• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೊಸಕೋಟೆ: ಎಂಟಿಬಿ ನಾಗರಾಜ್ ಇಟ್ಟ ಹೆಜ್ಜೆಗೆ ಶರತ್ ಬಚ್ಚೇಗೌಡ ಬೇಸ್ತು

|

"ರಾಜಕೀಯದಲ್ಲಿ ಯಾರೂ ಸತ್ಯ ಹರಿಶ್ಚಂದ್ರ, ಧರ್ಮರಾಯನೂ ಇಲ್ಲ"ಎನ್ನುವ ಮಾತನ್ನು ಬಿಜೆಪಿಯ, ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ ನಾಗರಾಜ್ ಹೇಳಿದ್ದರು. ಈ ಮಾತನ್ನು ಪುಷ್ಟೀಕರಿಸುವಂತೆ, ಹೊಸಕೋಟೆ ವಿಧಾನಸಭಾ ವ್ಯಾಪ್ತಿಯಲ್ಲಿ ರಾಜಕೀಯ ಬೆಳವಣಿಗೆಗಳು ನಡೆದಿದೆ.

ಅಸೆಂಬ್ಲಿ ಚುನಾವಣೆಯನ್ನೂ ನಾಚಿಸುವಂತೆ ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ವಂಚಿತ ಶರತ್ ಬಚ್ಚೇಗೌಡ, ಎಂಟಿಬಿ ವಿರುದ್ದ ಭರ್ಜರಿ ಹತ್ತು ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವನ್ನು ಸಾಧಿಸಿದ್ದರು.

ಕರ್ನಾಟಕದ ಜಾನುವಾರುಗಳಿಗೆ ತಗುಲಿದ ಹೊಸ ವೈರಸ್: ರೈತರು ಕಂಗಾಲು

ರಾಜಕೀಯವಾಗಿ ತೀವ್ರ ಹಿನ್ನಡೆಯನ್ನು ಅನುಭವಿಸಿದ್ದ ಎಂಟಿಬಿ, ಛಲ ಬಿಡದ ತಿವಿಕ್ರಮನಂತೆ, ಕೊನೆಗೂ, ವಿಧಾನ ಪರಿಷತ್ ಸದಸ್ಯರಾಗುವಲ್ಲಿ ಯಶಸ್ವಿಯಾಗಿದ್ದರು. ಈಗ, ಗೂಟದ ಕಾರಿನ ನಿರೀಕ್ಷೆಯಲ್ಲಿ ಎಂಟಿಬಿ ಇದ್ದಾರೆ.

ಈಗ, ಗ್ರಾಮ ಪಂಚಾಯತಿ ಚುನಾವಣೆ ಎದುರಾಗಬಹುದಾದ ಈ ಸಂದರ್ಭದಲ್ಲಿ, ತಮ್ಮ ಶಕ್ತಿ ಪ್ರದರ್ಶನವನ್ನು ಮಾಡಿರುವ ಎಂಟಿಬಿ, ಬಿಜೆಪಿಯಿಂದ ಗುಳೇ ಹೋಗಿದ್ದ ಕಾರ್ಯಕರ್ತರು, ಮುಖಂಡರನ್ನು, ಮತ್ತೆ ತೆಕ್ಕೆಗೆ ಸೇರಿಸಿಕೊಳ್ಳುವಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.

ರಾಜಕೀಯದಲ್ಲಿ ಯಾರೂ ಧರ್ಮರಾಯನೂ ಅಲ್ಲ, ಸತ್ಯ ಹರಿಶ್ಚಂದ್ರನೂ ಅಲ್ಲ

ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ

ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ

ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಹೆತ್ತಕ್ಕಿ ಗ್ರಾಮದಲ್ಲಿ, ಪಕ್ಷೇತರ ಶಾಸಕ ಶರತ್‌ ಬಚ್ಚೇಗೌಡ ಬೆಂಬಲಿಗರು ಸ್ವಾಭಿಮಾನಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇದನ್ನು, ಸ್ಥಳೀಯವಾಗಿ, ಶರತ್ ಗೆ ಆದ ಹಿನ್ನಡೆಯೆಂದೇ ವ್ಯಾಖ್ಯಾನಿಸಲಾಗುತ್ತಿದೆ.

ಎಂ.ಟಿ.ಬಿ ನಾಗರಾಜ್

ಎಂ.ಟಿ.ಬಿ ನಾಗರಾಜ್

ಸ್ವಕ್ಷೇತ್ರದಲ್ಲಿ ಮತ್ತೆ ಮತದಾರರ ಮತ್ತು ಸ್ಥಳೀಯ ಮುಖಂಡರ ಮನವೊಲಿಸುವ ಕೆಲಸಕ್ಕೆ ಎಂ.ಟಿ.ಬಿ ನಾಗರಾಜ್ ಮುಂದಾಗಿರುವುದರಿಂದಲೇ, ನಂದಗುಡಿ ಹೋಬಳಿಯ ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಿರುವ ಸುದ್ದಿ ಮಹತ್ವವನ್ನು ಪಡೆದುಕೊಂಡಿರುವುದು ಎಂದು ಹೇಳಲಾಗುತ್ತಿದೆ.

ಬಿಜೆಪಿ ವಿರುದ್ದ ಸ್ಪಷ್ಟ ಆಕ್ರೋಶ

ಬಿಜೆಪಿ ವಿರುದ್ದ ಸ್ಪಷ್ಟ ಆಕ್ರೋಶ

ಬಿಜೆಪಿ ವಿರುದ್ದ ಸ್ಪಷ್ಟ ಆಕ್ರೋಶವನ್ನು ಹೊರಹಾಕಲು ಶರತ್ ಬಚ್ಚೇಗೌಡರಿಗೆ ಸಾಧ್ಯವಾಗದೇ ಇರುವುದನ್ನು, ಎಂಟಿಬಿ ತನ್ನ ಮತ್ತು ಕುಟುಂಬದ ರಾಜಕೀಯ ನೆಲೆಯನ್ನು ಭದ್ರ ಪಡಿಸಿಕೊಳ್ಳಲು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ಈ ಭಾಗದಲ್ಲಿ ಕೇಳಿ ಬರುತ್ತಿರುವ ಮಾತು.

ಶರತ್ ಬಚ್ಚೇಗೌಡ ವಿರುದ್ದ ಎಂಟಿಬಿ ನಾಗರಾಜ್ ಶಕ್ತಿ ಪ್ರದರ್ಶನ

ಶರತ್ ಬಚ್ಚೇಗೌಡ ವಿರುದ್ದ ಎಂಟಿಬಿ ನಾಗರಾಜ್ ಶಕ್ತಿ ಪ್ರದರ್ಶನ

ಶರತ್ ಬಚ್ಚೇಗೌಡರ ಹಿಂಬಾಲಕರು ಬಹುತೇಕ ಬಿಜೆಪಿಯವರು ಎನ್ನುವುದು ಹೊಸಕೋಟೆ ಮತದಾರರಿಗೆ ಗೊತ್ತಿರುವ ವಿಚಾರ. ಆದರೆ, ಬಿ.ಎನ್.ಬಚ್ಚೇಗೌಡ್ರು ಬಿಜೆಪಿ ಸಂಸದರಾಗಿರುವುದರಿಂದ, ರಾಜ್ಯ ಮತ್ತು ಕೇಂದ್ರ ಸರಕಾರದ ವೈಫಲ್ಯವನ್ನು ಸಾರ್ವಜನಿಕವಾಗಿ ತರಲು ಶರತ್ ಗೆ ಹಿನ್ನಡೆಯಾಗುತ್ತಿದೆ. ಹಾಗಾಗಿ, ಶರತ್ ಬೆಂಬಲಿಗರನ್ನು, ಎಂ.ಟಿ.ಬಿ ನಾಗರಾಜ್ ಮುಂದಿನ ದಿನಗಳಲ್ಲಿ ತಮ್ಮತ್ತ ಸೆಳೆದರೆ ಆಶ್ಚರ್ಯ ಪಡಬೇಕಾಗಿಲ್ಲ.

English summary
Leaders Of Sharath Bache Gowda Group Joining BJP In Hoskote Infront Of MTB Nagaraj,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X