• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿಲಿಕಾನ್ ಸಿಟಿಗೆ ಕಾಲಿಟ್ಟಿದೆ ಜೀವ ವರ್ಧಕ ಅಮೃತ ನೋನಿ ಹಣ್ಣುಗಳು!

|

ಬೆಂಗಳೂರು, ಫೆಬ್ರವರಿ 3: ಅಮೃತ ನೋನಿ ಹಣ್ಣು. ಹೆಸರೇ ಹೇಳುವಂತೆ ಇದು ಜೀವ ವರ್ಧಕ. ಕ್ಯಾನ್ಸರ್‍ನಂಥ ಮಾರಕ ರೋಗಗಳಿಂದ ಹಿಡಿದು ಆಧುನಿಕ ಒತ್ತಡದ ಜೀವನ ಶೈಲಿಯಿಂದ ಬರುವ ಬಹುತೇಕ ರೋಗಗಳ ನಿವಾರಣೆಗೆ ರಾಮ ಬಾಣ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಶೇಡ್ ಗಾರ್ ಗುಡ್ಡೆಕೊಪ್ಪದ ಶ್ರೀನಿವಾಸ ಮೂರ್ತಿಯವರು ಗಂಭೀರ ಕಾಯಿಲೆಯೊಂದರಿಂದ ಪವಾಡಸದೃಶರಾಗಿ ಪಾರಾಗಲು ನೆರವಾಗಿದೆ. ಈ ಅಮೃತ ನೋನಿ ಹಣ್ಣು ! ಇವರು ಬದುಕಿ ಬಂದ ಕಥೆಯೇ ರೋಚಕ.

ಕ್ಯಾನ್ಸರ್ ಎಂಬ ಯಮನಿಗೆ ಸೆಡ್ಡು ಹೊಡೆದ ಗಟ್ಟಿಗಿತ್ತಿ ಶಿವಮೊಗ್ಗದ ಶ್ರುತಿ

ಶ್ರೀನಿವಾಸ ಮೂರ್ತಿಯವರಿಗೆ ಇದ್ದಕ್ಕಿದ್ದ ಹಾಗೆ ಕಾಯಿಲೆಯೊಂದು ಆವರಿಸಿತು.

ಅದು ಆಮವಾತದಂತಹ ವಿಚಿತ್ರ ಕಾಯಿಲೆ. ಕಂಡ ಕಂಡಲ್ಲಿ ಚಿಕಿತ್ಸೆ ಕೊಡಿಸಿದರೂ, ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದರೂ ಮೂರ್ತಿಯವರು ಹಾಸಿಗೆಯಿಂದ ಮೇಲೇಳಲೇ ಇಲ್ಲ. ನೋವುನಿವಾರಕ ಔಷಧಿಗಳನ್ನು ಉಪಯೋಗಿಸಿದರೂ ಕಾಯಿಲೆ ಸಂಪೂರ್ಣ ಗುಣಮುಖವಾಗಲಿಲ್ಲ. ಎಲ್ಲ ಪ್ರಸಿದ್ಧ ವೈದ್ಯರನ್ನು ಸಂಪರ್ಕಿಸಿದರೂ ಪ್ರಯೋಜನವಾಗಲಿಲ್ಲ.

ಅಷ್ಟರಲ್ಲಿ ಶ್ರೀನಿವಾಮೂರ್ತಿಯವರಿಗೆ ಅಮೃತ ನೋನಿ ಸಂಜೀವಿನಿಯಾಗಿ ಕಂಡುಬಂದಿತು. ಯಾರೋ ಸ್ನೇಹಿತರು ಈ ಹಣ್ಣಿನ ಔಷಧ ತಂದಿಟ್ಟರು. ಎಷ್ಟೋ ಔಷಧ, ಚಿಕಿತ್ಸೆ ಪಡೆದಾಗಿದೆ. ಇದನ್ನೂ ಒಮ್ಮೆ ಪ್ರಯತ್ನಿಸಿ ನೋಡುವ ಎಂದುಕೊಂಡು ಸೇವನೆ ಆರಂಭಿಸಿದರು. ಪವಾಡ ಸದೃಶರಾಗಿ ದಿನೇ ದಿನೇ ಆರೋಗ್ಯದಲ್ಲಿ ಚೇತರಿಕೆ ಪ್ರಾರಂಭಗೊಂಡಿತು. ಮುಂದೊಂದು ದಿನ ಈ ಹಣ್ಣಿನ ಫಲಾನುಭವಿಯಾದರು.

ಮಾನಸಿಕ ಒತ್ತಡ, ಅಲರ್ಜಿ, ಆಮವಾತ, ಆಸ್ತಮಾ, ಕ್ಯಾನ್ಸರ್, ಗಂಟುನೋವು, ಕೂದಲು ಉದುರುವಿಕೆ, ಮೂತ್ರ ಜನಕಾಂಗದ ಕಾಯಿಲೆ, ಸಕ್ಕರೆ ಕಾಯಿಲೆ, ಚರ್ಮದ ರೋಗಗಳನ್ನೆಲ್ಲ ನಿರ್ಮೂಲನೆ ಮಾಡುವ 150ಕ್ಕೂ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ನೋನಿ ಹಣ್ಣು ಇನ್ನು ಉದ್ಯಾನ ನಗರಿಯಲ್ಲೂ ಸಿಗಲಿದೆ.

ಏನಿದು ಅಮೃತ ನೋನಿ ಹಣ್ಣು

ಏನಿದು ಅಮೃತ ನೋನಿ ಹಣ್ಣು

ಅಮೃತ ನೋನಿ ಮೂಲತಃ ಭಾರತದ ಔಷಧೀಯ ಹಣ್ಣು. ಪ್ರಕೃತಿಯಲ್ಲಿ ದೊರೆಯುವ ಅದ್ಭುತ ಆರೋಗ್ಯ ವರ್ಧಕ ಹಾಗೂ ರೋಗ ನಿರೋಧಕ. ಇದು ಮೊರಿಂಡಾ ಸಿಟ್ರಿಪೊಲಿಯಾ ಎಂಬ ಸಸ್ಯ ಪ್ರಭೇದಕ್ಕೆ ಸೇರಿದ್ದು ಭಾರತದ ಮಲ್ಬರಿ ಎಂದೂ ಕರೆಯುತ್ತಾರೆ. ಇದು ಪೊದೆಯ ರೂಪದಲ್ಲಿ ಬೆಳೆಯುವ ಗಿಡವಾಗಿದ್ದು, ಸುಮಾರು 10ರಿಂದ 12 ಅಡಿ ಎತ್ತರ ಬೆಳೆಯುತ್ತದೆ. ಗಿಡವೊಂದು ಸರಾಸರಿ 20 ಕೆ.ಜಿ.ಯಷ್ಟು ನೋನಿ ಹಣ್ಣುಗಳನ್ನು ನೀಡುತ್ತದೆ.

ಆಯುಷ್ಯ ವರ್ಧಕ: ಅಮೃತ ನೋನಿ ಹಣ್ಣಿನ ಔಷಧೀಯ ಗುಣಗಳ ಬಗ್ಗೆ ವಿಶ್ವದ 40ಕ್ಕೂ ಹೆಚ್ಚು ವಿಶ್ವ ವಿದ್ಯಾಲಯಗಳಲ್ಲಿ ಸಂಶೋಧನೆಗಳು ನಡೆದಿವೆ. ಈಗಲೂ ಸಂಶೋಧನೆಗಳು ನಡೆಯುತ್ತಿವೆ. ಈ ಹಣ್ಣಿಗೆ ಸಂಸ್ಕೃತದಲ್ಲಿ ಆಯುಷ್ಕ ಎಂಬ ಹೆಸರಿದೆ. ಆಯುಷ್ಕ ಎಂದರೆ ಆಯಸ್ಸನ್ನು ವೃದ್ಧಿಸುವುದು ಎಂದರ್ಥ.

ಅಮೃತನೋನಿ ಹಣ್ಣು ಜೀವವರ್ಧಕ

ಅಮೃತನೋನಿ ಹಣ್ಣು ಜೀವವರ್ಧಕ

ಔಷಧವಾಗಿ ಮಾತ್ರವಲ್ಲದೆ ಜೀವ ವರ್ಧಕವಾಗಿಯೂ ಈ ಹಣ್ಣನ್ನು ಬಳಸಬಹುದು. ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು, ಮಾನಸಿಕ ಶಾಂತಿ ಕಾಯ್ದುಕೊಳ್ಳಲು, ಚೆನ್ನಾಗಿ ನಿದ್ರಿಸಲು, ಲವಲವಿಕೆಯಿಂದ ಇರಲು, ದೇಹವನ್ನು ವಿಷಾಂಷಗಳಿಂದ ಮುಕ್ತಗೊಳಿಸಲು ನೋನಿ ಹಣ್ಣು ಉಪಯುಕ್ತ.

ಮೃತ್ಯು ಸಂಜೀವಿನಿ ಫಲ

ಮೃತ್ಯು ಸಂಜೀವಿನಿ ಫಲ

ಅಮೃತ ನೋನಿ ರಸ ತುಂಡಾದ ಎಲುಬನ್ನು ಜೋಡಿಸಲೂ ನೆರವಾಗುತ್ತದೆ. ಗಂಟು ನೋವು ನಿವಾರಣೆಗೆ ಪರಿಣಾಮಕಾರಿ. ಈ ಹಣ್ಣಿನ ರಸ ಗಂಟು ನೋವು, ಕೈ ಮಡಚುವ ತೊಂದರೆ, ಕಾಲು ನೋವು ಮತ್ತು ಮಂಡಿ ನೋವಿಗೆ ಔಷಧವಾಗಿ ಈಗಾಲೇ ಉಪಯೋಗಿಸಲ್ಪಡುತ್ತಿದೆ. ಕ್ಯಾನ್ಸರ್ ಕಾರಕ ಕೋಶಗಳನ್ನು ನಾಶಪಡಿಸುವ ಸಾಮಥ್ರ್ಯ ಹೊಂದಿರುವ ಅಮೃತ ನೋನಿಗೆ ಮೃತ್ಯು ಸಂಜೀವಿನಿ ಫಲ, ಅಮೃತ ಫಲ, ಆಯುಷ್ಯ ಫಲ ಇತ್ಯಾದಿ ಹೆಸರುಗಳೂ ಇವೆ. ಇದು ಜೀರ್ಣಕ್ರಿಯೆ ಉತ್ತಮವಾಗಿ ಇರುವಂತೆ ನೋಡಿಕೊಳ್ಳಲೂ ಸಹಕಾರಿ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ.

ಅಮೃತನೋನಿ ಹಣ್ಣಿಗೆ ಮುರಿದ ಎಲುಬನ್ನೂ ಜೋಡಿಸುವ ಶಕ್ತಿ ಇದೆ

ಅಮೃತನೋನಿ ಹಣ್ಣಿಗೆ ಮುರಿದ ಎಲುಬನ್ನೂ ಜೋಡಿಸುವ ಶಕ್ತಿ ಇದೆ

ಉಸಿರಾಟದ ಸಮಸ್ಯೆ, ಮಲಬದ್ಧತೆ, ರಕ್ತದೊತ್ತಡ ನಿಯಂತ್ರಣಕ್ಕೂ ಅಮೃತ ನೋನಿ ಬಳಕೆಯಲ್ಲಿದೆ. ಕೀಲು ನೋವು, ಹೃದಯ ಸಂಬಂಧಿ ಕಾಯಿಲೆಗಳು, ಖಿನ್ನತೆಗೂ ನೋನಿ ಸೇವನೆ ಪರಿಣಾಮಕಾರಿ ಎಂಬುದು ಸಂಶೋಧನೆಗಳಲ್ಲಿ ದೃಢಪಟ್ಟಿದೆ. ಈ ಹಣ್ಣಿನಲ್ಲಿರುವ ರಾಸಾಯನಿಕಗಳಾದ ಝರೋನಿನ್, ಡೆಮಾನ್ ಕೆಂತಾಲ್ ಮುಂತಾದವುಗಳು ಪಿತ್ಥಜನಕಾಂಗ (ಲಿವರ್), ಹೃದಯ, ಮೂತ್ರಜನಕಾಂಗದ ಕಾರ್ಯನಿರ್ವಹಣೆ ಸುಗಮವಾಗಿರುವಂತೆ ನೋಡಿಕೊಳ್ಳಲು ನೆರವಾಗುತ್ತವೆ. ನೋವು ನಿವಾರಕವಾಗಿಯೂ ಈ ಹಣ್ಣು ಬಹಳ ಪರಿಣಾಮಕಾರಿ ಔಷಧ. ಎಚ್‍ಐವಿ ಏಡ್ಸ್ ನಿಂಯಂತ್ರಣಕ್ಕೂ ವೈದ್ಯರು ಔಷಧವಾಗಿ ಶಿಫಾರಸು ಮಾಡುತ್ತಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Curing cancer and many diseases, life sabing Amrutha Noni fruits now available in Bengaluru. These fruits have more than 150 proteins, claimed srinivas Murthy, who was survivor from Shedgar koppa in Teerthahalli taluk of Shivamogga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more