ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಸ್ಲಿಮರಂತೆ ಧರ್ಮಾಚರಣೆ ಅಗತ್ಯ ಎಂದ ಲಿಂಗಾಯತ ಮಹಾಸಭಾ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 29: ಮುಸ್ಲಿಮರಂತೆ ಲಿಂಗಾಯತರಲ್ಲೂ ಧರ್ಮಾಚರಣೆ ಜಾಗೃತವಾಗಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಅರವಿಂದ ಜತ್ತಿ ಅಭಿಪ್ರಾಯಪಟ್ಟಿದ್ದಾರೆ.

ಲಿಂಗಾಯತ ಮಹಾಸಭಾದ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಸಲಿಮರು ಹೇಗೆ ತಮ್ಮ ಧರ್ಮವನ್ನು ಪಾಲನೆ ಮಾಡುತ್ತಾರೆ ಹಾಗೆ ಧರ್ಮದಲ್ಲಿ ಹೇಳಿರುವ ನೀತಿಯನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ ಅಂತಹ ಧರ್ಮಾಭಿಮಾನ ಲಿಂಗಾಯತರಲ್ಲೂ ಬೆಳೆಸಿಕೊಳ್ಳಬೇಕು ಎಂದರು.

ಲಿಂಗಾಯತ ಪ್ರತ್ಯೇಕ ಧರ್ಮ : ಟ್ವಿಟರ್‌ನಲ್ಲಿ ಸಿದ್ದರಾಮಯ್ಯ ಹೇಳಿದ್ದೇನು? ಲಿಂಗಾಯತ ಪ್ರತ್ಯೇಕ ಧರ್ಮ : ಟ್ವಿಟರ್‌ನಲ್ಲಿ ಸಿದ್ದರಾಮಯ್ಯ ಹೇಳಿದ್ದೇನು?

ಬಸವಣ್ಣನ ಮಾನವ ತತ್ವಗಳು ವಿಶ್ವ ಸಂಸ್ಥೆಯಲ್ಲಿ ಮಾನ್ಯತೆ ಪಡೆಯುವ ದಿನಗಳು ದೂರವಿಲ್ಲ. ಈ ದಿಸೆಯಲ್ಲಿ ಇಂಬು ನೀಡುವ ಕೆಲಸಕ್ಕೆ ಪ್ರತಿಯೊಬ್ಬರೂ ಸಿದ್ಧವಾಗಬೇಕು. ಫ.ಗು.ಹಳಕಟ್ಟಿಯವರ ಚೇತನವನ್ನು ಆದರ್ಶವಾಗಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.

Lingayata religion should follow its religious rituals

ಬಿ.ಡಿ.ಜತ್ತಿಯವರು ರಾಷ್ಟ್ರಪತಿಯಾಗಿದ್ದಾಗಲೂ ತಮ್ಮ ಹಣೆಗೆ ವಿಭೂತಿ ಧರಿಸುತ್ತಿದ್ದರು. ಇದು ಬಸವ ಧರ್ಮದ ಕಟಿಬದ್ಧತೆಗೆ ಅವರಿಗಿದ್ದ ಒಂದು ಸ್ಪಷ್ಟ ಉದಾಹರಣೆ. ಅವರಂತೆಯೇ ಎಲ್ಲ ಬಸವಾಭಿಮಾನಿಗಳೂ ಇಂದು ಲಿಂಗಾಯತ ಧರ್ಮದ ಆಚಾರ-ವಿಚಾರಗಳನ್ನು ತಪ್ಪದೇ ಪಾಲನೆ ಮಾಡಬೇಕು ಎಂದರು.

ಕಾಂಗ್ರೆಸ್ ಸೋಲಿಗೆ ಲಿಂಗಾಯತ ಹೋರಾಟ ಕಾರಣವೇ? ಇಲ್ಲಿದೆ ಸತ್ಯಾಂಶ ಕಾಂಗ್ರೆಸ್ ಸೋಲಿಗೆ ಲಿಂಗಾಯತ ಹೋರಾಟ ಕಾರಣವೇ? ಇಲ್ಲಿದೆ ಸತ್ಯಾಂಶ

ಬೇಲಿಮಠದ ಶಿವರುದ್ರ ಸ್ವಾಮೀಜಿ ಮಾತನಾಡಿ, ಲಿಂಗಾಯತ ಧರ್ಮಕ್ಕೆ ಯಾರೂ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕಾಗಿಲ್ಲ. ಅದು ಯಾವತ್ತೊ ಸ್ವತ್ರಂತ್ರ ಧರ್ಮ ಆಗಿದೆ. ವಾಸ್ತವದಲ್ಲಿ ಅದರ ಪಾಲನೆ ನಮ್ಮೆಲ್ಲರ ಆದ್ಯ ಕರ್ತವ್ಯ ಅಗಬೇಕು ಅಷ್ಟೇ ಎಂದು ಹೇಳಿದರು.

ನಾನು ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ:ಸಿಎಂ ನಾನು ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ:ಸಿಎಂ

ಮಹಾಸಭಾದ ಪ್ರಧಾನ ಕಾರ್ಯದರ್ಶಿಗಳಾದ ಜಿ.ಬಿ.ಪಾಟೀಲ, ಡಾ.ಸಿ.ಜಯ್ಯಣ್ಣ, ಕೆನಡಾದಲ್ಲಿ ವಿಶ್ವಸಂಸ್ಥೆ ವತಿಯಿಂದ ಆರಂಭಗೊಂಡಿರುವ ಮಾನವ ಹಕ್ಕುಗಳ ಸಂಗ್ರಹಾಲಯದಲ್ಲಿ ಬಸವಣ್ಣನ ತತ್ವಗಳನ್ನು ಪ್ರಚುರಪಡಿಸುತ್ತಿರುವ ಜ್ಯೋತಿ ಪ್ರಭಾ, ಲೇಖಕ ರಂಜಾನ್ ದರ್ಗಾ, ಪ್ರೊ.ವೀರಭದ್ರಯ್ಯ, ಟಿ.ಆರ್.ಚಂದ್ರಶೇಖರ್, ಮುಕ್ತಾ ಬಿ.ಕಾಗಲಿ ಇದ್ದರು.

English summary
Lingayat mahasabha instructed to all lingayats that to follow religious rituals. They told that to see how Muslims respect their religion
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X