ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಖ್ಯಾತ ದಂಡುಪಾಳ್ಯ ಗ್ಯಾಂಗ್ನ ಐವರಿಗೆ ಜೀವಾವಧಿ ಶಿಕ್ಷೆ

By Manjunatha
|
Google Oneindia Kannada News

ನವೆಂಬರ್ 10, ಆನೆಕಲ್: ಕುಖ್ಯಾತ ದರೋಡೆಕೋರರ ತಂಡ 'ದಂಡುಪಾಳ್ಯ ಗ್ಯಾಂಗ್' ನ ಐವರು ಆರೋಪಿಗಳಿಗೆ ಕೇಂದ್ರ ಕಾರಗೃಹ ಪರಪ್ಪನ ಅಗ್ರಹಾರ ವಿಶೇಷ ನ್ಯಾಯಲಯವು ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿದೆ.

2000 ರಲ್ಲಿ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡಿದಿದ್ದ ಗೀತಾ ಎಂಬುವರ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಶಿವನಗೌಡ ಅವರು ಈ ತೀರ್ಪು ನೀಡಿದ್ದಾರೆ.

ದಂಡುಪಾಳ್ಯ ಗ್ಯಾಂಗ್ ಸದಸ್ಯರಿಗೆ ಜೀವಾವಧಿ ಶಿಕ್ಷೆದಂಡುಪಾಳ್ಯ ಗ್ಯಾಂಗ್ ಸದಸ್ಯರಿಗೆ ಜೀವಾವಧಿ ಶಿಕ್ಷೆ

Life expectancy to Natorious Dandupalya gang membres

ಗೀತಾ ಅವರು ಒಬ್ಬರೇ ಇದ್ದಾಗ ಮನೆಗೆ ನುಗ್ಗಿದ ಆರೋಪಿಗಳು ಅವರ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿ, ಹಣ ಒಡವೆ ದೊಚಿದ್ದರು.

ದಂಡುಪಾಳ್ಯ ಗ್ಯಾಂಗ್ ತಕ್ಷಣ ಬಿಡುಗಡೆಗೆ ಸೂಚನೆದಂಡುಪಾಳ್ಯ ಗ್ಯಾಂಗ್ ತಕ್ಷಣ ಬಿಡುಗಡೆಗೆ ಸೂಚನೆ

ಆರೋಪಿಗಳಾದ ಡೊಡ್ಡಹನುಮ, ನಲ್ಲತಿಮ್ಮ ,ಮುನಿಕೃಷ್ಣ , ವೆಂಕಟೇಶ ಹಾಗೂ ಲಕ್ಷ್ಮಿ, ಐದೂ ಜನಕ್ಕೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದೇ ತಂಡದ ವಿರುದ್ದ ಒಟ್ಟು 35 ಕೊಲೆ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಒಂಟಿ ಮಹಿಳೆಯರಿದ್ದ ಮನೆಗಳಿಗೆ ನುಗ್ಗುತ್ತಿದ್ದ ಈ ತಂಡ ಮಹಿಳೆಯರನ್ನು ಸಾಮೂಹಿಕ ಅತ್ಯಾಚಾರ ಮಾಡಿ ಕತ್ತುಸೀಳಿ ಕೊಲೆ ಮಾಡುತ್ತಿತ್ತು. ಅತ್ಯಂತ ಕ್ರೂರ ದರೋಡೆಕೋರರ ತಂಡವೆಂದು ಕರೆಯಲಾಗುತ್ತಿದ್ದ ದಂಡುಪಾಳ್ಯ ಗ್ಯಾಂಗ್ ಕೆಲ ಸಮಯ ಬೆಂಗಳೂರಿನಲ್ಲಿ ಆತಂಕದ ಪರಿಸ್ಥಿತಿಯನ್ನು ಹುಟ್ಟುಹಾಕಿತ್ತು.

English summary
special Court give judgment of Geetha murder case witch allegedly did by Natorious Dandupalya gang membres. Court verdicted life expectancy and 5000 fine. ಕುಖ್ಯಾತ ದಂಡುಪಾಳ್ಯ ಗ್ಯಾಂಗ್ ಗೆ ಜೀವಾವಧಿ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X