• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಣ್ಣೆಪ್ರಿಯರೇ ಎಚ್ಚರಿಕೆ: ಸಿಲಿಕಾನ್ ಸಿಟಿಯಲ್ಲಿ ಎರಡು ದಿನ ಸಿಗಲ್ಲ ಮದ್ಯ!

|
Google Oneindia Kannada News

ಬೆಂಗಳೂರು, ಮೇ 19: ಸಿಲಿಕಾನ್ ಸಿಟಿಯ ಎಣ್ಣೆ ಪ್ರಿಯರಿಗೆ ಇದೊಂದು ರೀತಿಯ ಶಾಕಿಂಗ್ ಸುದ್ದಿ. ಏಕೆಂದರೆ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಗುರುವಾರ ಮತ್ತು ಶುಕ್ರವಾರ ಮದ್ಯದ ಅಂಗಡಿಗಳು ಬಂದ್ ಆಗಿರುತ್ತವೆ.

ಗುರುವಾರ ಬೆಳಗ್ಗೆ 9 ಗಂಟೆಯಿಂದಲೇ ಎಣ್ಣೆ ಅಂಗಡಿಗಳನ್ನು ಬಂದ್ ಮಾಡಲಾಗಿದ್ದು, ಶುಕ್ರವಾರ ರಾತ್ರಿ 10 ಗಂಟೆವರೆಗೂ ತೆರೆದಿರುವುದಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಎಣ್ಣೆ ಅಂಗಡಿ ಬಂದ್ ಮಾಡುವುದಕ್ಕೆ ಕಾರಣವೂ ಇದೆ.

ಕುಡುಕರೇ ಗಮನಿಸಿ: ಕರ್ನಾಟಕದಲ್ಲಿ ಈ ವೀಕೆಂಡ್‌ನಲ್ಲಿ ಎಣ್ಣೆ ಸಿಗಲ್ಲ!ಕುಡುಕರೇ ಗಮನಿಸಿ: ಕರ್ನಾಟಕದಲ್ಲಿ ಈ ವೀಕೆಂಡ್‌ನಲ್ಲಿ ಎಣ್ಣೆ ಸಿಗಲ್ಲ!

ಕಳೆದ 2022ರ ಏಪ್ರಿಲ್ ತಿಂಗಳಿನಿಂದ ಜುಲೈ ತಿಂಗಳಾಂತ್ಯದವರೆಗೂ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸಲಾಗುತ್ತಿದೆ. ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಕಾರಣಕ್ಕೆ ತೆರವುಗೊಂಡಿರುವ ಹುದ್ದೆಗಳಿಗೆ ರಾಜ್ಯ ಚುನಾವಣಾ ಆಯೋಗವು ಉಪ ಚುನಾವಣೆ ಘೋಷಿಸಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಚುನಾವಣೆ: ರಾಜ್ಯ ರಾಜಧಾನಿಯಲ್ಲಿ ಮೇ 19 ಮತ್ತು 20ರಂದು ಎಣ್ಣೆ ಸಿಗದಿರುವುದಕ್ಕೆ ಗ್ರಾಮ ಪಂಚಾಯಿತಿ ಚುನಾವಣೆಗಳು ಕಾರಣವಾಗಿದೆ. ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಆಗಿರುವ ವಿವಿಧ ಹುದ್ದೆಗಳಿಗೆ ಮೇ 20ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಈ ಅವಧಿಯಲ್ಲಿ ನಗರ ಮತ್ತು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ ಬಿಯರ್, ವೈನ್ ಮತ್ತು ಇತರೆ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟವನ್ನು ನಿರ್ಬಂಧಿಸಲಾಗಿದೆ.

Liquor Sale Ban in Bengaluru on May 20 During Gram Panchayat Election

200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ; ಬೆಂಗಳೂರು ನಗರ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಉಪ ಚುನಾವಣೆ ಮತ್ತು ಸಾರ್ವತ್ರಿಕ ಚುನಾವಣೆ ನಡೆಯುವ ಮತದಾನ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಗುರುವಾರ ಬೆಳಗ್ಗೆ 6 ರಿಂದ ಶುಕ್ರವಾರ ರಾತ್ರಿ 10 ಗಂಟೆವರೆಗೂ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

   Heavy Rain in Karnataka: ಕರ್ನಾಟಕದಲ್ಲಿ ಭಾರೀ ಮಳೆ , ಶಾಲೆಗಳಿಗೆ ರಜೆ | Oneindia Kannada
   English summary
   Liquor sale ban in Bengaluru Rural on May 20th due to gram panchayat election.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X