ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪರಿಚಿತ ವಾಹನ ಡಿಕ್ಕಿ: ನೈಸ್ ರಸ್ತೆಯಲ್ಲಿ ಚಿರತೆ ಸಾವು

|
Google Oneindia Kannada News

ಬೆಂಗಳೂರು, ಫೆ. 18: ಮೂರು ವರ್ಷ ಪ್ರಾಯದ ಗಂಡು ಚಿರತೆಯೊಂದು ನಗರದ ಹೊರವಲಯದ ಕನಕಪುರ ನೈಸ್ ರಸ್ತೆಯಲ್ಲಿ ಅಪರಿಚಿತ ವಾಹನಕ್ಕೆ ಡಿಕ್ಕಿಯಾಗಿ ಮೃತಪಟ್ಟಿದೆ.

ಮಂಗಳವಾರ ರಸ್ತೆಯಲ್ಲಿ ಬಿದ್ದಿ ಚಿರತೆ ಶವ ಕಂಡ ಕೆಲ ಪ್ರಯಾಣಿಕರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಮಾರಣಾಂತಿಕ ಗಾಯಗಳಾಗಿದ್ದರಿಂದ ಚಿರತೆ ಸಾವನ್ನಪ್ಪಿದೆ ಎಂದು ಅರಣ್ಯ ಅಧಿಕಾರಿ ಐ.ಎಂ.ನಾಗರಾಜ್ ಮಾಹಿತಿ ನೀಡಿದ್ದಾರೆ.[ಮಂಗಳೂರು : ಚಿರತೆ ಭೀತಿಯಲ್ಲೇ ಗ್ರಾಮಸ್ಥರ ಬದುಕು]

nice

ಚಿರತೆ ರಸ್ತೆ ದಾಟಲು ಪ್ರಯತ್ನ ಮಾಡುತ್ತಿತ್ತು. ಈ ವೇಳೆ ಆಗಮಿಸಿದ ನಾಲ್ಕು ಚಕ್ರ ವಾಹನವೊಂದು ಡಿಕ್ಕಿಯಾಗಿದೆ. ಪರಿಣಾಮ ಗಂಭೀರ ಗಾಯಗೊಂಡ ಚಿರತೆ ಸಾವನ್ನಪ್ಪಿದೆ ಎಂದು ಅವರು ತಿಳಿಸಿದ್ದಾರೆ.

ನಾವು ಇದನ್ನು ಸಂಬಂಧಿಸಿದವರ ಗಮನಕ್ಕೆ ತಂದಿದು ಪ್ರಾಣಿಗಳು ಸಂಚರಿಸುವ ವ್ಯಾಪ್ತಿಯಲ್ಲಿ ಬೋರ್ಡ್ ಅಳವಡಿಸುವಂತೆ ತಿಳಿಸಿದ್ದೇವೆ. ಕಳೆದ ಅಕ್ಟೋಬರ್ ನಲ್ಲಿ ಅಪರಿಚಿತ ವಾಹವೊಂದು ಡಿಕ್ಕಿಯಾಗಿ ಬನ್ನೇರುಘಟ್ಟ ಅಭಯಾರಣ್ಯ ಸಮೀಪ ಹೆಣ್ಣು ಚಿರತೆಯೊಂದು ಮೃತಪಟ್ಟಿತ್ತು.[ಬೆಂಗಳೂರು-ಮೈಸೂರು ಆರು ಪಥದ ರಸ್ತೆ ವಿಳಂಬ?]

ರಸ್ತೆ ಅಪಘಾತದ ಪರಿಣಾಮ ರಾಜ್ಯದಲ್ಲಿ ಪ್ರತಿವರ್ಷ 25 ಕ್ಕೂ ಅಧಿಕ ಚಿರತೆಗಳು ಜೀವ ಕಳೆದುಕೊಳ್ಳುತ್ತವೆ. ಕೆಲವೊಮ್ಮೆ ಅಭಯಾರಣ್ಯದಿಂದ ತಪ್ಪಿಸಿಕೊಂಡು ಹೋಗುವ ಪ್ರಾಣಿಗಳು ಜೀವ ಹಾನಿ ಮಾಡಿಕೊಳ್ಳುತ್ತವೆ ಎಂದು ನಾಗರಾಜ್ ಹೇಳಿದ್ದಾರೆ.

English summary
A three-year-old male leopard was killed in a road accident after being run over by an unidentified vehicle on NICE Road on Kanakpura road. Few passers-by who found the leopard lying dead on the road informed the forest department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X