ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

''ಖಾಸಗಿ ಆಸ್ಪತ್ರೆಗಳ ಫೀವರ್ ಕ್ಲಿನಿಕ್ ಸರ್ಕಾರವೇ ನಡೆಸಲಿ''

|
Google Oneindia Kannada News

ಬೆಂಗಳೂರು, ಜೂನ್ 25: ರಾಜ್ಯ ಸರಕಾರ ಹೆಚ್ಚಳವಾಗುತ್ತಿರುವ ಕೋವಿಡ್ - 19 ಕ್ಕೆ ಚಿಕಿತ್ಸೆ ನೀಡಲು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸ್ಥಳಾವಕಾಶವಿಲ್ಲವೆಂದು ಹೇಳಿ, ಖಾಸಗಿ ಆಸ್ಪತ್ರೆಗಳನ್ನು ಚಿಕಿತ್ಸೆಗಾಗಿ ಬಳಸಿಕೊಳ್ಳಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಆದರೆ, ಕೋವಿಡ್- 19 ಸಮಸ್ಯೆ ಇತ್ಯರ್ಥವಾಗುವವರೆಗೆ ಖಾಸಗಿ ಆಸ್ಪತ್ರೆಗಳನ್ನು ಸ್ವತಃ ಸರಕಾರವೇ ನಡೆಸಲು ಸಿಪಿಐಎಂ ಆಗ್ರಹಿಸಿದೆ.

ಕೋವಿಡ್ - 19 ನಿವಾರಣೆಗಾಗಿ ನಿಗದಿಸಿರುವ ಖಾಸಗಿ ಸೇವೆಯ ಶುಲ್ಕಗಳು ಭರಿಸಲಾಗದಷ್ಟು ಹೆಚ್ಚಾಗಿವೆ.ಇದು ವಿಮಾ ವ್ಯಾಪ್ತಿಯಲ್ಲಿಲ್ಲದ ಕುಟುಂಬಗಳಿಗೆ ಮರಣ ಶಾಸನವಾಗಲಿದೆ. ಕೋವಿಡ್ - 19 ಸಮುದಾಯದ ಮಟ್ಟಕ್ಕೆ ವಿಸ್ತರಿಸಲ್ಪಡುತ್ತಿರುವಾಗ, ಇಂತಹ ಕುಟುಂಬಗಳು ತಮ್ಮ ಕುಟುಂಬಗಳ ರಕ್ಷಣೆಗಾಗಿ ಕನಿಷ್ಟ 20 ಲಕ್ಷ ರೂಗಳಿಗೂ ಅಧಿಕ ಮೊತ್ತವನ್ನು ವ್ಯಯಿಸಬೇಕಾಗುತ್ತದೆ.

ಬೆಂಗಳೂರಿನಲ್ಲಿ ಸರ್ಕಾರ ಗುರುತಿಸಿರುವ 66 ಫೀವರ್ ಕ್ಲಿನಿಕ್ ಪಟ್ಟಿಬೆಂಗಳೂರಿನಲ್ಲಿ ಸರ್ಕಾರ ಗುರುತಿಸಿರುವ 66 ಫೀವರ್ ಕ್ಲಿನಿಕ್ ಪಟ್ಟಿ

ಇದು ರಾಜ್ಯದ ಇಂತಹ ಶೇ 95 ಕುಟುಂಬಗಳಿಗೆ ಅತ್ಯಂತ ದುಬಾರಿಯಾದುದಾಗಿದೆ. ಅಂತಹ ಮೊತ್ತವನ್ನು ವ್ಯಯಿಸಲಾಗದೇ ಇಂತಹ ಕುಟುಂಬಗಳು ಬೇರೆ ದಾರಿಯಿಲ್ಲದೇ, ಸಾವುಗಳಿಗೆ ಶರಣಾಗುವ ಸಂಭವಗಳು ಹೆಚ್ಚಾಗಲಿವೆ. ಇದು ಸರಕಾರ ಸಾಮಾಜಿಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಪಲಾಯನವಾಗಿದೆ.

Let Govt maintain Fever Clinics at Private Hospital: CPIM

ಸರಕಾರವೇ, ವಿಮಾ ಸೌಲಭ್ಯ ಹೊಂದಿರುವ ಕೋವಿಡ್ - 19 ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಅಲ್ಲಿನ ಆದಾಯವನ್ನು ವಿಮೆ ಇಲ್ಲದವರ ಉಚಿತ ಚಿಕಿತ್ಸೆಗೂ ಮತ್ತು ಸಾರ್ವಜನಿಕ ಆರೋಗ್ಯವನ್ನು ವಿಸ್ತರಿಸಲು ಸಾರ್ವಜನಿಕ ಬಂಡವಾಳದ ಜೊತೆ ಬಳಸಿಕೊಳ್ಳ ಬೇಕು. ಅದಾಗದೇ, ಖಾಸಗಿ ಆಸ್ಪತ್ರೆಗಳ ಆದಾಯ ಹೆಚ್ಚಿಸುವ ನೀತಿಯನ್ನು ಅನುಸರಿಸುವುದರಿಂದ, ಸಾರ್ವಜನಿಕ ಆರೋಗ್ಯ ರಕ್ಷಣೆಯ ವಿಸ್ತರಣೆ ಬದಲಿಗೆ, ಸಾರ್ವಜನಿಕ ಆದಾಯದ ಲೂಟಿಗೆ ನೆರವಾಗಲಿದೆ. ಇದು ರಾಜ್ಯವನ್ನು ಮತ್ತಷ್ಟು ಆರ್ಥಿಕ ಸಂಕಷ್ಠಕ್ಕೆ ದೂಡಲಿದೆ.

ಆದ್ದರಿಂದ, ಕೋವಿಡ್ 19 ಸಮಸ್ಯೆ ಇತ್ಯರ್ಥವಾಗುವವರೆಗೆ ರಾಜ್ಯ ಸರಕಾರವೇ ಖಾಸಗಿ ಆಸ್ಪತ್ರೆಗಳನ್ನು ವಹಿಸಿಕೊಂಡು, ಎಲ್ಲರಿಗೂ ಉಚಿತ ಆರೋಗ್ಯ ಸೌಲಭ್ಯ ನೀಡುವಂತೆ ಕಾರ್ಯ ನಿರ್ವಹಿಸುವುದೇ ಜನರ ರಕ್ಷಣೆಯ ಸಾಧನವಾಗಲಿದೆ.

ಮೈಸೂರಿನಲ್ಲಿ 10 ಕಡೆ ತೆರೆದಿದೆ ವಿಶೇಷ ಮೈಸೂರಿನಲ್ಲಿ 10 ಕಡೆ ತೆರೆದಿದೆ ವಿಶೇಷ "ಫೀವರ್ ಕ್ಲಿನಿಕ್"

ಕೋವಿಡ್ - 19 ರ ಹಾಗೂ ಲಾಕ್ ಡೌನ್ ಅವಧಿಯ ಕಾರಣದಿಂದ ಈ ಖಾಸಗಿ ಸಂಸ್ಥೆಗಳು ಸಂಕಷ್ಟದಲ್ಲಿವೆ. ಅಲ್ಲಿನ ನೌಕರರು/ ಆರೋಗ್ಯ ಕಾರ್ಯಕರ್ತರು ತೊಂದರೆಯಲ್ಲಿದ್ದಾರೆ. ಅವುಗಳನ್ನು ಪರಿಹರಿಸಬೇಕಾಗಿದೆ. ಆ ನೆಲೆಯಲ್ಲಿ ಅವುಗಳನ್ನು ಸರಕಾರ ವಹಿಸಿಕೊಂಡು ನಡೆಸುವುದು ಎಲ್ಲಾ ರೀತಿಯಲ್ಲೂ ಸರಿಯಾದುದಾಗಿದೆ. ಇನ್ನೂ ಕೂಡಾ, ಅಗತ್ಯವಿದ್ದಲ್ಲಿ ಕಲ್ಯಾಣ ಮಂಟಪಗಳು, ಲಾಡ್ಜ್, ತಾತ್ಕಾಲಿಕ ಸೆಡ್‍ಗಳೊಂದಿಗೆ ಮೈದಾನಗಳನ್ನು ಬಳಸಿಕೊಳ್ಳಬಹುದಾಗಿದೆ ಎಂದು ಸಿಪಿಐಎಂ ಕಾರ್ಯದರ್ಶಿ ಯು. ಬಸವರಾಜ ಹೇಳಿದ್ದಾರೆ.

English summary
Let Karnataka Government maintain Fever Clinics at Private Hospital till the Covid19 pandemic is over demands CPIM, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X