ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆಶಿಗೆ ಜಾಮೀನು ಸಿಗದಂತೆ ಮಾಡಿದ ಪುತ್ತೂರಿನ ವಕೀಲ ಇವರೇ..!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 06: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ದೆಹಲಿ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಜಾರಿ ನಿರ್ದೇಶನಾಲಯ ಸೆ.3ರಂದು ಬಂಧಿಸಿತ್ತು. ಆದರೆ ಡಿ.ಕೆ.ಶಿವಕುಮಾರ್ ಅವರಿಗೆ ಜಾಮೀನು ಸಿಗದೆ, ಅವರು ಬಂಧನಕ್ಕೊಳಗಾಗುವಂತೆ ಮಾಡಿದ್ದು ಕರ್ನಾಟಕದ ಪುತ್ತೂರಿನ ವಕೀಲ ಕೆ.ಎಂ. ನಟರಾಜ್ ಎಂಬುದು ಹಲವರಿಗೆ ತಿಳಿದಿಲ್ಲ!

Recommended Video

ಡಿಕೆಶಿ ಬಂಧನಕ್ಕೂ ಕುರಿ ಪ್ರತಾಪ್ ಗೂ ಏನು ಸಂಬಂಧ ? | Oneindia Kannada

619 ಕೋಟಿ ಒಡೆಯ ಡಿಕೆಶಿ; 8 ಕೋಟಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು ಯಾಕೆ?619 ಕೋಟಿ ಒಡೆಯ ಡಿಕೆಶಿ; 8 ಕೋಟಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು ಯಾಕೆ?

ಜಾರಿ ನಿರ್ದೇಶನಾಲಯ(ಇ.ಡಿ.) ಮತ್ತು ಕೇಂದ್ರ ತನಿಖಾ ದಳ(ಸಿ.ಬಿ.ಐ.)ದ ಪ್ರಕರಣಗಳಿಗೆ ಅಡಿಷನಲ್ ಸಾಲಿಸಿಟರ್ ಜನರಲ್ ಆಗಿ ನೇಮಕವಾಗಿರುವ ಕೆ.ಎಂ.ನಟರಾಜ್ ಅವರು ಇ.ಡಿ. ಪರ ಸಮರ್ಥವಾಗಿ ವಾದ ಮಂಡಿಸಿದ ಪರಿಣಾಮ ಡಿ.ಕೆ.ಶಿವಕುಮಾರ್ ಅವರಿಗೆ ಜಾಮೀನು ದೊರಕಿಸಿಕೊಡುವಲ್ಲಿ ಅವರ ಪರ ವಕೀಲರಾಗಿದ್ದ, ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿ ವಿಫಲರಾಗಿದ್ದರು.

ಇದೀಗ ಡಿ.ಕೆ.ಶಿವಕುಮಾರ್ ಅವರನ್ನು ಸೆ.13 ರವರೆಗೆ ಇ.ಡಿ. ವಶಕ್ಕೆ ಒಪ್ಪಿಸಲಾಗಿದೆ. 2017 ರಲ್ಲಿ ಡಿಕೆಶಿ ಅವರ ದೆಹಲಿ ನಿವಾಸದ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ 8.59 ಕೋಟಿ ರೂ. ನಗದು ಹಣ ದೊರಕಿತ್ತು. ಈ ಪ್ರಕರಣವೇ ಅವರಿಗೀಗ ಮುಳುವಾಗಿದ್ದು, ಅವರ ಬಂಧನಕ್ಕೂ ಕಾರಣವಾಗಿದೆ.

ಯಾರು ಈ ಕೆ.ಎಂ. ನಟರಾಜ್?

ಯಾರು ಈ ಕೆ.ಎಂ. ನಟರಾಜ್?

ದತ್ತಪೀಠ, ಚರ್ಚ್ ದಾಳಿ ಸೇರಿದಂತೆ ಸೂಕ್ಷ್ಮ ಪ್ರಕರಣಗಳಲ್ಲಿ ವಾದ ಮಂಡಿಸಿ ಸೈ ಎನ್ನಿಸಿಕೊಂಡಿದ್ದ ಕೆ.ಎಂ.ನಟರಾಜ್ ಮೂಲತಃ ಪುತ್ತೂರಿನವರು. 2008 ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೈಕೋರ್ಟ್ ನ ವಿಶೇಷ ಅಭಿಯೋಜಕರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದವರು.

ಎನ್ ಡಿಎ-1 ಸರ್ಕಾರದ ಅವಧಿಯಲ್ಲಿ ಆಯಕಟ್ಟಿನ ಹುದ್ದೆ

ಎನ್ ಡಿಎ-1 ಸರ್ಕಾರದ ಅವಧಿಯಲ್ಲಿ ಆಯಕಟ್ಟಿನ ಹುದ್ದೆ

2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಸರ್ಕಾರ ಅಸ್ತಿತ್ವಕ್ಕೆ ಬಂದಾಗ ದಕ್ಷಿಣ ಭಾರತದ ಅಡಿಶನಲ್ ಸಾಲಿಸಿಟರ್ ಜನರಲ್ ಆಫ್ ಸುಪ್ರೀಂ ಕೋರ್ಟ್ ಹುದ್ದೆಯನ್ನು ಅಲಂಕರಿಸಿದ್ದರು. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿ ಮತ್ತು ಕೇರಳ ಸೇರಿ ಆರು ರಾಜ್ಯಗಳಿಗೆ ಸಂಬಂಧಿಸಿದ ಯಾವುದೇ ಪ್ರಕರಣಗಳಿರಲಿ ಅದರಲ್ಲಿ ಎನ್ ಡಿಎ-1 ಸರ್ಕಾರದ ಪರ ವಾದ ಮಂಡಿಸುತ್ತಿದ್ದರು.

ಬಂಧನ ನಂತರ ಡಿಕೆ ಶಿವಕುಮಾರ್ ಮುಂದಿನ ಆಯ್ಕೆಗಳೇನು?ಬಂಧನ ನಂತರ ಡಿಕೆ ಶಿವಕುಮಾರ್ ಮುಂದಿನ ಆಯ್ಕೆಗಳೇನು?

ಮೋದಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಟರಾಜ್

ಮೋದಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಟರಾಜ್

ಕೇರಳ ಸರ್ಕಾರದ ವಿರುದ್ಧ ಸಿಬಿಐ ಮತ್ತು ಇ.ಡಿ. ಇಲಾಖೆ ಪರ ವಾದ ಮತ್ತು ಇಂಥ ಹಲವು ವಿಷಯಗಳಲ್ಲಿ ವಾದ ಮಂಡಿಸಿದ್ದ ನಟರಾಜ್ ಅವರ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಎನ್.ಡಿ.ಎ.-2 ಸರ್ಕಾರದ ಅವಧಿಯಲ್ಲಿ ಅವರನ್ನು ಸಾಲಿಸಿಟರ್ ಜನರಲ್ ಆಫ್ ಸುಪ್ರೀಂ ಕೋರ್ಟ್ ಫಾರ್ ಇಂಡಿಯಾ ಹುದ್ದೆಗೆ ನೇಮಿಸಿದರು.
ಮೋದಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಟರಾಜ್, ಡಿ.ಕೆ.ಶಿವಕುಮಾರ್ ಅವರ ವಿರುದ್ಧ ವಾದ ಮಂಡಿಸುತ್ತಿದ್ದರೂ ಡಿಕೆಶಿ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂದು ಬಿಜೆಪಿ ಹೇಳುತ್ತಿರುವುದರಲ್ಲಿ ಅರ್ಥವಿದೆಯೇ ಎಂದು ಡಿಕೆಶಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆದಿದ್ದು ಇಲ್ಲಿ ಉಲ್ಲೇಖನೀಯ!

ಡಿ.ಕೆ.ಶಿ. ಜಾಮೀನು ನಿರಾಕರಣೆ

ಡಿ.ಕೆ.ಶಿ. ಜಾಮೀನು ನಿರಾಕರಣೆ

ಇ.ಡಿ. ಮತ್ತು ಸಿಬಿಐಯ ಪ್ರಕರಣಗಳ ಜವಾಬ್ದಾರಿ ಹೊತ್ತಿರುವ ಕೆ.ಎಂ. ನಟರಾಜ್ ಅವರೇ ಡಿ.ಕೆ.ಶಿವಕುಮಾರ್ ಅವರ ವಿರುದ್ಧವಾಗಿಯೂ ವಾದ ಮಂಡಿಸಿದ್ದರು. 2017 ರ ಆಗಸ್ಟ್ 2 ರಂದು ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ಸಿಕ್ಕ 8.59 ಕೋಟಿ ರೂ. ಹಣಕ್ಕೆ ಸಂಬಂಧಿಸಿದಂತೆ ಐಟಿ ಇಲಾಖೆ ಒಟ್ಟು 4 ದೂರು ದಾಖಲು ಮಾಡಿತ್ತು. ಈ ದೂರಿನ ಆಧಾರದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಡಿ. ಕೆ. ಶಿವಕುಮಾರ್ ಅವರನ್ನು ಬಂಧಿಸಿದೆ.

English summary
Lawyer who appeared against DK Shivakumar and for the ED is advocate KM Nataraj, from Puttur, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X