ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ತಾಯಂದಿರು ಮತ್ತು ಗರ್ಭಧಾರಣೆ ಸಮಸ್ಯೆಗಳು!

ಬೆಂಗಳೂರಿನಂತಹ ನಗರಗಳಲ್ಲಿ ತಡವಾಗಿ ಮದುವೆಯಾಗುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ಇದರೊಟ್ಟಿಗೆ ಜನನ ಸಂಬಂಧಿ ಸಮಸ್ಯೆಗಳು ಮತ್ತು ಸಂಕೀರ್ಣತೆಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ತಡವಾಗಿ ಮದುವೆಯಾಗುವುದರಿಂದ ಗರ್ಭ ಧರಿಸುವುದೂ ತಡವಾಗುತ್ತದೆ.

By Prasad
|
Google Oneindia Kannada News

ತಡವಾಗಿ ಮದುವೆಯಾಗುವುದು, ದೈಹಿಕ ಸೌಂದರ್ಯ ಹಾಳಾಗುತ್ತದೆಂದು ಗರ್ಭಧಾರಣೆಯನ್ನು ಮುಂದೆ ಹಾಕುವುದು, ಕಲಬೆರಕೆಯ ಜೀವನಶೈಲಿಯಿಂದಾಗಿ ಬೆಂಗಳೂರು ಸೇರಿದಂತೆ ನಗರಗಳಲ್ಲಿ ತಾಯಂದಿರು ಮತ್ತು ಮಕ್ಕಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಮಕ್ಕಳಿಗೆ ಸೋಂಕು ತಗುಲದೆ ಆರೋಗ್ಯವಂತರಾಗಿರಲು ತಾಯಂದಿರು ಏನೇನು ಮಾಡಬೇಕು, ತಡವಾಗಿ ಮದುವೆಯಾಗುತ್ತಿರುವುದರಿಂದ ಏನೇನು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂಬ ಸಂಗತಿಗಳನ್ನು ಬೆಂಗಳೂರಿನ ಖ್ಯಾತ ವೈದ್ಯೆ ಡಾ. ಶುಭಾ ರಾಮ ರಾವ್ ಅವರು ಹಂಚಿಕೊಂಡಿದ್ದಾರೆ.

ಮಹಿಳೆಯರು ನಾನಾ ಕಾರಣಗಳನ್ನು ಮುಂದಿಟ್ಟುಕೊಂಡು ತಡವಾಗಿ ಮದುವೆಯಾವುದಲ್ಲದೆ, ತಡವಾಗಿಯೂ ಗರ್ಭಧರಿಸುತ್ತಿರುವುದರಿಂದ ಅವಧಿಗೆ ಮುನ್ನವೇ ಮಗುವಿಗೆ ಜನ್ಮ ನೀಡುತ್ತಿದ್ದಾರೆ. ಇದರಿಂದ ಹುಟ್ಟುವ ಮಕ್ಕಳಿಗೆ ಸೋಂಕು ತಗುಲಿ ತೊಂದರೆಗಳನ್ನು ಅನುಭವಿಸುತ್ತಿವೆ. [ಅಕ್ಷರದಿಂದ ಅಮ್ಮಂದಿರ ವರ್ಣಿಸಲು ಸಾಧ್ಯವಿಲ್ಲ]

ಬೆಂಗಳೂರಿನಂತಹ ನಗರಗಳಲ್ಲಿ ತಡವಾಗಿ ಮದುವೆಯಾಗುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ಇದರೊಟ್ಟಿಗೆ ಜನನ ಸಂಬಂಧಿ ಸಮಸ್ಯೆಗಳು ಮತ್ತು ಸಂಕೀರ್ಣತೆಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ತಡವಾಗಿ ಮದುವೆಯಾಗುವುದರಿಂದ ಗರ್ಭ ಧರಿಸುವುದೂ ತಡವಾಗುತ್ತದೆ. ಅಲ್ಲದೆ, ಅವಧಿಗೆ ಮುನ್ನವೇ ಮಹಿಳೆ ಮಗುವಿಗೆ ಜನ್ಮ ನೀಡುತ್ತಾರೆ. ಇದು ನಗರ ಪ್ರದೇಶಗಳನ್ನು ಕಾಡುತ್ತಿರುವ ಗಂಭೀರವಾದ ಆರೋಗ್ಯ ಸಮಸ್ಯೆ. [ತಾಯಿಯ ಜೀವಕ್ಕೆ ಕುತ್ತಾದ ವಿಚಿತ್ರ ಮಗುವಿನ ಜನನ!]

ಇನ್-ವರ್ಟೋ ಫರ್ಟಿಲೈಸೇಶನ್

ಇನ್-ವರ್ಟೋ ಫರ್ಟಿಲೈಸೇಶನ್

ದಂಪತಿ ಇನ್-ವರ್ಟೋ ಫರ್ಟಿಲೈಸೇಶನ್ ಅಥವಾ ಐವಿಎಫ್‌ನಂತಹ ದುಬಾರಿ ಚಿಕಿತ್ಸೆಗಳ ಮೂಲಕ ಮಗುವನ್ನು ಪಡೆಯಲು ಮುಂದಾಗುತ್ತಿದ್ದಾರೆ. ಇಂತಹ ಚಿಕಿತ್ಸೆಗೆ ಅಸಿಸ್ಟೆಡ್ ರೀಪ್ರೊಡಕ್ಷನ್ ಎಂದು ಕರೆಯಲಾಗುತ್ತದೆ. ಆದರೆ, ಇಂತಹ ಚಿಕಿತ್ಸೆಯ ನಂತರವೂ ಅಕಾಲಿಕವಾಗಿ ಅಂದರೆ, ಅವಧಿಗೆ ಮುನ್ನವೇ ಮಗು ಜನಿಸುವ ಪ್ರಮಾಣವೂ ಹೆಚ್ಚಿದೆ. [ಪುಟ್ಟ ಮಕ್ಕಳಿಗೆ ಸ್ತನ್ಯಪಾನ ಮಾಡಿಸಿದ ದಿಟ್ಟ ತಾಯಂದಿರು]

ಅವಧಿಪೂರ್ಣ ಜನನ

ಅವಧಿಪೂರ್ಣ ಜನನ

ಕಳೆದ ಎರಡು ವರ್ಷಗಳಲ್ಲಿ ಹೀಗೆ ಅಸಿಸ್ಟೆಡ್ ರೀಪ್ರೊಡಕ್ಷನ್ ತಂತ್ರಜ್ಞಾನದಿಂದ ಗರ್ಭ ಧರಿಸುವ ಮಹಿಳೆಯರು ಅಕಾಲಿಕವಾಗಿ ಮಗುವಿಗೆ ಜನ್ಮ ನೀಡುವ ಪ್ರಮಾಣದಲ್ಲಿ ಶೇ.10ರಿಂದ 15ರಷ್ಟು ಹೆಚ್ಚಳ ಕಂಡು ಬಂದಿದೆ. ಭಾರತದಲ್ಲಿ ಪ್ರತಿವರ್ಷ 2.7 ಕೋಟಿ ಮಕ್ಕಳು ಜನಿಸುತ್ತವೆ. ಈ ಪೈಕಿ ಸುಮಾರು 35 ಲಕ್ಷ ಮಕ್ಕಳು ಅವಧಿಪೂರ್ವದಲ್ಲಿ ಜನಿಸುತ್ತಿವೆ. [ಹುಟ್ಟಿದ ಮಗುವಿಗೆ ತಾಯಿಯ ಹಾಲೇ ಸರ್ವಶ್ರೇಷ್ಠ]

ಒತ್ತಡ ಮತ್ತು ಮಧುಮೇಹಕ್ಕೆ ಗುರಿಯಾಗಬಹುದು

ಒತ್ತಡ ಮತ್ತು ಮಧುಮೇಹಕ್ಕೆ ಗುರಿಯಾಗಬಹುದು

ಸೇಂಟ್ ಮಾರ್ಥಾಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ.ಶುಭಾರಾಮ ರಾವ್ ಅವರು ಹೇಳುವಂತೆ, ತಡವಾಗಿ ಮದುವೆಯಾದರೆ ಗರ್ಭಧಾರಣೆ ವೇಳೆ ಸಾಕಷ್ಟು ಸಂಕೀರ್ಣ ಸಮಸ್ಯೆಗಳು ಉಂಟಾಗುತ್ತವೆ. ಇದರ ಪರಿಣಾಮ ಅವಧಿಪೂರ್ವ ಮಗು ಜನನವಾಗುತ್ತದೆ. ತಡವಾಗಿ ಮದುವೆಯಾದ ಕೆಲವು ಮಹಿಳೆಯರಿಗೆ ನಾವು ಅಸಿಸ್ಟ್ ಇನ್ ಪ್ರಗ್ನೆನ್ಸಿ ನೀಡುತ್ತೇವೆ. ಬಹುತೇಕ ಪ್ರಕರಣಗಳಲ್ಲಿ ಮಹಿಳೆ ಅವಳಿ ಗರ್ಭ ಧರಿಸುವಂತಾಗುತ್ತದೆ. ತಾಯಿಯ ವಯಸ್ಸು ಹೆಚ್ಚಾಗಿರುವುದರಿಂದ ಒತ್ತಡ ಮತ್ತು ಮಧುಮೇಹಕ್ಕೆ ಗುರಿಯಾಗಬಹುದು. ಇದು ಅವಧಿಪೂರ್ವ ಹೆರಿಗೆಗೆ ಕಾರಣವಾಗಬಲ್ಲದು.

ನಗರದ ದಂಪತಿಗಳ ತಪ್ಪು ನಿರ್ಧಾರ

ನಗರದ ದಂಪತಿಗಳ ತಪ್ಪು ನಿರ್ಧಾರ

ಹೆಚ್ಚು ವಯಸ್ಸಾದಂತೆಲ್ಲಾ ಗರ್ಭ ಧರಿಸುವ ಫಲವತ್ತತೆಯನ್ನು ಮಹಿಳೆ ಕಳೆದುಕೊಳ್ಳಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮೊದಲ ಮಗುವನ್ನು ಪಡೆಯುವ ಮಹಿಳೆಯರ ವಯಸ್ಸು ಅಧಿಕವಾಗಿರುತ್ತದೆ. ಇದು ಹಲವು ಅಪಾಯಗಳಿಗೆ ಮತ್ತು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸರಾಸರಿ 35ನೇ ವಯಸ್ಸಿಗೆ ಮಗುವನ್ನು ಪಡೆಯುವ ಪ್ರತಿ ನಾಲ್ಕು ಮಹಿಳೆಯರಲ್ಲಿ ಒಬ್ಬರಲ್ಲಿ ಪ್ರಸವ ಸಂಬಂಧಿತ ಗಂಭೀರ ಸಮಸ್ಯೆಗಳು ಕಾಡುತ್ತವೆ. ತಡವಾಗಿ ಮಗುವನ್ನು ಪಡೆಯುವವರ ಪ್ರಮಾಣ ನಗರ ಪ್ರದೇಶದಲ್ಲಿ ಸಾಮಾನ್ಯ. ಆದರೆ, ದಂಪತಿಯ ಈ ನಿರ್ಧಾರ ತಪ್ಪು" ಎನ್ನುತ್ತಾರೆ ಡಾ.ಶುಭಾ ರಾಮರಾವ್.

ಗರ್ಭಧಾರಣೆ ಸಾಮರ್ಥ್ಯ ಕಡಿಮೆ

ಗರ್ಭಧಾರಣೆ ಸಾಮರ್ಥ್ಯ ಕಡಿಮೆ

ಗರ್ಭಧಾರಣೆ ಮತ್ತು 30 ವರ್ಷ ಮೀರಿದ ಮಹಿಳೆಯರು ಮಗು ಪಡೆಯಲು ನಿರಾಕರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆಸಿದ ಹಲವಾರು ಅಧ್ಯಯನಗಳ ಪ್ರಕಾರ, 30 ವರ್ಷ ಮೀರಿದ ಮತ್ತು 40 ವರ್ಷದ ಆಜುಬಾಜಿನಲ್ಲಿರುವ ಬಹುತೇಕ ಮಹಿಳೆಯರಲ್ಲಿ ಗರ್ಭಧಾರಣೆ ಸಾಮರ್ಥ್ಯ ಕಡಿಮೆಯಾಗಿರುತ್ತದೆ ಅಥವಾ ಇಲ್ಲದಂತಾಗಿರುತ್ತದೆ.

ಒತ್ತಡದಿಂದ ಕೂಡಿದ ಜೀವನಶೈಲಿ

ಒತ್ತಡದಿಂದ ಕೂಡಿದ ಜೀವನಶೈಲಿ

ಒತ್ತಡದಿಂದ ಕೂಡಿದ ಜೀವನಶೈಲಿ, ಚಟುವಟಿಕೆ ಇಲ್ಲದ ಜೀವನ ಶೈಲಿ, ಕುಗ್ಗಿದ ಗರ್ಭಧಾರಣೆಯ ಫಲವತ್ತತೆ ಎದುರಾಗಿ ಗರ್ಭಧಾರಣೆ ವಿಳಂಬವಾಗುವಂತೆ ಮಾಡುತ್ತದೆ. ಸ್ತ್ರೀರೋಗ ತಜ್ಞರ ಪ್ರಕಾರ ಪುರುಷ ಮತ್ತು ಮಹಿಳೆಯರಲ್ಲಿ 20 ವರ್ಷದ ನಂತರದ ಕೆಲವು ವರ್ಷ ಫಲವತ್ತತೆ ಪ್ರಮಾಣ ಅತಿ ಹೆಚ್ಚಾಗಿರುತ್ತದೆ. 30 ವರ್ಷದ ನಂತರ ಗರ್ಭ ಧರಿಸಿದರೆ ಮಹಿಳೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಮದ್ಯಪಾನದಂತಹ ದುರಭ್ಯಾಸಗಳು

ಮದ್ಯಪಾನದಂತಹ ದುರಭ್ಯಾಸಗಳು

ಧೂಮಪಾನ ಮತ್ತು ಮದ್ಯಪಾನದಂತಹ ದುರಭ್ಯಾಸಗಳು ಗರ್ಭಧಾರಣೆ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಈ ಹವ್ಯಾಸಗಳು ಹೆಚ್ಚು ಒತ್ತಡವನ್ನು ಉಂಟುಮಾಡುತ್ತವೆ. ಇದರ ಪರಿಣಾಮ ಅಕಾಲಿಕವಾಗಿ ಮಗುವಿಗೆ ಜನ್ಮ ನೀಡಬೇಕಾದ ಪ್ರಸಂಗ ಎದುರಾಗುತ್ತದೆ. ಅಲ್ಲದೆ, ಮಕ್ಕಳ ಅಂಗಗಳು ಕೂಡ ಊನವಾಗುವ ಸಾಧ್ಯತೆ ಇರುತ್ತದೆ.

ಆರ್ಥಿಕ ಹೊರೆ ಉಂಟಾಗುವ ಸಾಧ್ಯತೆ

ಆರ್ಥಿಕ ಹೊರೆ ಉಂಟಾಗುವ ಸಾಧ್ಯತೆ

ಅವಧಿಪೂರ್ವ ಮಕ್ಕಳು ಜನಿಸಿದರೆ ಪೋಷಕರಿಗೆ ಭಾರೀ ಪ್ರಮಾಣದ ಆರ್ಥಿಕ ಹೊರೆ ಉಂಟಾಗುವ ಸಾಧ್ಯತೆಗಳಿವೆ. ಇಂತಹ ಮಕ್ಕಳನ್ನು ಸೂಕ್ತ ಆರೈಕೆ ಮಾಬೇಕಾದರೆ 10 ಲಕ್ಷ ರೂಪಾಯಿಯಿಂದ 30 ಲಕ್ಷ ರೂಪಾಯಿವರೆಗೆ (ಖಾಸಗಿ ಆಸ್ಪತ್ರೆಗಳಲ್ಲಿ ಸಮಸ್ಯೆಗಳಿಗನುಗುಣವಾಗಿ) ಖರ್ಚು ತಗುಲುತ್ತದೆ.

ಅಧಿಕ ರಕ್ತದೊತ್ತಡ ಮತ್ತು ಮಧುಮೇಹ

ಅಧಿಕ ರಕ್ತದೊತ್ತಡ ಮತ್ತು ಮಧುಮೇಹ

ನಗರ ಪ್ರದೇಶದಲ್ಲಿನ ಬಹುತೇಕ ಮಹಿಳೆಯರು ಉದ್ಯೋಗಸ್ಥರಾಗಿದ್ದು, ಒತ್ತಡದ ವಾತಾವರಣವನ್ನು ಎದುರಿಸುತ್ತಿರುತ್ತಾರೆ. ಇದರ ಪರಿಣಾಮ ಅವರಲ್ಲಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಸಮಸ್ಯೆಗಳು ಕಂಡುಬರುವುದುಂಟು. ಈ ಅಂಶಗಳು ತಡವಾಗಿ ಗರ್ಭ ಧರಿಸಲು ಕಾರಣವಾಗುತ್ತವೆ. ಹೀಗಾಗಿ ಇದು ನಗರ ಪ್ರದೇಶದ ಮಹಿಳೆಯರಿಗೆ ಕಾಡುತ್ತಿರುವ ಆತಂಕವಾಗಿದೆ.

ಸರಿಯಿಲ್ಲದ ಜೀವನಶೈಲಿ

ಸರಿಯಿಲ್ಲದ ಜೀವನಶೈಲಿ

ನಗರ ಪ್ರದೇಶದ ಬಹುತೇಕ ಕುಟುಂಬಗಳು ವಿಭಕ್ತ ಕುಟುಂಬಗಳಾಗಿವೆ. ಅವರ ಸರಿಯಾದ ಜೀವನಶೈಲಿ ಇಲ್ಲದೆ ಗರ್ಭಧಾರಣೆ ತಡವಾಗುತ್ತಿದ್ದು, ಗರ್ಭಿಣಿಯಾದ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ. ಅವಧಿಪೂರ್ವ ಮಕ್ಕಳಿಗೆ ಜನ್ಮ ನೀಡುವ ಬಹುತೇಕ ತಾಯಂದಿರುವ ರಕ್ತಹೀನತೆಯಿಂದ ಬಳಲುತ್ತಿರುವ ಪ್ರಕರಣಗಳನ್ನು ನಾವು ಸಾಕಷ್ಟು ನೋಡಿದ್ದೇವೆ. ಇದಕ್ಕೆ ಪ್ರಮುಖ ಕಾರಣ ಆಹಾರ ಸೇವನೆಯನ್ನು ಕಾಲಕಾಲಕ್ಕೆ ಸರಿಯಾಗಿ ಮಾಡದೇ ಇರುವುದು ಮತ್ತು ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಯುಕ್ತ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸುವುದು.

English summary
In Bengaluru and other major cities mothers and their babies are facing lot of problems due to late marriage and late pregnancy. Dr Shubha Rama Rao of St Martha's hospital has analysed why such complications are happening and what should be done to prevent untimely death of child.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X