ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಆರೈಕೆಗೆ 8 ವಿಶೇಷ ಕೇಂದ್ರ

|
Google Oneindia Kannada News

ಬೆಂಗಳೂರು, ಏಪ್ರಿಲ್ 16: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಮಿತಿ ಮೀರಿ ಬೆಳೆಯುತ್ತಿದೆ. ಪ್ರತಿನಿತ್ಯ ಹೊಸ ವರದಿ ಆಗುತ್ತಿರುವ ಸೋಂಕಿತ ಪ್ರಕರಣಗಳ ಸಂಖ್ಯೆ ಹೊಸ ದಾಖಲೆ ಬರೆಯುತ್ತಿವೆ.

ಕೊರೊನಾವೈರ್ ಸೋಂಕಿತರಿಗೆ ಬೆಡ್, ಲಸಿಕೆ ಮತ್ತು ಅಗತ್ಯ ಸೌಲಭ್ಯಗಳ ಕೊರತೆಯಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವಲಯವಾರು ಕೊವಿಡ್-19 ಸೇವಾ ಕೇಂದ್ರ(ಕೇರ್ ಸೆಂಟರ್) ತೆರೆಯಲು ಆದೇಶಿಸಿದೆ. ಬೆಂಗಳೂರಿನಲ್ಲಿ ಒಟ್ಟು ಎಂಟು ಕೊರೊನಾವೈರಸ್ ಸೋಂಕಿತರ ಆರೈಕೆ ಕೇಂದ್ರಗಳನ್ನು ತೆರೆಯಲು ಸೂಚಿಸಲಾಗಿದೆ.

ರಾತ್ರಿ ಕರ್ಫ್ಯೂ ವಿಸ್ತರಣೆ ಬಗ್ಗೆ ಏಪ್ರಿಲ್ 20ರ ನಂತರ ನಿರ್ಧಾರ: ಯಡಿಯೂರಪ್ಪರಾತ್ರಿ ಕರ್ಫ್ಯೂ ವಿಸ್ತರಣೆ ಬಗ್ಗೆ ಏಪ್ರಿಲ್ 20ರ ನಂತರ ನಿರ್ಧಾರ: ಯಡಿಯೂರಪ್ಪ

ಬೆಂಗಳೂರಿನಲ್ಲಿ ಗುರುವಾರ ಒಂದೇ ದಿನ 10497 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 5,12,521ಕ್ಕೆ ಏರಿಕೆಯಾಗಿದೆ. 71,827 ಕೊವಿಡ್-19 ಸಕ್ರಿಯ ಪ್ರಕರಣಗಳಿದ್ದು, ಮಹಾಮಾರಿಗೆ ಈವರೆಗೂ ಬೆಂಗಳೂರು ನಗರವೊಂದರಲ್ಲೇ 4963 ಮಂದಿ ಪ್ರಾಣ ಬಿಟ್ಟಿದ್ದಾರೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ವಲಯವಾರು ಕೊರೊನಾವೈರಸ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ. ಯಾವ ವಲಯಗಳಲ್ಲಿ ಎಷ್ಟು ಮತ್ತು ಎಲ್ಲೆಲ್ಲಿ ಕೇರ್ ಸೆಂಟರ್ ತೆರಯಲಾಗಿದೆ. ಯಾವ ಕೇರ್ ಸೆಂಟರ್ ಸಾಮರ್ಥ್ಯ ಎಷ್ಟಿದೆ ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ ನೋಡಿ.

ಪೂರ್ವ ವಲಯದ ಕೇಂದ್ರ

ಪೂರ್ವ ವಲಯದ ಕೇಂದ್ರ

ಬೆಂಗಳೂರಿನ ಪೂರ್ವ ವಲಯದಲ್ಲಿ 2 ಕೊವಿಡ್ ಕೇರ್ ಸೆಂಟರ್:

- ಸರ್ಕಾರಿ ಬಾಲಕರ ಕಲಾ ಕಾಲೇಜು (210 ಸಾಮರ್ಥ್ಯ)

- ಶ್ರೀ ಸಾಯಿ ಕಲ್ಯಾಣ ಮಂಟಪ (150 ಸಾಮರ್ಥ್ಯ)

ದಕ್ಷಿಣ ವಲಯ ಕೇಂದ್ರ

ದಕ್ಷಿಣ ವಲಯ ಕೇಂದ್ರ

ಸಿಲಿಕಾನ್ ಸಿಟಿಯ ದಕ್ಷಿಣ ವಲಯದಲ್ಲಿ 2 ಕೊರೊನಾವೈರಸ್ ಆರೈಕೆ ಕೇಂದ್ರಗಳು:

- ಬೋಷ್ ಕೊವಿಡ್ ಕೇರ್ ಸೆಂಟರ್ (80 ಸಾಮರ್ಥ್ಯ)

- ನ್ಯಾಷನಲ್ ಗೇಮ್ಸ್ ವಿಲೇಜ್ (250 ಸಾಮರ್ಥ್ಯ)

ಪಶ್ಚಿಮ ವಲಯ ಕೇಂದ್ರ

ಪಶ್ಚಿಮ ವಲಯ ಕೇಂದ್ರ

ಬೆಂಗಳೂರಿನ ಪಶ್ಚಿಮ ವಲಯದಲ್ಲಿ 2 ಕೊವಿಡ್ ಆರೈಕೆ ಕೇಂದ್ರ ತೆರೆಯಲು ಸೂಚನೆ:

- ಸರ್ಕಾರಿ ಆಯುರ್ವೇದ ಕಾಲೇಜು (200 ಸಾಮರ್ಥ್ಯ)

ಇತರೆ ವಲಯಗಳಲ್ಲಿ ಒಂದೊಂದು ಕೊರೊನಾ ಸೇವಾ ಕೇಂದ್ರ

ಇತರೆ ವಲಯಗಳಲ್ಲಿ ಒಂದೊಂದು ಕೊರೊನಾ ಸೇವಾ ಕೇಂದ್ರ

ಬೊಮ್ಮನಹಳ್ಳಿ(1) - ಬ್ಲಾಸಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ/ವಿಂಟೇಜ್ ಇನ್ ಹೋಟೆಲ್ (50 ಸಾಮರ್ಥ್ಯ)

ರಾಜರಾಜೇಶ್ವರಿ ನಗರ(1) - ನಾರ್ತ್ ಈಶ್ಟರ್ನ್ ಗರ್ಲ್ಸ್ ಹಾಸ್ಟೆಲ್ (370 ಸಾಮರ್ಥ್ಯ)

ಯಲಹಂಕ(1) - ಸರ್ಕಾರಿ ಮೆಟ್ರಿಕ್ ಗರ್ಲ್ಸ್ ಹಾಸ್ಟೆಲ್ (50 ಸಾಮರ್ಥ್ಯ)

ದಾಸರಹಳ್ಳಿ(1) - ಹೋಟೆಲ್ ರಾಜ್ ವಿಸ್ತಾ ಹೆಸರಘಟ್ಟ ಮುಖ್ಯರಸ್ತೆ, ಬೆಂಗಳೂರು (40 ಸಾಮರ್ಥ್ಯ)

ಮಹದೇವಪುರ(1) - ರಾಧಾ ಹೋಮ್ ಟೆಲ್ (105 ಸಾಮರ್ಥ್ಯ)

Recommended Video

' ಖಾಸಗಿ ಹೊಟೇಲ್‌ಗಳನ್ನ ತಾತ್ಕಾಲಿಕ ಆಸ್ಪತ್ರೆಗಳಾಗಿಸಲು ಸಿದ್ಧತೆ' ಕೊರೊನಾ ಚಿಕಿತ್ಸೆ ಕುರಿತು ಸಚಿವ ಸುಧಾಕರ್ ಮಾಹಿತಿ | Oneindia Kannada

English summary
List of Covid-19 Care Centres Added By BBMP Commissioner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X