್ನು ಮೇ 13ರಂದು ಮಲ್ಲೇಶ್ವರದ ಗಾಂಧಿ ಸಾಹಿತ್ಯ ಸಂಘದಲ್ಲಿ ಹಮ್ಮಿಕೊಂಡಿದೆ.

ಕಾರ್ಯಕ್ರಮದಕ್ಕೆ ಜ್ಞಾನಪೀಠ ಪುರಸ್ಕೃತರಾದ ಚಂದ್ರಶೇಖರ ಕಂಬಾರರು ಆಗಮಿಸಿ ತಮ್ಮ ಸಾಹಿತ್ಯಾನುಭವ ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮ ಬೆಳಗ್ಗೆ 10.30ರಿಂದ 1.30ರವರೆಗೆ ನಡೆಯಲಿದೆ. ಪ್ರತಿ ತಿಂಗಳ ಎರಡನೇ ಭಾನುವಾರದಂದು 'ಲೋಕಚರಿತ ಸಮುದಾಯ ಕೂಟ'ದಲ್ಲಿ ಆಸಕ್ತ ಎಲ್ಲರೂ ಸೇರಿ ಸಂವಾದ, ಮಾತುಕತೆ, ಚರ್ಚೆ ನಡೆಸುತ್ತೇವೆ. ಇದರಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮಾತ್ರವಲ್ಲದೇ, ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡ ವೃತ್ತಿ ನಿರತರೂ ಇರುತ್ತಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಚಂದ್ರಶೇಖರ ಕಂಬಾರ ಆಯ್ಕೆ

ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ತಜ್ಞರನ್ನು ಕರೆಸಿ ಅವರೊಡನೆ ಸಂವಾದ-ಚರ್ಚೆ ಮಾಡುವುದು ಇದರ ಪ್ರಮುಖ ಉದ್ದೇಶ. ನಮ್ಮ ಹೊಸ ತಲೆಮಾರಿನವರು ಆಧುನಿಕ ವಿಕಾರಗಳಿಂದ ಹೊರಬರಲು ಇದು ಸಹಾಯಕವಾಗಿದೆ ಎನ್ನುವುದು ಲೋಕಚಿರತದ ಅಭಿಪ್ರಾಯ.

ಈವರೆಗೆ - ವಿವೇಕ ಶಾನಭಾಗ, ಕೆ.ವಿ. ಅಕ್ಷರ, ನಾಗೇಶ ಹೆಗಡೆ, ಎಂ.ಎಸ್. ಶ್ರೀರಾಮ್, ಜಿ.ಎಸ್. ಭಾಸ್ಕರ್, ರಾಧಾಕೃಷ್ಣನ್ ಅಯ್ಯರ್, ಬಿ.ಆರ್. ವಿಶ್ವನಾಥ್, ಚಿದಂಬರರಾವ್ ಜಂಬೆ, ಉಷಾ ಪಿ. ರೈ, ಜನಾರ್ಧನರೆಡ್ಡಿ, ವೀರನಾರಾಯಣ, ಕಲಾಗಂಗೋತ್ರಿ ಮಂಜು, ಸ್ವರೂಪ್ ಶರ್ಮನ್, ನಟರಾಜ ಹುಳಿಯಾರ್, ಮುಕುಂದರಾವ್, ಜೆ. ಶ್ರೀನಿವಾಸಮೂರ್ತಿ ಜಯಂತ ಕಾಯ್ಕಿಣಿ, ರಘುನಂದನ, ಪ್ರತಿಭಾ ನಂದಕುಮಾರ್, ಚಿರಂಜೀವ ಸಿಂಗ್, ಎಂ.ಎಸ್, ಆಶಾದೇವಿ, ಸುಂದರ್ ಸಾರುಕ್ಕೈ, ಬಿ.ವಿ. ರಾಜಾರಾಮ್, ಕೆ.ಎಸ್. ನಾಗರತ್ನಮ್ಮ, ಮಲ್ಲಿಕಾರ್ಜುನ ಕಟಗೋಳ, ಜೋಗಿ, ಶ್ರೀನಿವಾಸ ವೈದ್ಯ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಕಥನಕುತೂಹಲ: ಪ್ರಸ್ತುತ ಲೋಕಚರಿತ ತಂಡವು ಕನ್ನಡದ ಪ್ರಮುಖ ಕಥೆಗಳನ್ನು ರಂಗ ಪ್ರಸ್ತುತಿಯ ರೂಪಕ್ಕೆ ತರುವ ಯೋಜನೆಯನ್ನು ಕಳೆದ ಆರೇಳು ತಿಂಗಳಿಂದ ನಡೆಸುತ್ತಿದೆ. ಕನ್ನಡದ ಹಲವಾರು ಕತೆಗಳನ್ನು ನಮ್ಮ ತಂಡದ ಸಮುದಾಯದೊಟ್ಟಿಗೆ ಓದಿ, ಅವುಗಳಲ್ಲಿ ಕೆಲವನ್ನು ಆಯ್ದು ರಂಗಪ್ರಸ್ತುತಿ'ಯ ರೂಪಕ್ಕೆ ತರುವ ಪ್ರಯತ್ನವನ್ನು ಮಾಡುತ್ತಿದೆ. . ಇದರ ಮೊದಲ ಗುಚ್ಛವೇ ಈಕಥನ ಕುತೂಹಲ - 1'. ಈ ಮೊದಲ ಕಂತಿನಲ್ಲಿ ಕನ್ನಡದ ಮೂರು ಪ್ರಮುಖ ಕತೆಗಳನ್ನು ರಂಗರೂಪಕ್ಕೆ ತರಲಾಯಿತು.

ಆ ಮೂರು ಕತೆಗಳ ವಿವರ ಇಂತಿದೆ- ಪೂರ್ಣಚಂದ್ರ ತೇಜಸ್ವಿಯವರ ಡೇರ್ ಡೆವಿಲ್ ಮುಸ್ತಾಫಾ' ನಿರ್ದೇಶನ: ಕುಮಾರರಾಜು ಎನ್, ನಟರಾಜ್ ಹುಳಿಯಾರ್ ಅವರ ದಾದಾ ಕ ಪಹಾಡ್' ನಿರ್ದೇಶನ: ಗಿರಿಧರ್ ಎಸ್., ಮೌನೇಶ ಬಡಿಗೇರ ಅವರ ಶಫಿ ಎಲೆಕ್ಟ್ರಿಕಲ್ಸ್' ನಿರ್ದೇಶನ: ನವೀನ್ ಆರ್.ಎನ್. - ಈ ಕತೆಗಳ ಹಲವಾರು ಪ್ರದರ್ಶನಗಳನ್ನು ಬೆಂಗಳೂರಿನಾದ್ಯಂತ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Loka Charitha, a cultural organization is organising an interaction with Jnana Peetha awardee Dr Chandrasekhar Kambar on his life and literature on May 13 at Gandhi Sahitya Sangha in Malleshwar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more