ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರ ಮನೆ ಈಗ ಫೇಮಸ್ ಕಾಂಬೋಡಿಯನ್ ರೆಸ್ಟೋರೆಂಟ್

|
Google Oneindia Kannada News

ಬೆಂಗಳೂರು,ಫೆಬ್ರವರಿ 13:ಹಿರಿಯ ಸಾಹಿತಿ ದಿ.ಗಿರೀಶ್ ಕಾರ್ನಾಡ್ ಅವರ ಮನೆ ಇದೀಗ ಕಾಂಬೋಡಿಯನ್ ರೆಸ್ಟೋರೆಂಟ್ ಆಗಿ ಬದಲಾಗಿದೆ.

ಸುಮಾರು 25 ವರ್ಷಗಳ ಕಾಲ ಕಾರ್ನಾಡರಿದ್ದ ಆ ಮನೆ ಈಗ ಒಂದು ರೆಸ್ಟೋರೆಂಟ್,ಆದರೆ ಒಂದು ಆಸಕ್ತಿದಾಯಕ ವಿಚಾರವೇನೆಂದರೆ ಮನೆಯ ಸುತ್ತಮುತ್ತಲಿದ್ದ ಮರಗಳು, ಮನೆಯ ಗಾರ್ಡನ್,ಗಿರೀಶ್ ಕಾರ್ನಾಡ್ ಅವರ ಲೈಬ್ರರಿ ಇದ್ದ ಹಾಗೆಯೇ ಇದೆ. ಅದೆಲ್ಲವನ್ನೂ ಉಳಿಸಿಕೊಂಡು ರೆಸ್ಟೋರೆಂಟ್ ನಿರ್ಮಾಣ ಮಾಡಲಾಗಿದೆ.

ಇದು ಹೊಸ ರೆಸ್ಟೋರೆಂಟ್ ಆದರೂ ಇದೀಗ ಎಲ್ಲರ ಬಾಯಲ್ಲೂ ಖಮೇರ್ ಕಿಚನ್ ಹೆಸರನ್ನೇ ಹೇಳುತ್ತಿದ್ದಾರೆ.ರೆಸ್ಟೋರೆಂಟ್ ಪ್ರದೇಶ ಹಸಿರಿನಿಂದ ಕೂಡಿದ್ದು, ಅದೇ ಪ್ರದೇಶದಲ್ಲಿ ಗಿರೀಶ್ ಕಾರ್ನಾಡ್ ಅವರು ಹಲವು ವರ್ಷಗಳನ್ನು ಕಳೆದಿದ್ದರು.

Late Veteran Writer Girish Karnads Old Home Now Houses The Bengalurus Latest Cambodian Restaurant

ಇದೀಗ ಅದು ರೆಸ್ಟೋರೆಂಟ್ ಆಗಿ ಬದಲಾಗಿದೆ. ಖಮೇರ್ ರೆಸ್ಟೋರೆಂಟ್‌ನಲ್ಲಿ ಆಗ್ನೇಯ ಏಷ್ಯಾದ ಆಹಾರ ಲಭ್ಯವಾಗುತ್ತದೆ.ಕಾರ್ನಾಡ್ ಅವರ ಪುತ್ರ ರಘು ಕಾರ್ನಾಡ್ ಮಾತನಾಡಿ, ಇಲ್ಲಿ ಯಾವುದೇ ಮರಗಳನ್ನು ಕಡಿದಿಲ್ಲ, ಹಾಗೆಯೇ ಮನೆಯ ರಚನೆಯೂ ಬದಲಾಗಿಲ್ಲ, ಇದ್ದಹಾಗೆ ಇದೆ.

ಅವರ ತಾಯಿಯ ನೆನಪು ಮಾಡಿಕೊಂಡು ರಘು ತಾಯಿ ಸರಸ್ವತಿ ಗಣಪತಿ ಅವರು ಈ ಮನೆಯನ್ನು ಕಟ್ಟಿಸಿದ್ದರು. 1994 ರಿಂದ 25 ವರ್ಷಗಳ ಕಾಲ ಇದೇ ಮನೆಯಲ್ಲೇ ವಾಸವಿದ್ದರು.

2018 ರಲ್ಲಿ ನವೀನ್ ರೆಡ್ಡಿ ಹಾಗೂ ಪತ್ನಿ ವೀಣಾ ರೆಸ್ಟೋರೆಂಟ್‌ನ್ನು ತೆರೆಯಬೇಕು ಅಂದುಕೊಂಡಿದ್ದರು, ಅವರು ಕಾಂಬೋಡಿಯನ್ ರೆಸ್ಟೋರೆಂಟ್ ತೆರೆಯಬೇಕು ಎನ್ನುವ ಆಲೋಚನೆಯಲ್ಲಿದ್ದರು, ನಾನು ಇಲ್ಲಿಯೇ ತೆರೆಯುವಂತೆ ಸೂಚಿಸಿದ್ದೆ.

ರೆಡ್ಡಿ ಮಾತನಾಡಿ, 2018ರಲ್ಲಿ ಮನೆಯನ್ನು ಲೀಸ್‌ಗೆ ಪಡೆದೆವು,2019ರಿಂದ ಆರಂಭ ಮಾಡಿದೆವು.ಕಾರ್ನಾಡ್ ಅವರ ಲೈಬ್ರರಿಯೂ ಹಾಗೆಯೇ ಇದೆ, ಹಾಗೆಯೇ ಅಲ್ಲಿರುವ ಹಸಿರನ್ನು ಹಾಗೆಯೇ ಇರಿಸುವ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು.

English summary
It may be a new restaurant in town but Khmer Kitchen in JP Nagar is a familiar landmark for South Bengalureans who know it as ‘Karnada Ganapthy’.:
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X