ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡ್ರಗ್ಸ್ ಕೇಸ್ ತನಿಖೆ; ಸಿಸಿಬಿ ಸಿಬ್ಬಂದಿಯಿಂದ ಆರೋಪಿಗೆ ಮಾಹಿತಿ ಲೀಕ್!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 24: ಬೆಂಗಳೂರು ಸಿಸಿಬಿ ಘಟಕದ ಅಧಿಕಾರಿಗಳು ಕೈಗೊಂಡ ಡ್ರಗ್ಸ್ ಪ್ರಕರಣದ ತನಿಖಾ ಮಾಹಿತಿಗಳು ಆರೋಪಿಗಳಿಗೆ ಸೋರಿಕೆಯಾಗುತ್ತಿತ್ತು. ಸಿಸಿಬಿ ನಡೆಸಿದ ಆಂತರಿಕ ತನಿಖೆಯನ್ನು ಇದು ಸಾಬೀತಾಗಿದೆ. ಎಸಿಪಿ ಮತ್ತು ಒಬ್ಬ ಹೆಡ್ ಕಾನ್ಸ್‌ಟೇಬಲ್‌ರನ್ನು ಇದಕ್ಕೆ ಸಂಬಂಧಿಸಿದಂತೆ ಅಮಾನತು ಮಾಡಲಾಗಿದೆ.

ಸಿಸಿಬಿ ಪೊಲೀಸರ ಆಂತರಿಕ ತನಿಖೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತ ಎಂ. ಆರ್. ಮುಧವಿ ಮತ್ತು ಹೆಡ್ ಕಾನ್ಸ್‌ಟೇಬಲ್ ಮಲ್ಲಿಕಾರ್ಜುನ್ ಮಾಹಿತಿ ಸೋರಿಕೆ ಮಾಡಿರುವುದು ಖಚಿತವಾಗಿದೆ. ಆದ್ದರಿಂದ, ಇಬ್ಬರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ವೀರೇನ್ ಖನ್ನಾ ಮನೆಯಲ್ಲಿ ಪೊಲೀಸ್ ಸಮವಸ್ತ್ರ ಪತ್ತೆ! ವೀರೇನ್ ಖನ್ನಾ ಮನೆಯಲ್ಲಿ ಪೊಲೀಸ್ ಸಮವಸ್ತ್ರ ಪತ್ತೆ!

ಮಾಹಿತಿ ಸೋರಿಕೆಯಾಗಿದ್ದರಿಂದ ತನಿಖೆಗೆ ಹಿನ್ನಡೆಯಾಗಿದೆ. ಸಂಸ್ಥೆಯ ವಿಶ್ವಾಸಾರ್ಹತೆಗೂ ಧಕ್ಕೆಯಾಗಿದೆ. ಆದ್ದರಿಂದ, ಅಮಾನತುಗೊಳಿಸಲಾಗಿದೆ. ಎಸಿಪಿ ಎಂ. ಆರ್. ಮುದವಿ ವಿರುದ್ಧ ಇಲಾಖಾ ಶಿಸ್ತು ಕ್ರಮಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ವರದಿ ಸಲ್ಲಿಸಲಾಗಿದೆ.

ಸಿಸಿಬಿ ಪೊಲೀಸರಿಂದ ನಟ ದಿಗಂತ್ ವಿಚಾರಣೆ ಅಂತ್ಯ; ಇನ್ನೊಮ್ಮೆ ವಿಚಾರಣೆಸಿಸಿಬಿ ಪೊಲೀಸರಿಂದ ನಟ ದಿಗಂತ್ ವಿಚಾರಣೆ ಅಂತ್ಯ; ಇನ್ನೊಮ್ಮೆ ವಿಚಾರಣೆ

ಜಂಟಿ ಪೊಲೀಸ್ ಆಯುಕ್ತರು (ಅಪರಾಧ) ಅವರ ವರದಿಯನ್ನು ಪೊಲೀಸ್ ಆಯುಕ್ತರು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದರು. ಸರ್ಕಾರ ಸೆಪ್ಟೆಂಬರ್ 23ರಂದು ಇಬ್ಬರನ್ನು ಅಮಾನತು ಮಾಡಿದೆ.

ಜೆಲ್ಲಿ ರೂಪದಲ್ಲಿ ಬೆಂಗಳೂರಲ್ಲಿ ಡ್ರಗ್ಸ್ ಮಾರಾಟ; ಇಬ್ಬರ ಬಂಧನ ಜೆಲ್ಲಿ ರೂಪದಲ್ಲಿ ಬೆಂಗಳೂರಲ್ಲಿ ಡ್ರಗ್ಸ್ ಮಾರಾಟ; ಇಬ್ಬರ ಬಂಧನ

ಆರೋಪಿಗಳ ಜೊತೆ ಡೀಲ್

ಆರೋಪಿಗಳ ಜೊತೆ ಡೀಲ್

ಡ್ರಗ್ಸ್ ಪ್ರಕರಣದ ತನಿಖಾ ಮಾಹಿತಿಗಳು ಆರೋಪಿಗಳಿಗೆ ಸೋರಿಕೆ ಮಾಡಲು ಇಬ್ಬರು ಸಿಬ್ಬಂದಿ ಡೀಲ್ ಮಾಡಿಕೊಂಡಿದ್ದರು ಎಂಬ ಮಾಹಿತಿ ಸಿಕ್ಕಿದೆ. ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಈ ಕುರಿತು ಹೇಳಿಕೆ ನೀಡಿದ್ದು, " ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ನಮ್ಮ ತನಿಖೆ ಕಾಲದಲ್ಲಿ ತನಿಖಾ ಮಾಹಿತಿಯನ್ನು ಆರೋಪಿಗಳ ಕಡೆಯವರಿಗೆ ಶೇರ್ ಮಾಡುತ್ತಿದ್ದರು. ಯಾರು ಎಂಬುದರ ಬಗ್ಗೆ ಆಂತರಿಕ ತನಿಖೆ ಮಾಡಿದ್ದೇವೆ. ಎಸಿಪಿಯೊಬ್ಬರು ಮಾಹಿತಿ ಲೀಕ್ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ‌ ಸಿಕ್ಕಿತ್ತು" ಎಂದು ಹೇಳಿದ್ದಾರೆ. ಸೋರಿಕೆ ಮಾಡಿದ್ದಾರೆ.

ವಿರೇನ್‌ ಖನ್ನಾಗೆ ಮಾಹಿತಿ

ವಿರೇನ್‌ ಖನ್ನಾಗೆ ಮಾಹಿತಿ

ಸಹಾಯಕ ಪೊಲೀಸ್ ಆಯುಕ್ತ ಎಂ. ಆರ್. ಮುಧವಿ ಮತ್ತು ಹೆಡ್ ಕಾನ್ಸ್‌ಟೇಬಲ್ ಮಲ್ಲಿಕಾರ್ಜುನ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ವಿರೇನ್ ಖನ್ನಾ ಕಡೆಯವರಿಗೆ ಮಾಹಿತಿ ಸೋರಿಕೆ ಮಾಡಿದ್ದಾರೆ. ಮೂಲತಃ ಟೆಕ್ಕಿಯಾಗಿರುವ ವಿರೇನ್ ಖನ್ನಾ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದ, ದೆಹಲಿಯಲ್ಲಿ ಆತನನ್ನು ಬಂಧಿಸಿ ಬೆಂಗಳೂರಿಗೆ ಕರೆತರಲಾಗಿತ್ತು.

ಕಸ್ಟಡಿಯಲ್ಲಿದ್ದಾಗ ಮೊಬೈಲ್ ಬಳಕೆ

ಕಸ್ಟಡಿಯಲ್ಲಿದ್ದಾಗ ಮೊಬೈಲ್ ಬಳಕೆ

ಸಹಾಯಕ ಪೊಲೀಸ್ ಆಯುಕ್ತ ಎಂ. ಆರ್. ಮುಧವಿ ಸಿಸಿಬಿ ಮಹಿಳಾ ಸುರಕ್ಷತೆ ವಿಭಾಗದ ಮುಖ್ಯಸ್ಥರು. ಆರೋಪಿ ವಿರೇನ್ ಖನ್ನಾ ಕಡೆಯವರಿಗೆ ತನಿಖೆ ಮಾಹಿತಿ ಸೋರಿಕೆ ಮಾಡಿರುವುದು ಸೇರಿದಂತೆ ಸಿಸಿಬಿ ಕಸ್ಟಡಿಯಲ್ಲಿ ಖನ್ನಾ ಇದ್ದಾಗ ಮೊಬೈಲ್ ಬಳಕೆ ಮಾಡಲು ಅವಕಾಶ ನೀಡಿದ್ದಾರೆ ಎಂಬ ಆರೋಪವೂ ಇದೆ.

ಹೆಡ್ ಕಾನ್ಸ್‌ಟೇಬಲ್‌ರಿಂದ ಮಾಹಿತಿ

ಹೆಡ್ ಕಾನ್ಸ್‌ಟೇಬಲ್‌ರಿಂದ ಮಾಹಿತಿ

ಹೆಡ್ ಕಾನ್ಸ್‌ಟೇಬಲ್ ಮಲ್ಲಿಕಾರ್ಜುನ್ ಸಿಸಿಬಿ ವಿಶೇಷ ತನಿಖಾ ತಂಡದಲ್ಲಿದ್ದರು. ಅವರು ಮಾಹಿತಿಗಳನ್ನು ಎಸಿಪಿ ಎಂ. ಆರ್. ಮುಧವಿಗೆ ನೀಡುತ್ತಿದ್ದರು. ಅವರ ಮೂಲಕ ಮಾಹಿತಿಗಳು ಆರೋಪಿಗಳ ಕಡೆಯವರಿಗೆ ಸೋರಿಕೆ ಆಗುತ್ತಿತ್ತು.

English summary
Central Crime Branch (CCB) has been suspended assistant commissioner of police and head constable for leaking information to the associates of people arrested in the drugs case. Department probe ordered against ACP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X