ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಯಾಣಿಕರೇ ಗಮನಿಸಿ; ಬೆಂಗಳೂರಿನಿಂದ ಹೊರಡುವ ರೈಲುಗಳ ಪಟ್ಟಿ

|
Google Oneindia Kannada News

ಬೆಂಗಳೂರು, ಜೂನ್ 02 : ಲಾಕ್ ಡೌನ್ ಬಳಿಕ ಸ್ಥಗಿತಗೊಂಡಿದ್ದ ಪ್ರಯಾಣಿಕರ ರೈಲು ಸಂಚಾರ ಸೋಮವಾರದಿಂದ ಆರಂಭವಾಗಿದೆ. ದೇಶದಲ್ಲಿ 200 ರೈಲುಗಳ ಸಂಚಾರಕ್ಕೆ ರೈಲ್ವೆ ಇಲಾಖೆ ಚಾಲನೆ ಕೊಟ್ಟಿದೆ. ಕರ್ನಾಟಕಕ್ಕೂ ಹಲವು ರೈಲುಗಳು ಸಿಕ್ಕಿವೆ.

Recommended Video

ಪ್ರತಿನಿತ್ಯ ಸೈಕಲ್ ತುಳಿಯೋದ್ರಿಂದ ಪರಿಸರ ಹಾಗೂ ಆರೋಗ್ಯಕ್ಕೂ ಪ್ರಯೋಜನ | Oneindia Kannada

ಕರ್ನಾಟಕ ಸರ್ಕಾರ ಕಂಟೈನ್ಮೆಂಟ್ ಝೋನ್‌ಗಳಲ್ಲಿ ಜೂನ್ 30ರ ತನಕ ಲಾಕ್ ಡೌನ್ ಮುಂದುವರೆಯಲಿದೆ ಎಂದು ಘೋಷಣೆ ಮಾಡಿದೆ. ಈ ಪ್ರದೇಶಗಳಿಗೆ ಯಾವುದೇ ರೈಲು, ಬಸ್ ಸೌಕರ್ಯ ಇರುವುದಿಲ್ಲ. ಉಳಿದಂತೆ ಬೆಳಗ್ಗೆ 5ರಿಂದ ರಾತ್ರಿ 9ರ ತನಕ ಬಸ್ ಸಂಚಾರ ಇರುತ್ತದೆ.

ಗಂಗಾವತಿ-ಕಾರಟಗಿ ರೈಲು; ಶೀಘ್ರದಲ್ಲೇ ಸಂಚಾರ ಆರಂಭ ಗಂಗಾವತಿ-ಕಾರಟಗಿ ರೈಲು; ಶೀಘ್ರದಲ್ಲೇ ಸಂಚಾರ ಆರಂಭ

ಬೆಂಗಳೂರು ನಗರಕ್ಕೆ ಆಗಮಿಸುವ ಮತ್ತು ಇಲ್ಲಿಂದ ಹೊರಡುವ ಜನರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಹಲವು ರೈಲುಗಳನ್ನು ಓಡಿಸುತ್ತಿದೆ. ಟಿಕೆಟ್ ಕಾಯ್ದಿರಿಸಿಕೊಂಡವರನ್ನು ಮಾತ್ರ ನಿಲ್ದಾಣಕ್ಕೆ ಬಿಡಲಾಗುತ್ತದೆ. ವೈಟಿಂಗ್ ಲಿಸ್ಟ್‌ನಲ್ಲಿದ್ದರೆ ನಿಲ್ದಾಣಕ್ಕೆ ಹೋಗುವಂತಿಲ್ಲ.

ಪ್ರಯಾಣಿಕರಿಗೆ ಮಹತ್ವದ ಸೂಚನೆ ಕೊಟ್ಟ ಕೆ. ಎಸ್. ಆರ್. ಟಿ. ಸಿ ಪ್ರಯಾಣಿಕರಿಗೆ ಮಹತ್ವದ ಸೂಚನೆ ಕೊಟ್ಟ ಕೆ. ಎಸ್. ಆರ್. ಟಿ. ಸಿ

ಸುಮಾರು 2 ತಿಂಗಳ ಬಳಿಕ ಬೆಂಗಳೂರು ನಗರದಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ರೈಲು ಸಂಚಾರ ಆರಂಭವಾಗಿದೆ. ಶತಾಬ್ದಿ, ಪ್ಯಾಸೆಂಜರ್ ಸೇರಿದಂತೆ ವಿವಿಧ ರೈಲುಗಳು ಸಂಚಾರ ನಡೆಸುತ್ತಿವೆ. ಬೆಂಗಳೂರಿನಿಂದ ಹೊರಡುವ ರೈಲುಗಳ ಪಟ್ಟಿ ಇಲ್ಲಿದೆ.

50 ಲಕ್ಷ ವಲಸೆ ಕಾರ್ಮಿಕರನ್ನು 'ಗೂಡು' ಮುಟ್ಟಿಸಿದ ಶ್ರಮಿಕ್ ರೈಲು! 50 ಲಕ್ಷ ವಲಸೆ ಕಾರ್ಮಿಕರನ್ನು 'ಗೂಡು' ಮುಟ್ಟಿಸಿದ ಶ್ರಮಿಕ್ ರೈಲು!

ಯಾವ-ಯಾವ ರೈಲುಗಳು

ಯಾವ-ಯಾವ ರೈಲುಗಳು

* ರೈಲು ನಂಬರ್ 02245/02246 ಹೌರಾ-ಯಶವಂತಪುರ-ಹೌರಾ (ವಾರದಲ್ಲಿ 5 ದಿನ)

* ರೈಲು ನಂಬರ್ 02080/02090 ಯಶವಂತರಪು-ಶಿವಮೊಗ್ಗ ಟೌನ್ (ಜನಶತಾಬ್ದಿ ವಿಶೇಷ ರೈಲು)

* ರೈಲು ನಂಬರ್ 02629/02630 ಯಶವಂತಪುರ-ಹೆಚ್.ನಿಜಾಮುದ್ದೀನ್-ಯಶವಂತಪುರ ಸಂಪರ್ಕ ಕ್ರಾಂತಿ (ಮೂರು ದಿನಕ್ಕೊಮ್ಮೆ)

ಬೆಂಗಳೂರಿನಿಂದ ರೈಲುಗಳು

ಬೆಂಗಳೂರಿನಿಂದ ರೈಲುಗಳು

* ರೈಲು ನಂಬರ್ 02691/02692 ಕೆಎಸ್ಆರ್‌ ಬೆಂಗಳೂರು-ನವದೆಹಲಿ-ಕೆಎಸ್ಆರ್ ಬೆಂಗಳೂರು (ಪ್ರತಿದಿನ ರಾಜಧಾನಿ ಎಕ್ಸ್‌ಪ್ರೆಸ್)

* ರೈಲು ನಂಬರ್ 02079/02080 ಕೆಎಸ್ಆರ್ ಬೆಂಗಳೂರು-ಹುಬ್ಬಳ್ಳಿ-ಕೆಎಸ್ಆರ್‌ ಬೆಂಗಳೂರು (ಪ್ರತಿದಿನ ಜನಶತಾಬ್ದಿ ಎಕ್ಸ್‌ಪ್ರೆಸ್)

* ರೈಲು ನಂಬರ್ 02295/02296 ಕೆಎಸ್ಆರ್‌ ಬೆಂಗಳೂರು-ದಾನ್‌ಪುರ್-ಕೆಎಸ್ಆರ್ ಬೆಂಗಳೂರು (ಪ್ರತಿದಿನ ಸಂಗಮಮಿತ್ರ ಎಕ್ಸ್‌ಪ್ರೆಸ್)

ಮುಂಬೈಗೂ ಇದೆ ರೈಲು

ಮುಂಬೈಗೂ ಇದೆ ರೈಲು

* ರೈಲು ನಂಬರ್ 01301/01302 ಮುಂಬೈ ಸಿಎಸ್‌ಎಂಟಿ-ಕೆಎಸ್ಆರ್‌ ಬೆಂಗಳೂರು-ಮುಂಬೈ ಸಿಎಸ್‌ಎಂಟಿ (ಪ್ರತಿದಿನ ಉದ್ಯಾನ್ ಎಕ್ಸ್‌ಪ್ರೆಸ್)

* ರೈಲು ನಂಬರ್ 06597/06598 ಕೆಎಸ್ಆರ್‌ ಬೆಂಗಳೂರು-ಬೆಳಗಾವಿ-ಕೆಎಸ್ಆರ್ ಬೆಂಗಳೂರು (ವಾರದಲ್ಲಿ ಎರಡು ದಿನ)

* ರೈಲು ನಂಬರ್ 06503/06504 ಕೆಎಸ್‌ಆರ್ ಬೆಂಗಳೂರು-ಮೈಸೂರು-ಕೆಎಸ್ಆರ್‌ ಬೆಂಗಳೂರು (ವಾರದಲ್ಲಿ 6 ದಿನಗಳು ಸಂಚಾರ)

ರೈಲುಗಳ ಲೆಕ್ಕ

ರೈಲುಗಳ ಲೆಕ್ಕ

ಜೂನ್ 1ರಿಂದ ಅನ್ವಯವಾಗುವಂತೆ ನೈಋತ್ಯ ರೈಲ್ವೆ ಒಟ್ಟು 16 ರೈಲುಗಳ ಸಂಚಾರವನ್ನು ಆರಂಭಿಸಿವೆ. ಇವುಗಳಲ್ಲಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ, ಹೊರ ರಾಜ್ಯಗಳಿಗೆ ಸಂಚಾರ ನಡೆಸುವ ರೈಲುಗಳು ಸೇರಿವೆ.

English summary
Indian Railways began passenger train services from June 1, 2020 after two months of lock down. Here are the list of trains which will run from Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X