ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈತರಿಂದ 'ನೈಸಾ'ಗಿ ಭೂಮಿ ವಶಪಡಿಸಿಕೊಂಡು ಬಿಡಿಗಾಸು ಪರಿಹಾರ

|
Google Oneindia Kannada News

ಬೆಂಗಳೂರು, ಫೆ. 24: ಬೆಂಗಳೂರಿನ ಎರಡು ಪ್ರಮುಖ ಯೋಜನೆಗಳಲ್ಲಿ ರೈತರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ ಎಂಬ ವಿಚಾರ ಅಧಿಕಾರಿಗಳ ಸಭೆಯಲ್ಲಿಯೇ ವ್ಯಕ್ತವಾಗಿದೆ. ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ನೇತೃತ್ವದಲ್ಲಿ ವಿಕಾಸಸೌಧದಲ್ಲಿ ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿಗಳು ಹಾಗೂ ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಇದು ಬಹಿರಂಗವಾಗಿದೆ.

ಬೆಂಗಳೂರಿನ ಸುತ್ತಮುತ್ತ ಒಂದು ಸೈಟಿಗೆ ಕೋಟ್ಯಂತರ ರೂಪಾಯಿಗಳ ಬೆಲೆಯಿದೆ. ಆದರೆ ರೈತರಿಂದ ನೈಸ್ ಟೌನ್‌ಶಿಪ್‌ಗಾಗಿ ವಶಪಡಿಸಿಕೊಂಡಿರುವ ಪ್ರತಿ ಎಕರೆ ಜಮೀನಿಗೆ ಕೇವಲ 40 ಲಕ್ಷ ರೂ. ಪರಿಹಾರ ಕೊಟ್ಟಿರುವುದು ಬೆಳಕಿಗೆ ಬಂದಿದ್ದು, ಈಗಾಗಲೇ ರೈತರು ಹೋರಾಟ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಇದೀಗ ಸಂಪುಟ ಉಪಸಮಿತಿ ರೈತರಿಗೆ ಸೂಕ್ತ ಪರಿಹಾರ ಕೊಡುವಂತೆ ಚರ್ಚೆ ಆಗುತ್ತಿದೆ ಎಂದು ಯಶವಂತಪುರ ಶಾಸಕ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸಭೆಯಲ್ಲಿ ಹೇಳಿದ್ದಾರೆ.

ನೈಸ್ ಕಂಪನಿಗೆ ಸೇರಿದ ಭೂಮಿ ವಶಕ್ಕೆ ಪಡೆಯಲಿದೆ ಸರ್ಕಾರ? ನೈಸ್ ಕಂಪನಿಗೆ ಸೇರಿದ ಭೂಮಿ ವಶಕ್ಕೆ ಪಡೆಯಲಿದೆ ಸರ್ಕಾರ?

ನೈಸ್ ಟೌನ್‌ಶಿಪ್ ಯೋಜನೆಗಾಗಿ ಯಶವಂತಪುರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗೋಣಿಪುರ, ತಿಪ್ಪೂರು ಹಾಗೂ ಲಿಂಗಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ವಶಪಡಿಸಿಕೊಂಡಿರುವ ರೈತರ ಭೂಮಿಗೆ ಪ್ರತಿ ಎಕರೆಗೆ ಕೇವಲ 40 ಲಕ್ಷ ರೂ. ಪರಿಹಾರ ಕೊಡಲಾಗಿದೆ. ಬೆಂಗಳೂರು ಹಾಗೂ ಸುತ್ತಮುತ್ತ ಭೂಮಿಗೆ ಬಂಗಾರದ ಬೆಲೆ ಇದ್ದರೂ ರೈತರಿಗೆ ಮಾತ್ರ ಅದು ಸಿಗುತ್ತಿಲ್ಲ. ವಿಕಾಸಸೌಧದಲ್ಲಿ ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿಗಳು ಹಾಗೂ ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಇದೇ ವಿಚಾರ ವ್ಯಕ್ತವಾಗಿದೆ.

ನೈಸಾಗಿ ಭೂಮಿ ವಶಪಡಿಸಿಕೊಂಡು ಬಿಡಿಗಾಸು ಪರಿಹಾರ

ನೈಸಾಗಿ ಭೂಮಿ ವಶಪಡಿಸಿಕೊಂಡು ಬಿಡಿಗಾಸು ಪರಿಹಾರ

ನೈಸ್ ಟೌನ್ ಶಿಪ್-1 ರ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ರೈತರ ಪ್ರತಿ ಎಕರೆ ಭೂಮಿಗೆ ಕೇವಲ 40 ಲಕ್ಷ ರೂ. ಪರಿಹಾರ ಕೊಡಲಾಗಿದೆ. ಇದು ತೀರಾ ಕಡಿಮೆ ಪರಿಹಾರವಾಗಿದ್ದು, ಹೆಚ್ಚು ಪರಿಹಾರ ನಿಗದಿಪಡಿಸಲು ಸಂಪುಟ ಉಪ ಸಮಿತಿ ಚರ್ಚಿಸುತ್ತದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿಕಾಸಸೌಧದಲ್ಲಿ ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿಗಳು ಹಾಗೂ ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳ ಸಭೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ, ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್ ಜೊತೆಗೆ ವಿಕಾಸಸೌಧದಲ್ಲಿ ನಡೆದಿದೆ.

ಯೋಜನೆಗೆ ಬೆಂಗಳೂರು ದಕ್ಷಿಣ ತಾಲೂಕಿನ ಈ ಮೂರು ಗ್ರಾಮಗಳಲ್ಲಿ 1,322 ಎಕರೆ ಜಾಗ ಸ್ವಾಧೀನಕ್ಕೆ ನೊಟೀಸ್ ಕೊಡಲಾಗಿದೆ. ಈಗಾಲೇ ರೈತರಿಂದ 142 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು ಕೇವಲ 58.29 ಕೋಟಿ ರೂ. ಪರಿಹಾರ ಮಾತ್ರ ಕೊಡಲಾಗಿದೆ. ಪ್ರತಿ ರೈತರಿಗೆ ಎಕರೆಗೆ ತಲಾ 40 ರಿಂದ 41 ಲಕ್ಷ ರೂ. ಪರಿಹಾರ ನಿಗದಿ ಮಾಡಲಾಗಿದ್ದು, ಇದು ಮಾರುಕಟ್ಟೆ ಬೆಲೆಗಿಂತ ತೀರಾ ಕಡಿಮೆಯಾಗಿದೆ.

'ನೈಸ್' ನಡೆಗೆ ಸಹಕಾರ ಸಚಿವ ಸೋಮಶೇಖರ್ ಆಕ್ಷೇಪ

'ನೈಸ್' ನಡೆಗೆ ಸಹಕಾರ ಸಚಿವ ಸೋಮಶೇಖರ್ ಆಕ್ಷೇಪ

ಭೂಮಿ ಕಳೆದುಕೊಂಡಿರುವ ರೈತರಿಗೆ ಕಡಿಮೆ ಪರಿಹಾರ ಕೊಟ್ಟಿರುವುದಕ್ಕೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಹೊಸ ಕಾಯಿದೆ ಬಂದಾಗ ರೈತರಿಗೆ ನೆರವಾಗಲು ಅಧಿಕಾರಿಗಳೇ ಹೆಚ್ಚು ಪರಿಹಾರ‌ ನಿಗದಿಪಡಿಸಿ ಕ್ರಮ ಕೈಗೊಳ್ಳಬೇಕಿತ್ತು. ಆದರೆ ರೈತರಿಗೆ ಕೇವಲ 40 ಲಕ್ಷ ರೂ. ನೀಡುವುದು ಸರಿಯಲ್ಲ. ಸಂಪುಟ ಉಪ ಸಮಿತಿಯಲ್ಲಿ ಈ‌ ಕುರಿತು ಚರ್ಚೆಯಾಗಿದೆ. ಅಧಿಕಾರಿಗಳ ನಿರ್ಲಕ್ಷದಿಂದಲೇ ಹೀಗಾಗಿದೆ.

ಸಂಪುಟ ಉಪಸಮಿತಿ ಸಭೆಯಲ್ಲಿಯೂ ಹೆಚ್ಚಿನ ಪರಿಹಾರ ನೀಡಬೇಕು ಎಂಬ ಅಭಿಪ್ರಾಯ‌ ಕೇಳಿಬಂದಿದೆ. ಈ ಬಗ್ಗೆ ಇನ್ನಷ್ಟು ಚರ್ಚಿಸಿ‌ ಅಂತಿಮ ನಿರ್ಧಾರಕ್ಕೆ‌ ಬರಲಾಗುವುದು. ಅಧೀಕಾರಿಗಳು ರೈತರಿಗೆ ಹೆಚ್ಚಿನ ಪರಿಹಾರ ಕೊಡಿಸುವತ್ತ ಮಗನಹರಿಸಬೇಕು ಎಂದು ಸಚಿವ ಸೋಮಶೇಖರ್ ಸೂಚಿಸಿದ್ದಾರೆ.

ಮೆಟ್ರೊ ಕೊಡುತ್ತಿರುವ ‌ಪರಿಹಾರವೂ ಕಡಿಮೆ

ಮೆಟ್ರೊ ಕೊಡುತ್ತಿರುವ ‌ಪರಿಹಾರವೂ ಕಡಿಮೆ

ಬೆಂಗಳೂರು ದಕ್ಷಿಣ ತಾಲೂಕು ಯುಎಂ ಕಾವಲ್ ಸರ್ವೆ ಸಂಖ್ಯೆ 11 ರ 5 ಎಕರೆ ಜಾಗವನ್ನು ಮೆಟ್ರೊ 2 ನೇ ಹಂತದ ಯೋಜನೆಗೆ ನೀಡಲಾಗಿದೆ. ಆದರೆ ರೈತರಿಗೆ ಬಹಳ‌ ಕಡಿಮೆ‌ ಪರಿಹಾರ ನೀಡಿರುವುದನ್ನು ಸಚಿವ ಎಸ್.ಟಿ. ಸೋಮಶೇಖರ್ ಅವರು ಅಧಿಕಾರಿಗಳಿಂದ ಮಾಹಿತಿ ಕೇಳಿದ್ದಾರೆ.

ಯುಎಂ ಕಾವಲ್‌ನಲ್ಲಿ‌ ಮೊದಲು ಚದರ ಮೀಟರ್‌ಗೆ 5,000 ರೂ.‌ ನೀಡಲು ಬಿಎಂಆರ್‌ಸಿಎಲ್ ತೀರ್ಮಾನಿಸಿತ್ತು.‌ ರೈತರು ಇದನ್ನು‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಿದ ಬಳಿಕ‌ ವಿಚಾರಣೆ ನಡೆದು ಚದರ ಮೀಟರ್ ಗೆ 10,000 ರೂ. ನೀಡಲು ತೀರ್ಮಾನವಾಯಿತು. ‌ಬಳಿಕ ರೈತರು ಮತ್ತೆ ಪರಿಹಾರ ಪರಿಷ್ಕರಿಸಲು ಮನವಿ ಮಾಡಿದ್ದಾರೆ. ಈ ಕುರಿತು ಇನ್ನೂ ಚರ್ಚೆ ನಡೆಯುತ್ತಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಸ್ಮಶಾನ ಜಾಗ ಇದೆಯೊ ಇಲ್ಲವೊ?

ಸ್ಮಶಾನ ಜಾಗ ಇದೆಯೊ ಇಲ್ಲವೊ?

ಕೆಂಗೇರಿ ಸರ್ವೆ ಸಂಖ್ಯೆ 168 ರಲ್ಲಿ 28 ಎಕರೆ 33 ಗುಂಟೆ ಜಮೀನನ್ನು ಬಿಎಂಐಸಿಪಿ ಗೆ 30 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಇದಕ್ಕೆ ಸಂಬಂಧಿಸಿದಂತೆ 1992-93 ರಲ್ಲಿ ಆದೇಶ ಹೊರಡಿಸಿದ್ದರು. ಒಟ್ಟು ಜಮೀನಿನ‌ ಪೈಕಿ 2 ಎಕರೆ 33 ಗುಂಟೆ ಜಾಗವನ್ನು ಸ್ಮಶಾನಕ್ಕೆ ಕಾಯ್ದಿರಿಸುವಂತೆ 1999 ರಲ್ಲಿ ಶಿಫಾರಸು ಮಾಡಲಾಗಿತ್ತು.

ಈ‌ ಜಾಗವನ್ನು ನೈಸ್ ಸಂಸ್ಥೆಯು ರಸ್ತೆ ನಿರ್ಮಾಣಕ್ಕೆ‌ ಬಳಸಿಕೊಂಡಿಲ್ಲ ಎಂಬುದು ಪತ್ತೆಯಾಗಿದೆ.


2 ಎಕರೆ ಜಾಗ ಸ್ಮಶಾನವಾಗಿ ಬಳಕೆಯಾಗುತ್ತಿದೆ. ಆದರೆ ಸರಕಾರಿ ದಾಖಲೆಗಳಲ್ಲಿ ಇದು ಸ್ಮಶಾನ ಎಂದು‌ ಉಲ್ಲೇಖವಾಗಿಲ್ಲ ಎಂಬುದು ಕುತೂಹಲ ಮೂಡಿಸಿದೆ. ಈ ಬಗ್ಗೆಯೂ ಸಭೆಯಲ್ಲಿ ಚರ್ಚೆ ಆಗಿದೆ.

ಹೊಸಪಾಳ್ಯ ಗ್ರಾಮದಲ್ಲಿ 33 ಕುಟುಂಬಗಳಿಗೆ ಹಕ್ಕುಪತ್ರ ಕೊಟ್ಟಿಲ್ಲ

ಹೊಸಪಾಳ್ಯ ಗ್ರಾಮದಲ್ಲಿ 33 ಕುಟುಂಬಗಳಿಗೆ ಹಕ್ಕುಪತ್ರ ಕೊಟ್ಟಿಲ್ಲ

ಬಿಎಂ ಕಾವಲ್ ನ‌ ಸರ್ವೆ ಸಂಖ್ಯೆ 26, ಹೊಸಪಾಳ್ಯ ಕಾಲೊನಿ ಗ್ರಾಮದಲ್ಲಿ 1 ಎಕರೆ 33 ಗುಂಟೆ ಜಮೀನನ್ನು ಬಿಎಂಐಸಿಪಿ ಗೆ 30 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಾಗಿದೆ. ಈ‌ ಜಾಗದಲ್ಲಿ 35 ಕುಟುಂಬಗಳು ನೆಲೆಸಿವೆ. ಈ ಪೈಕಿ, 2 ಕುಟುಂಬಗಳಿಗೆ 2011 ರಲ್ಲಿ ಹಕ್ಕುಪತ್ರ ವಿತರಿಸಲಾಗಿದೆ. ಜತೆಗೆ ನೋಂದಣಿ ಮಾಡಲಾಗಿದೆ. ಇನ್ನುಳಿದ 33 ಕುಟುಂಬಗಳಿಗೆ ಹಕ್ಕುಪತ್ರ ನೀಡುವುದು ಬಾಕಿ ಇದೆ. ಇದಕ್ಕೆ‌ ಸಂಬಂಧಿಸಿದಂತೆ ಕಂದಾಯ ಇಲಾಖೆಗೆ 94 ಸಿಸಿ ಅಡಿಯಲ್ಲಿ‌ ಅರ್ಜಿಗಳನ್ನು ಸಲ್ಲಿಸಲಾಗಿದೆ.

ಜತೆಗೆ ಬಿಎಂ ಕಾವಲ್ ಸರ್ವೆ ಸಂಖ್ಯೆ 4 ರಲ್ಲಿ ಬಿಎಂಐಸಿಪಿ ಗೆ 34 ಎಕರೆ 3 ಗುಂಟೆ ಜಮೀನು ನೀಡಲಾಗಿದೆ. ಈ ಪೈಕಿ, 9 ಎಕರೆ ಜಾಗದಲ್ಲಿ ಹಲವು ವರ್ಷಗಳಿಂದ 920 ರಿಂದ 1000 ಜನರು ವಾಸವಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಗೆ 94 ಸಿಸಿ ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿದೆ‌. ಈ ಎರಡೂ ವಿಚಾರಗಳ ಕುರಿತು ಪರಿಶೀಲಿಸಬೇಕು ಎಂದು‌ ಸೂಮಶೇಖರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

English summary
Official meeting held in Vikasasoudha reveals that very little compensation given for land acquired by farmers for Nice Township project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X