ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಂಕೇಶ್‌ 80 : ನೆನಪು, ವಿಚಾರ, ನಾಟಕ ಕಾರ್ಯಕ್ರಮ

|
Google Oneindia Kannada News

ಬೆಂಗಳೂರು, ನ.11 : ಸಾಹಿತಿ ದಿ. ಪಿ.ಲಂಕೇಶ್‌ ಅವರ 80ನೇ ವರ್ಷದ ನೆನಪಿಗಾಗಿ 'ಲಂಕೇಶ್‌ 80', 'ಅವ್ವ' ನೆನಪು, ವಿಚಾರ, ಕಾವ್ಯ, ನಾಟಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿವಿಧ ವಿಚಾರ ಗೋಷ್ಠಿ, ನಾಟಕ ಪ್ರದರ್ಶನ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ನಡೆಯಲಿದೆ.

ಬೆಂಗಳೂರಿನ ಜೆ.ಸಿ.ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ಬಸವರಾಜ ಅರಸ್‌ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೆ. ಮರುಳಸಿದ್ಧಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಕೆ.ಎಂ. ಶ್ರೀನಿವಾಸಗೌಡ, ಕೆ.ಎ. ದಯಾನಂದ, ಅಪ್ಪಗೆರೆ ತಿಮ್ಮರಾಜು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Lankesh

ಮಧ್ಯಾಹ್ನ 12 ಗಂಟೆಗೆ 'ಲಂಕೇಶ್‌ ಮತ್ತು ಸಾಹಿತ್ಯ' ಗೋಷ್ಠಿ ನಡೆಯಲಿದ್ದು, ಅಗ್ರಹಾರ ಕೃಷ್ಣಮೂರ್ತಿ ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಬಿ.ಟಿ. ಲಲಿತಾ ನಾಯಕ್‌, ಸುಬ್ಬು ಹೊಲೆಯಾರ್‌, ಮೋಹನ್‌ ನಾಗಮ್ಮನವರ ಅವರು ವಿಷಯ ಮಂಡನೆ ಮಾಡಲಿದ್ದಾರೆ.

ಮಧ್ಯಾಹ್ನ 2.30ಕ್ಕೆ 'ಲಂಕೇಶ್‌ ಮತ್ತು ಮಾಧ್ಯಮ' ಗೋಷ್ಠಿ ನಡೆಯಲಿದ್ದು, ರವೀಂದ್ರ ರೇಷ್ಮೆ ಅಧ್ಯಕ್ಷತೆ ವಹಿಸಲಿದ್ದಾರೆ. ಎನ್‌.ಎಸ್‌. ಶಂಕರ್‌, ಪ್ರತಿಭಾ ನಂದಕುಮಾರ್‌, ಅಬ್ದುಲ್‌ ರಶೀದ್‌ ವಿಷಯ ಮಂಡನೆ ಮಾಡಲಿದ್ದಾರೆ.

ಮಧ್ಯಾಹ್ನ 4.15ಕ್ಕೆ 'ಲಂಕೇಶ್‌ ಮತ್ತು ರಂಗಭೂಮಿ, ಸಿನಿಮಾ ಗೋಷ್ಠಿ ನಡೆಯಲಿದ್ದು, ಜಿ.ಕೆ.ಗೋವಿಂದರಾವ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಎಂ.ಎಸ್‌. ಮೂರ್ತಿ, ಎಸ್‌. ಮಾಲತಿ, ಬಿ. ಚಂದ್ರೇಗೌಡ, ಪ್ರಸಾದ್‌ ಸ್ವಾಮಿ ವಿಷಯ ಮಂಡಿಸಲಿದ್ದಾರೆ.

Lankesh 80

ಸಂಜೆ 6ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಿ.ಎಸ್‌. ದ್ವಾರಕಾನಾಥ್‌ ಸಮಾರೋಪ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ಜೆ. ಸದಾಶಿವ ಅವರು ವಹಿಸಲಿದ್ದು. ಟಿ.ಎನ್‌. ಸೀತಾರಾಂ, ವಿಶು ಕುಮಾರ್‌, ಜನಾರ್ದನ (ಜನ್ನಿ) ಅತಿಥಿಗಳಾಗಿ ಪಾಲ್ಗೊಳ್ಳಿದ್ದಾರೆ. ಸಂಜೆ 7ಕ್ಕೆ ಲಂಕೇಶ್‌ರ 'ಎರಡು ಏಕಾಂಕಗಳು' ನಾಟಕ ಪ್ರದರ್ಶನವಿದೆ.

English summary
In the remembrance of P.Lankesh 'Lankesh 80 Program organized on 11th November in Ravindra Kalakshetra Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X