ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಷ್ಕರ್ ಉಗ್ರನಿಗೆ ಜೀವಾವಧಿ ಶಿಕ್ಷೆ ನೀಡಿದ ಕರ್ನಾಟಕ ಹೈಕೋರ್ಟ್‌

|
Google Oneindia Kannada News

ಬೆಂಗಳೂರು, ಡಿಸೆಂಬರ್ 11 : ಬೆಂಗಳೂರು ನಗರದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಲಷ್ಕರ್-ಎ-ತೈಬಾ ಉಗ್ರನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಸಿಟಿ ಸಿವಿಲ್ ಕೋರ್ಟ್ ನೀಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ.

45 ವರ್ಷದ ಇಮ್ರಾನ್ ಜಲಾಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಬೆಂಗಳೂರಿನ ಐಟಿ ಕಂಪನಿಗಳ ಮೇಲೆ ದಾಳಿ ನಡೆಸಲು ಇಮ್ರಾನ್ ಸಂಚು ರೂಪಿಸಿದ್ದ. 2007ರಲ್ಲಿ ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಇಮ್ರಾನ್ ಬಂಧಿಸಿದ್ದ ಪೊಲೀಸರು, ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದರು.

 ಜಮ್ಮು-ಕಾಶ್ಮೀರದಲ್ಲಿ ಲಷ್ಕರ್ ಸಂಘಟನೆಯ ಇಬ್ಬರು ಉಗ್ರರ ಬಂಧನ ಜಮ್ಮು-ಕಾಶ್ಮೀರದಲ್ಲಿ ಲಷ್ಕರ್ ಸಂಘಟನೆಯ ಇಬ್ಬರು ಉಗ್ರರ ಬಂಧನ

ಸಿಟಿ ಸಿವಿಲ್ ಕೋರ್ಟ್‌ ಇಮ್ರಾನ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆತ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಹಾಕಿದ್ದ. ನ್ಯಾಯಮೂರ್ತಿ ರವಿ ಮಳಿಮಠ ನೇತೃತ್ವದ ವಿಭಾಗೀಯ ಪೀಠ ಕೆಳ ಹಂತದ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿ ಹಿಡಿಯಿತು.

ಭಯೋತ್ಪಾದನೆ ದೊಡ್ಡ ಅಪಾಯ: ಬ್ರಿಕ್ಸ್ ಸಮಿತಿಯಲ್ಲಿ ಮೋದಿ ಕಳವಳಭಯೋತ್ಪಾದನೆ ದೊಡ್ಡ ಅಪಾಯ: ಬ್ರಿಕ್ಸ್ ಸಮಿತಿಯಲ್ಲಿ ಮೋದಿ ಕಳವಳ

life Sentence For Lashkar E Taiba Terrorist Imran Jalal

ಬೆಂಗಳೂರಿನಲ್ಲಿ ವ್ಯಾಸಂಗ: ಇಮ್ರಾನ್ ಜಲಾಲ್ ಮೂಲತಃ ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದವನು. ಬೆಂಗಳೂರಿನ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡಿದ್ದ. ಬಳಿಕ ಹಂಪಿಯಲ್ಲಿ ಕರಕುಶಲವ ವಸ್ತುಗಳ ಅಂಗಡಿ ತೆರೆದಿದ್ದ.

ಮೋಸ್ಟ್ ವಾಂಟೆಡ್ ಉಗ್ರ ಬಗ್ದಾದಿಯನ್ನು ಕೊಂದಿದ್ದು ಇದೇ ನಾಯಿಮೋಸ್ಟ್ ವಾಂಟೆಡ್ ಉಗ್ರ ಬಗ್ದಾದಿಯನ್ನು ಕೊಂದಿದ್ದು ಇದೇ ನಾಯಿ

2007ರ ಜನವರಿ 5ರಂದು ಹೊಸಪೇಟೆಯಿಂದ ಬೆಂಗಳೂರಿಗೆ ಬಂದಾಗ ಇಮ್ರಾನ್ ಜಲಾಲ್ ಬಂಧಿಸಲಾಗಿತ್ತು. ಆತನ ಬಳಿಯಿಂದ ಎರಡು ಬ್ಯಾಗ್ ವಶಕ್ಕೆ ಪಡೆಯಲಾಗಿತ್ತು. ಸ್ಯಾಟಲೈಟ್ ಫೋನ್, ಹ್ಯಾಂಡ್ ಗ್ರನೇಡ್, ಬೆಂಗಳೂರಿನ ನಕ್ಷೆ ಸೇರಿದಂತೆ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು.

ಇಮ್ರಾನ್ ಜಲಾಲ್ ನಕಲಿ ಪಾಸ್‌ಪೋರ್ಟ್‌ ಮೂಲಕ ಎರಡು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ. ಎಕೆ 47 ಬಳಕೆ, ಬಾಂಬ್ ತಯಾರಿ ಮಾಡುವ ತರಬೇತಿಯನ್ನು ಪಡೆದಿದ್ದ ಎಂಬುದು ಸಿಸಿಬಿ ಪೊಲೀಸರ ತನಿಖೆಯಿಂದ ತಿಳಿದುಬಂದಿತ್ತು.

English summary
Karnataka high court has uphold the judgement of the city civil court that ordered life sentence for Lashkar-e-Taiba terrorist Imran Jalal. Imran arrested by CCB police in 2007 at Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X