ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ರಿಜೇಶ್ ಕಾಳಪ್ಪ ವಿರುದ್ಧ ಕಾನೂನು ಕ್ರಮ: ತೇಜಸ್ವಿ ಸೂರ್ಯ ಗೆಳತಿ ಸೋಮದತ್ತ

|
Google Oneindia Kannada News

Recommended Video

Lok Sabha Elections 2019: ಬ್ರಿಜೇಶ್ ಕಾಳಪ್ಪ ವಿರುದ್ಧ ಗುಡುಗಿದ ತೇಜಸ್ವಿ ಗೆಳತಿ

ಬೆಂಗಳೂರು, ಏಪ್ರಿಲ್ 14: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ 'ಮೀ ಟೂ' ಆರೋಪ ಮಾಡಿದ ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ವಿರುದ್ಧ ತೇಜಸ್ವಿ ಗೆಳತಿ ಸೋಮದತ್ತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾನುವಾರದಂದು ಬ್ರಿಜೇಶ್ ಕಾಳಪ್ಪ ಪತ್ರಿಕಾಗೋಷ್ಠಿಯಲ್ಲಿ ತೇಜಸ್ವಿ ಸೂರ್ಯ ಗೆಳತಿ ಸೋಮದತ್ತರ ಆಡಿಯೋ ಬಿಡುಗಡೆ ಮಾಡಿದ್ದರು.

ತೇಜಸ್ವಿ ಸೂರ್ಯ ಅವರು ಮೂವರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸೋಮದತ್ತ ಅವರೇ ಮಾಡಿದ್ದ ಆರೋಪ ಅದಾಗಿತ್ತು. ಇದೀಗ ಬ್ರಿಜೇಶ್ ಕಾಳಪ್ಪ ಅವರ ಪತ್ರಿಕಾ ಗೋಷ್ಠಿ ಬಗ್ಗೆ ಟ್ವೀಟ್ ಮಾಡಿರುವ ಸೋಮದತ್ತ, ತಮ್ಮ ರಾಜಕೀಯ ಲಾಭಕ್ಕಾಗಿ ಮಹಿಳೆಯ ಗೌರವಕ್ಕೆ ಚ್ಯುತಿ ತಂದ ಬ್ರಿಜೇಶ್ ಕಾಳಪ್ಪ ಅವರಿಗೆ ನಾಚಿಕೆ ಆಗಬೇಕು.

ನನ್ನ ಗೌರವ ಹಾಗೂ ಘನತೆಗೆ ಕುಂದಾಗುವಂತೆ ಮಾಡಿದ್ದಾರೆ. ನಾನು ಶೀಘ್ರದಲ್ಲೇ ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ ಎಂದು ಹೇಳಿದ್ದಾರೆ. ತೇಜಸ್ವಿ ಸೂರ್ಯ ಅವರ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ದೂರು ದಾಖಲಾಗಿದೆ ಎಂದು ಬ್ರಿಜೇಶ್ ಕಾಳಪ್ಪ ಆರೋಪ ಮಾಡಿದ್ದಾರೆ.

Brijesh Kalappa

ಆದರೆ, ಒನ್ ಇಂಡಿಯಾ ಕನ್ನಡದಿಂದ ಠಾಣೆಗೆ ಕರೆ ಮಾಡಿ, ವಿಚಾರಿಸಿದಾಗ, ಇಂಥ ಯಾವ ದೂರು ಕೂಡ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ ಎಂದು ಮಾಹಿತಿ ದೊರೆತಿದೆ.

English summary
Shame on Brijesh Kalappa for violating dignity of a woman for political gains. I will soon initiate legal proceedings against him for outraging my modesty and violating my dignity, tweeted by Dr Soma Dutta, friend of Bangalore south BJP candidte Tejaswi Surya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X