ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ 19: ಬೆಂಗಳೂರಿನ 3 ಅಪಾಯಕಾರಿ ಜೋನ್‌ಗಳಿವು

|
Google Oneindia Kannada News

ಬೆಂಗಳೂರು, ಏಪ್ರಿಲ್ 26: ಬೆಂಗಳೂರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಹಲವು ಪ್ರದೇಶಗಳನ್ನು ಮತ್ತೆ ಡೇಂಜರ್‌(ಅಪಾಯಕಾರಿ)
ಜೋನ್‌ಗಳೆಂದು ನಾಮಕರಣ ಮಾಡಲಾಗುತ್ತಿದೆ.

ಬೆಂಗಳೂರು ದಕ್ಷಿಣ ವಲಯ, ಪೂರ್ವ ವಲಯ ಹಾಗೂ ಮಹದೇವಪುರ ವಲಯದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಅದನ್ನು ಡೇಂಜರ್ ಜೋನ್ ಎಂದು ಕರೆಯಲಾಗಿದೆ.

ಕೊರೊನಾ ಪ್ರಕರಣ; ಮುಂಬೈಗಿಂತ ಬೆಂಗಳೂರಲ್ಲೇ ಹೆಚ್ಚು! ಕೊರೊನಾ ಪ್ರಕರಣ; ಮುಂಬೈಗಿಂತ ಬೆಂಗಳೂರಲ್ಲೇ ಹೆಚ್ಚು!

ಭಾನುವಾರಕ್ಕಿಂತ ಇಂದು ಕಡಿಮೆ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ, ಯಾಕೆಂದರೆ ಪ್ರತನಿತ್ಯ 1 ಲಕ್ಷಕ್ಕೂ ಅಧಿಕ ಮಾದರಿಗಳನ್ನು ಪರೀಕ್ಷೆ ಮಾಡಲಾಗುತ್ತಿತ್ತು. ಆದರೆ ಣಾಬುವಾರ ಕೇವಲ 70 ಸಾವಿರ ಮಾದರಿಗಳನ್ನೇ ಪರೀಕ್ಷೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಬೆಂಗಳೂರು ದಕ್ಷಿಣ- 2866
ಬೆಂಗಳೂರು ಪೂರ್ವ- 2505
ಮಹಾದೇವಪುರ - 2045
ಬೊಮ್ಮನಹಳ್ಳಿ - 1794
ಆರ್ ಆರ್ ನಗರ - 1135
ಯಲಹಂಕ - 1396
ದಾಸರ ಹಳ್ಳಿ - 443
ಬೆಂಗಳೂರು ಹೊರ ವಲಯ - 1473 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದರು.
ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಸದ್ಯ 1 ಲಕ್ಷದ 80 ಸಾವಿರದ 542 ಮಂದಿ ಕೋವಿಡ್ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಮತ್ತು ಹೋಂ ಐಸೊಲೇಷನ್ ನಲ್ಲಿದ್ದಾರೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೋವಿಡ್ ಕೇಸ್ ಗಳನ್ನು ನೋಡಿ ತಜ್ಞರು ಕೂಡ ಆತಂಕಕ್ಕೊಳಗಾಗಿದ್ದಾರೆ.

List Of Covid 19 Danger Zones In Bengaluru

ಬೃಹತ್ ಪ್ರಮಾಣದಲ್ಲಿ ಹಬ್ಬುತ್ತಿರುವ ಸೋಂಕಿನ ಕೊಂಡಿಯನ್ನು ಕಡಿಯಲು ಸಂಪೂರ್ಣ ಲಾಕ್ ಡೌನ್ ನಂತಹ ಕಠಿಣ ಕ್ರಮ ಅನಿವಾರ್ಯ ಎಂದು ತಜ್ಞರು ಹೇಳುತ್ತಿದ್ದಾರೆ. ಕಳೆದ ಏಪ್ರಿಲ್ 15ರ ನಂತರ ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಸಂಖ್ಯೆ ಶೇಕಡಾ 151.35ರಷ್ಟು ಹೆಚ್ಚಾಗಿದೆ. 15-20 ದಿನಗಳ ಹಿಂದೆ ಸೋಂಕಿತರ ಸಂಖ್ಯೆ 71 ಸಾವಿರದ 827ರಷ್ಟಿತ್ತು.

ಕೇವಲ 2 ವಾರಗಳಲ್ಲಿ ಇಷ್ಟೊಂದು ಹೆಚ್ಚಾಗುವ ಮೂಲಕ ದೆಹಲಿ(ಸಕ್ರಿಯ ಸೋಂಕಿತರ ಸಂಖ್ಯೆ 93 ಸಾವಿರದ 080) ಮತ್ತು ಮುಂಬೈ(75 ಸಾವಿರದ 498)ಗಿಂತಲೂ ಅಧಿಕವಾಗಿದೆ. ಸದ್ಯ ಬೆಂಗಳೂರು ನಗದ ದೇಶದಲ್ಲಿಯೇ ಅತಿ ಹೆಚ್ಚು ಸೋಂಕಿತರ ಸಂಖ್ಯೆಯನ್ನು ಹೊಂದಿದ್ದು ದೆಹಲಿ ಮತ್ತು ಮುಂಬೈಗಳು ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ಕಳೆದ ವರ್ಷ ಮಾರ್ಚ್ ತಿಂಗಳಿನಿಂದ ಕೊರೊನಾ ಪಾಸಿಟಿವ್ ಕೇಸುಗಳ ಒಟ್ಟು ಸಂಖ್ಯೆಯಲ್ಲಿ ಈಗ ಬೆಂಗಳೂರಿನಲ್ಲಿ ಗಣನೀಯವಾಗಿ ಏರಿಕೆಯಾಗಿ ಶೇಕಡಾ 27.62ರಷ್ಟಿದ್ದಾರೆ. ನಿನ್ನೆ ಭಾನುವಾರ 20 ಸಾವಿರದ 733 ಹೊಸ ಸೋಂಕಿತರು ಸೇರ್ಪಡೆಯಾಗಿದ್ದಾರೆ.

ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6 ಲಕ್ಷದ 53 ಸಾವಿರದ 656 ಆಗಿದೆ. ನಗರದ ಆರೋಗ್ಯ ವ್ಯವಸ್ಥೆ ಹದಗೆಟ್ಟು ಹೋಗಿದೆ. ಆಮ್ಲಜನಕ ಕೊರತೆ, ಬೆಡ್ ಲಭ್ಯತೆ ಕೊರತೆಯುಂಟಾಗುತ್ತಿದೆ.

Recommended Video

ಲಾಕ್ ಡೌನ್ ಭೀತಿ ಹಿನ್ನೆಲೆ ಬೆಂಗಳೂರು ಬಿಟ್ಟು ಹೊರಟ ಜನ..! | Oneindia Kannada

English summary
Covis 19 cases increasing in Bengaluru, BBMP Called 3 Zones as danger zones, Here is the list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X