ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾ.8ಕ್ಕೆ ಗಿರೀಶ್ ಕಾಸರವಳ್ಳಿ ಅವರಿಂದ "ಕಾಲ; ಕಾಲಕ್ಷೇಪ" ಉಪನ್ಯಾಸ

|
Google Oneindia Kannada News

ಬೆಂಗಳೂರು, ಮಾರ್ಚ್ : "ದೇವಗೀತಂ ಚಾರಿಟಬಲ್ ಟ್ರಸ್ಟ್" ಮತ್ತು "ಅಭಿಜ್ಞಾನ" ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಪ್ರಖ್ಯಾತ ಹಿಂದಿ ಪತ್ರಕರ್ತ ನಾರಾಯಣ ದತ್ತ ಸ್ಮಾರಕ ಉಪನ್ಯಾಸ-5ರ ಕಾರ್ಯಕ್ರಮದಲ್ಲಿ "ಕಾಲ: ಕಾಲಕ್ಷೇಪ" ವಿಷಯದ ಕುರಿತು ಉಪನ್ಯಾಸ ನಡೆಯಲಿದೆ.

ವಿಜ್ಞಾನ ಪ್ರಿಯರಿಗೆ ಸಿಹಿ ಸುದ್ದಿ ನೀಡಿದ ನೆಹರು ತಾರಾಲಯವಿಜ್ಞಾನ ಪ್ರಿಯರಿಗೆ ಸಿಹಿ ಸುದ್ದಿ ನೀಡಿದ ನೆಹರು ತಾರಾಲಯ

ಕಾಲ ಮತ್ತು ದೇಶ- ಇವೆರಡೂ ಕಲೆಯ ಎರಡು ಕೊರಳುಗಳು. ಇವೆರಡರ ಸಫಲ ಸಾಂಗತ್ಯದಲ್ಲಿಯೇ ಸಿನಿಮಾ ಕೂಡ ಕಲೆಯಾಗಿ ಅರಳುವಂಥದ್ದು. ಆದರೆ ಸಿನಿಮಾದಲ್ಲಿ ಕಾಲದ ನಿರ್ವಹಣೆ ಸವಾಲಿನ ಹೊಣೆಗಾರಿಕೆ ಕೂಡ. ಸಿನಿಮಾಗೂ ಕಾಲತತ್ವಕ್ಕೂ ಇರುವ ಹಲವು ಆಯಾಮಗಳ ಅವಲೋಕನ ಈ "ಕಾಲ:ಕಾಲಕ್ಷೇಪ" ಉಪನ್ಯಾಸವಾಗಿದೆ.

Lecture By Director Girish Kasaravalli In Mithik Society On March 8

ಚಲನಚಿತ್ರ ನಿರ್ದೇಶಕ ಗಿರೀಶ ಕಾಸರವಳ್ಳಿ ಉಪನ್ಯಾಸ ನೀಡಲಿದ್ದಾರೆ. ಅಭಯ ಸಿಂಹ, ಮನು ಚಕ್ರವರ್ತಿ, ಎನ್. ವಿದ್ಯಾಶಂಕರ್, ಪಿ.ಶೇಷಾದ್ರಿ ಅವರು ಭಾಗವಹಿಸಲಿದ್ದರೆ.

ಇದೇ ಮಾರ್ಚ್ 8, ಭಾನುವಾರ ಬೆಳಿಗ್ಗೆ 10.30ರಿಂದ ಉಪನ್ಯಾಸ ಕಾರ್ಯಕ್ರಮ ಆರಂಭಗೊಳ್ಳಲಿದೆ.
ಸ್ಥಳ: ದಿ ಮಿಥಿಕ್ ಸೊಸೈಟಿ, 14/3, ನೃಪತುಂಗ ರಸ್ತೆ, ಬೆಂಗಳೂರು-01.

English summary
A "kala; kalakhepa" lecture programme is being held at the Mithik Society, Bengaluru under "Devagitham Charitable Trust" and "Abhijyam" on march 8
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X