ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

TDUನಲ್ಲಿ ಇಂಟರ್ನ್‌ಶಿಪ್ ಆಧಾರಿತ ಪದವಿ ಕೋರ್ಸ್‌ಗಳ ಆರಂಭ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 9: ಬೆಂಗಳೂರಿನಲ್ಲಿರುವ ಟ್ರಾನ್ಸ್‌ಡಿಸಿಪ್ಲಿನರಿ ವಿಶ್ವವಿದ್ಯಾಲಯವು (ಯೂನಿವರ್ಸಿಟಿ ಆಫ್ ಟ್ರಾನ್ಸ್‌ಡಿಸಿಪ್ಲಿನರಿ ಹೆಲ್ತ್ ಸೈನ್ಸಸ್ ಅಂಡ್ ಟೆಕ್ನಾಲಜಿ - TDU) ವೃತ್ತಿಪರ "ಬ್ಯಾಚುಲರ್ ಆಫ್ ವೊಕೇಶನ್" (B.Voc.) ಪದವಿ ಶಿಕ್ಷಣ ಕೊರ್ಸ್ಅನ್ನು ಈ ವರ್ಷದಿಂದ ಅರಂಭಿಸುತ್ತಿದೆ.

ಈ ಕೋರ್ಸ್ ಗಾಂಧೀಜಿಯವರ "ನಯೀ-ತಾಲೀಮ್" ಸಿದ್ಧಾಂತದಿಂದ ಪ್ರೇರಿತಗೊಂಡ "ಕೆಲಸದ ಜೊತೆಯಲ್ಲೇ ಕಲಿಕೆ" ಎಂಬ ತತ್ವವನ್ನು ಪ್ರತಿಪಾದಿಸುತ್ತದೆ. ಹೀಗಾಗಿ, ಸಂಪೂರ್ಣವಾಗಿ ವೃತ್ತಿಪರಶಿಕ್ಷಣ ಆಧಾರಿತವಾಗಿವೆ. ವಿದ್ಯಾರ್ಥಿಗಳಿಗೆ ಹಲವು ಅನುಕೂಲಗಳನ್ನು ನೀಡುತ್ತದೆ ಅಲ್ಲದೇ, 'ದುಡಿಯುವುದರ ಜೊತೆ ಕಲಿಯುವ' ಅವಕಾಶವನ್ನು ನೀಡುತ್ತದೆ. ಈ ಕೋರ್ಸನ್ನು ಗಾಂಧೀ ಜಯಂತಿಯ ದಿನವಾದ ಅಕ್ಟೊಬರ್ 2, 2021 ರಂದು ಆರಂಭಿಸಲಾಗುತ್ತದೆ.

ಈ ಕೋರ್ಸಿನ ವಿದ್ಯಾರ್ಥಿಗಳು ವಾರದ 5 ದಿನಗಳು ತಮ್ಮ ಸಂಪೂರ್ಣ ಸಮಯವನ್ನು ತಮಗೆ ನಿಗದಿಪಡಿಸಿದ ಒಂದು ಉದ್ದಿಮೆ ಅಥವಾ ಕೈಗಾರಿಕೆಯಲ್ಲಿ ಕೆಲಸಕ್ಕೆ ವಿನಿಯೋಗಿಸಬೇಕು. ಹೀಗೆ ಕೆಲಸ ಮಾಡುತ್ತಾ ಈ ಕೋರ್ಸಿನ ಪಠ್ಯ ವಿಷಯವನ್ನು ಅಧ್ಯಯನ ಮಾಡಬೇಕು. ವಿದ್ಯಾರ್ಥಿಗಳಿಗೆ ತಮ್ಮ ವಾಸಸ್ಥಳದ ಸಮೀಪವಿರುವ ನಗರ ಅಥವಾ ಪಟ್ಟಣಗಳಲ್ಲಿರುವ ಕೈಗಾರಿಕೆಗಳು ಮತ್ತು ಸಂಸ್ಥೆಗಳಲ್ಲಿ ಕಲಿಕೆಯ ಅವಕಾಶವನ್ನು ಒದಗಿಸಲಾಗುತ್ತದೆ.

ಈ (B.Voc.) ಪದವಿ ಶಿಕ್ಷಣವು ಸಾಮಾನ್ಯ B.A., B.Sc., ಮತ್ತು B.Com. ಗಳಿಗಿಂತ ವಿಭಿನ್ನವಾಗಿದೆ ಏಕೆಂದರೆ, 3 ವರ್ಷಗಳಲ್ಲಿ ವಿದ್ಯಾರ್ಥಿಗಳು ವಿವಿಧ ಕೌಶಲಗಳ ಸಂಪೂರ್ಣ ವೃತ್ತಿಪರ ತರಬೇತಿ ಪಡೆದು ಆತ್ಮವಿಶ್ವಾಸದೊಡನೆ ಕೆಲಸದಲ್ಲಿ ತೊಡಗಿಸಿಕೊಳ್ಳಲು ಶಕ್ತರಿರುತ್ತಾರೆ. ಇದರೊಂದಿಗೆ ಅದೇ ಸಂಸ್ಥೆಗಳಲ್ಲಿ ತಮ್ಮ ವೃತ್ತಿ ಜೀವನವನ್ನು ಮುಂದುವರಿಸುವ ಅವಕಾಶವಿರುತ್ತದೆ, ಹಾಗೂ ಅಂಥಹದೇ ಇತರ ಉತ್ತಮ ಸಂಸ್ಥೆಗಳಲ್ಲಿ ಕೆಲಸ ಪಡೆದುಕೊಳ್ಳಬಲ್ಲರು.

ತಿಂಗಳಿಗೆ ಅಂದಾಜು ರೂ. 2000 ದಿಂದ 4000 ಶುಲ್ಕ

ತಿಂಗಳಿಗೆ ಅಂದಾಜು ರೂ. 2000 ದಿಂದ 4000 ಶುಲ್ಕ

ಈ ಕೋರ್ಸ್‌ಗಳ ಶುಲ್ಕ ತಿಂಗಳಿಗೆ ಅಂದಾಜು ರೂ. 2000 ದಿಂದ 4000 ಗಳಷ್ಟು ಇರುತ್ತದೆ. ಆದರೆ, ಎಷ್ಟೋ ವಿದ್ಯಾರ್ಥಿಗಳಿಗೆ ತಾವು ವೃತ್ತಿಶಿಕ್ಷಣವನ್ನು ಪಡೆಯುತ್ತಿರುವ ಸಂಸ್ಥೆಗಳಿಂದ ರಾಷ್ಟ್ರೀಯ ವೃತ್ತಿಪರಶಿಕ್ಷಣ ಯೊಜನೆಯಡಿ ಶಿಷ್ಯವೇತನವನ್ನು ಪಡೆಯುವ ಅವಕಾಶವಿದೆ. ಹೀಗೆ ಅವರು ತಮ್ಮ ಸ್ವಂತ ಗಳಿಕೆಯಿಂದ ತಮ್ಮ ಶಿಕ್ಷಣದ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತದೆ. ಆರ್ಥಿಕವಾಗಿ ಸಬಲವಲ್ಲದ ಮತ್ತು ಕೋವಿಡ್ -19 ನಂತಹ ಸಮಸ್ಯೆಗಳಿಂದ ತೊಂದರೆಗೊಳಗಾದ ಕುಟುಂಬಗಳಿಗೆ ಕೂಡಾ ಈ ಕೋರ್ಸುಗಳು ಕೈಗೆಟುಕುವಂತಿದೆ. ಈ ಕಾರ್ಯಕ್ರಮದ ವಿಶೇಷತೆಯೆಂದರೆ, ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಅನುಗುಣವಾಗಿ, ಕಲಿಕೆಯ ನಡುವೆ, ಮೊದಲ ಅಥವಾ ಎರಡನೆಯ ವರ್ಷದ ಕೊನೆಗೆ, ವಿದ್ಯಾರ್ಥಿಗಳು ಡಿಪ್ಲೊಮಾ ಅಥವಾ ಅಡ್ವಾನ್ಸ್ಡ್ ಡಿಪ್ಲೊಮಾ ಪ್ರಮಾಣಪತ್ರವನ್ನು ಪಡೆದು ನಿರ್ಗಮಿಸುವ ಆಯ್ಕೆಯನ್ನೂ ಪಡೆದಿರುತ್ತಾರೆ.

ಆರೋಗ್ಯ ಸೇವೆಗಳಿಗೆ ಸಂಬಂಧಿಸಿದ ಕೋರ್ಸ್‌

ಆರೋಗ್ಯ ಸೇವೆಗಳಿಗೆ ಸಂಬಂಧಿಸಿದ ಕೋರ್ಸ್‌

ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ, ಯು.ಜಿ.ಸಿ (U.G.C)ಯ ನಿರ್ದೇಶನದ ಪ್ರಕಾರ ಎಲೆಕ್ಟ್ರಾನಿಕ್ಸ್ ಮತ್ತು ಆರೋಗ್ಯ ಸೇವೆಗಳಿಗೆ ಸಂಬಂಧಿಸಿದ ಕೋರ್ಸ್‌ಗಳನ್ನು ಅಕ್ಟೋಬರ್ 1 ರಿಂದ ಪ್ರಾರಂಭಿಸಲಾಗುವುದು. ಈ ಕೆಳಕಂಡ ವೃತ್ತಿಪರ ಪದವಿ ಕೋರ್ಸ್‌ಗಳಿಗೆ ಮೊದಲ ಹಂತದ ದಾಖಲಾತಿಯನ್ನು ಸೆಪ್ಟೆಂಬರ್ 1 ರಿಂದ ಆರಂಭಿಸಲಾಗಿದೆ.

 ಕೋರ್ಸ್ ಗಳ ವಿವರ:

ಕೋರ್ಸ್ ಗಳ ವಿವರ:

• B.Voc. ಹಾರ್ಡ್‌ವೇರ್, ನೆಟ್‌ವರ್ಕಿಂಗ್ ಮತ್ತು ಸೆಕ್ಯೂರಿಟಿ ಸಿಸ್ಟಮ್ಸ್ (HNSS) - ಬೆಂಗಳೂರಿನಲ್ಲಿ

• B.Voc. ರೆಫ್ರಿಜರೇಟರ್ ಮತ್ತು ಕೂಲಿಂಗ್ ಸಿಸ್ಟಮ್ಸ್ (RACS) - ಬೆಂಗಳೂರಿನಲ್ಲಿ• B.Voc. ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ (MLT)- ನಿಪ್ಪಾಣಿಯಲ್ಲಿ• B.Voc. ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ (MIT)- ನಿಪ್ಪಾಣಿಯಲ್ಲಿ• ಪಿ .ಜಿ. ಡಿಪ್ಲೋಮ ಇನ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ (P.G. Dip. MLT)- ನಿಪ್ಪಾಣಿಯಲ್ಲಿ

ಹೆಚ್ಚುವರಿ ಕೋರ್ಸ್‌ಗಳು ಮತ್ತು ತರಬೇತಿ ಸ್ಥಳಗಳನ್ನು ಜನವರಿ 2022 ರಲ್ಲಿ ಪ್ರಕಟಿಸಲಾಗುವುದು.

12 ನೇ ತರಗತಿ ಉತ್ತೀರ್ಣ-ವಿದ್ಯಾರ್ಹತೆ

12 ನೇ ತರಗತಿ ಉತ್ತೀರ್ಣ-ವಿದ್ಯಾರ್ಹತೆ

ಕನಿಷ್ಟ ವಿದ್ಯಾರ್ಹತೆ: ಆಸಕ್ತರು 12 ನೇ ತರಗತಿಯ (P.U.C.) ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು. ಕೆಲವು ನಿರ್ದಿಷ್ಟ ಕೋರ್ಸ್ ಗಳನ್ನ ಆಯ್ಕೆ ಮಾಡಿಕೊಳ್ಳಲು, ಪದವಿಪೂರ್ವ ಶಿಕ್ಷಣದಲ್ಲಿ ವಿಜ್ಞಾನ ವಿಷಯಗಳನ್ನ ಓದಿರಬೇಕು. ಇದರ ಹೊರತಾಗಿ, ವೃತ್ತಿ ಕೌಶಲ್ಯವನ್ನು ಹೊಂದಿದ್ದರೂ, ಔಪಚಾರಿಕ ತರಬೇತಿ ಮತ್ತು ಶೈಕ್ಷಣಿಕ ಪದವಿಪತ್ರಗಳಿಲ್ಲದೇ ತಮ್ಮ ವೃತ್ತಿಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗದವರನ್ನು ಸಹ ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸಲಾಗುತ್ತದೆ. ಸಂಪೂರ್ಣ ಮಾಹಿತಿಗಾಗಿ ನಮ್ಮ ವೆಬ್ ಸೈಟ್ ಅನ್ನು ಸಂಪರ್ಕಿಸಿ.

T.D.U ಸಂಸ್ಥೆಯು ಈ ಕೊರ್ಸ್ ಗಳಿಗೆ ವರ್ಷಕ್ಕೆ ಎರಡು ಬಾರಿ (ಜನವರಿ ಮತ್ತು ಜುಲೈ ತಿಂಗಳುಗಳಲ್ಲಿ) ದಾಖಲಾತಿಯನ್ನು ಆಹ್ವಾನಿಸುತ್ತದೆ. ಹೆಚ್ಚಿನ ಮಾಹಿತಿಗೆ ನಮ್ಮ ವೆಬ್ ಸೈಟ್ ಗೆ https://vep.tdu.edu.in ಭೇಟಿ ನೀಡಿರಿ.

Recommended Video

ನೀವು ಧರ್ಮಸ್ಥಳಕ್ಕೆ ಹೋಗಬೇಕಾ ? ಹಾಗಾದ್ರೆ ಈ ಸ್ಟೋರಿ ನೋಡಿ | Oneindia Kannada

English summary
The University of Trans-disciplinary Health Sciences and Technology (TDU) is pleased to announce the launch of vocational education programmes leading to Bachelor of Vocation (B.Voc.) and Post-Graduate Diploma degrees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X