ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಕ್ರಾಂತಿ ಬಳಿಕ ಹೆಚ್ಚಾದ ಚಳಿ, ಒಂದು ವಾರ ಹೀಗೇನೇ!

|
Google Oneindia Kannada News

ಬೆಂಗಳೂರು, ಜನವರಿ 22: ಸಂಕ್ರಾಂತಿ ಬಳಿಕ ಚಳಿ ಕಡಿಮೆಯಾಗುವ ನಿರೀಕ್ಷೆಯಿತ್ತು, ಬೆಂಗಳೂರು ಜನವರಿಯಲ್ಲಿ ಕಳೆದ ಆರು ವರ್ಷಗಳಲ್ಲಿ ಕಂಡಿರದ ಚಳಿಯನ್ನು ಈ ವರ್ಷ ಕಂಡಿತ್ತು.

ಸಂಕ್ರಾಂತಿ ಮುಗಿದ ಬಳಿಕ ಚಳಿ ಕಡಿಮೆಯಾಗಬಹುದು ಎಂದು ಹವಾಮಾನ ಇಲಾಖೆ ಸೂಚನೆ ನೀಡಿತ್ತು ಆದರೆ ಸಂಕ್ರಾಂತಿ ಬಳಿಕ ಚಳಿ ಇನ್ನೂ ವಿಪರೀತವಾಗಿದೆ.

ಬೆಂಗಳೂರಲ್ಲಿ 11.8 ಕನಿಷ್ಠ ಡಿಗ್ರಿ ತಾಪಮಾನ ದಾಖಲಾಗಿದೆ. ಬೆಂಗಳೂರು ಕೇಂದ್ರ ಭಾಗದಲ್ಲಿ ಗರಿಷ್ಠ 29.2 ಡಿಗ್ರಿ ಸೆಲ್ಸಿಯಸ್, ಕನಿಷ್ಠ 14.8 ಡಿಗ್ರಿ ಸೆಲ್ಸಿಯಸ್, ಕೆಐಎನಲ್ಲಿ ಗರಿಷ್ಠ 29.5 ಡಿಗ್ರಿ ಸೆಲ್ಸಿಯಸ್, ಕನಿಷ್ಠ 11.8 ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್‌ನಲ್ಲಿ ಗರಿಷ್ಠ 28.4 ಡಿಗ್ರಿ ಸೆಲ್ಸಿಯಸ್, ಕನಿಷ್ಠ 13.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

Layer up, winter chill to continue in Bengaluru

ಹವಾಮಾನ ನಿಧಾನವಾರ ಏರುಪೇರಾದರೆ ಯಾವುದೇ ಸಮಸ್ಯೆಯಿಲ್ಲ ಆದರೆ ಪ್ರತಿ ದಿನವೂ ದೊಡ್ಡ ಮಟ್ಟದಲ್ಲಿ ಏರುಪೇರಾದರೆ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಜನವರಿ ಆರಂಭದಿಂದಲೂ ಈ ರೀತಿ ಪದೇ ಪದೇ ತಾಪಮಾನದಲ್ಲಿ ಏರಿಳಿತ ಕಂಡುಬರುತ್ತಿದೆ. ಜನವರಿ 2ರಂದು ನಗರದ ಕೇಂದ್ರ ಭಾಗದಲ್ಲಿ 12.4 ಡಿಗ್ರಿ ತಾಪಮಾನ ಕಂಡುಬಂದಿತ್ತು. ಬಳಿಕ 15 ಡಿಗ್ರಿಗೆ ತಲುಪಿತ್ತು. ಈಗ 12 ಡಿಗ್ರಿ ಸೆಲ್ಸಿಯಸ್‌ಗೆ ಬಂದು ತಕ್ಷಣವೇ 14 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಮೈಸೂರಿನಲ್ಲಿ ಕನಿಷ್ಠ ತಾಪಮಾನ 9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

English summary
Cooler than normal’ – that’s the kind of winter that Bengaluru can look forward to, according to the IMD winter prediction for penensular states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X