• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲ್ಯಾಂಡ್ ಮಾರ್ಕಿಗೆ 'ಸಾಹಸಸಿಂಹ' ಕರೆ ತಂದ ಡಾ. ಭಾರತಿ ವಿಷ್ಣು

By Mahesh
|

ಬೆಂಗಳೂರು,ಜ.22: ಲ್ಯಾಂಡ್ ಮಾರ್ಕ್ ಮಳಿಗೆ ಮತ್ತು ಅಮರ್ ಚಿತ್ರಕಥಾ ಒಟ್ಟಾಗಿ ‘ಸಾಹಸಸಿಂಹ' ಕಾಮಿಕ್ ಸರಣಿ ಪುಸ್ತಕವನ್ನು ಹೊರತರುತ್ತಿವೆ. ಕೋರಮಂಗಲದ ಫೋರಂ ಮಾಲ್ ನಲ್ಲಿರುವ ಲ್ಯಾಂಡ್ ಮಾರ್ಕ್ ಮಳಿಗೆಯಲ್ಲಿ ಜ.23,2015ರ ಶುಕ್ರವಾರ ಸಂಜೆ 6.30ಕ್ಕೆ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ.

ಜನಪ್ರಿಯ ನಟಿ ಡಾ.ಭಾರತಿ ವಿಷ್ಣುವರ್ಧನ್ ಹಸ್ತಾಕ್ಷರವುಳ್ಳ ಪುಸ್ತಕ ಮೊದಲ ದಿನ ಅಭಿಮಾನಿಗಳಿಗೆ ಲಭ್ಯವಿರುತ್ತದೆ. ನಟಿ ನಿಖಿತಾ ತುರ್ಕಾಲ್, ಡಾ.ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಹಾಗೂ ಮೊಮಕ್ಕಳಾದ ಶ್ಲೋಕಾ, ಜೇಷ್ಠವರ್ಧನ್ ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ. ಆಸಕ್ತ ಓದುಗರರು, ಅಭಿಮಾನಿಗಳು ಕೋರಮಂಗಲದ ಫೋರಂ ಮಾಲ್ ಲ್ಯಾಂಡ್ ಮಾರ್ಕ್ ಮಳಿಗೆಯಲ್ಲಿ ಪುಸ್ತಕವನ್ನು ಖರೀದಿಸಬಹುದು. [ಸಾಹಸಸಿಂಹ ಇನ್ನೊಂದು ರಹಸ್ಯ ಭೇದಿಸಬೇಕಿದೆ]

ಪುಸ್ತಕದ ಕುರಿತು: ಸಾಹಸಸಿಂಹ ವಿಷ್ಣುವರ್ಧನ್ ನೆರೆಮನೆಯಲ್ಲಿ ಮಧ್ಯರಾತ್ರಿಯ ದರೋಡೆಯಿಂದ ಕಥೆ ಆರಂಭವಾಗಿತ್ತದೆ. ಅದೇ ಪ್ರದೇಶದಲ್ಲಿನ ಎಲ್ಲ ಬೀದಿ ನಾಯಿಗಳು ಕಾಣೆಯಾಗುತ್ತವೆ. ಈ ಕುರಿತು ಸಾಹಸಸಿಂಹ ಪತ್ತೆದಾರಿ ಕೆಲಸ ಮಾಡುತ್ತಾರೆ. [ಭಾರತಿ ವಿಷ್ಣುವರ್ಧನ್ ಗೆ ಗೌರವ ಡಾಕ್ಟರೇಟ್]

ಕಳ್ಳರು ಮತ್ತು ನಾಯಿಗಳು ಕಾಣೆಯಾಗುವುದಕ್ಕೆ ಸಂಬಂಧ ಇರುತ್ತದೆ. ತನ್ನ ಬುದ್ಧಿವಂತ ಮೊಮ್ಮಕ್ಕಳಾದ ಜೇಷ್ಠ, ಶೋಕ್ಲಾರ ಸಲಹೆಯಂತೆ ಹಲವು ಪ್ರಶ್ನೆಗಳು ಅವರನ್ನು ಕಾಡುತ್ತವೆ. ಅದು ಅವರನ್ನು ಒಂದು ದಟ್ಟ ಅರಣ್ಯಕ್ಕೆ ತೆಗೆದುಕೊಂಡು ಹೋಗುತ್ತದೆ. ಅತಿ ಅಪಾಯದೊಂದಿಗೆ ಕೆಲಸ ಮಾಡುವ ಸ್ಥಿತಿ ಎದುರಾಗುತ್ತದೆ. ಹಲವು ಪ್ರಾಣಿಗಳ ನಡುವೆಯೂ ಭಯವಿಲ್ಲದ ಪತ್ತೆದಾರಿ ಹೇಗೆ ಕೆಲಸ ಮಾಡುತ್ತಾನೆ ಎಂಬುದನ್ನು ಪುಸ್ತಕ ಹೇಳುತ್ತದೆ.

ಪ್ರಕಾಶಕರ ಕುರಿತು: ಅಮರ್ ಚಿತ್ರಕಥಾ ದೇಶದಲ್ಲಿ ಬೃಹತ್ ಕಾಮಿಕ್ ಪುಸ್ತಕಗಳ ಮಾರಾಟ ಸರಣಿ. ಭಾರತದ 20 ಭಾಷೆಗಳಲ್ಲಿ 900 ಲಕ್ಷ ಪುಸ್ತಕಗಳು ಮಾರಾಟಗೊಂಡಿವೆ. 1967ರಲ್ಲಿ ಆರಂಭಗೊಂಡ ಸಂಸ್ಥೆ 400ಕ್ಕೂ ಅಧಿಕ ಪುಸ್ತಕಗಳನ್ನು ಪ್ರಕಾಶಿಸಿದೆ. ಭಾರತದ ಮಹಾಕಾವ್ಯ, ಪುರಾಣ, ಇತಿಹಾಸ, ಜನಪದದಿಂದ ಎಲ್ಲ ಬಗೆಯ ಹಾಸ್ಯಮಯ ಪುಸ್ತಕಗಳನ್ನು ಈ ಮಾದರಿಯಲ್ಲಿ ಹೊರತಂದಿದೆ. ಇದನ್ನು ಸೃಷ್ಟಿಸಿದ್ದು ಅನಂತ್ ಪೈ. ಪ್ರಕಾಶಕರು ಇಂಡಿಯಾ ಬುಕ್ ಹೌಸ್ . [ಕಾಮಿಕ್ ಸ್ಟ್ರಿಪ್ ನಲ್ಲಿ ಮತ್ತೆ ಹುಟ್ಟಿಬಂದ ವಿಷ್ಣು]

ಅನಂತ್ ಪೈ ಭಾರತೀಯ ಮಕ್ಕಳಿಗೆ ಸಾಂಸ್ಕೃತಿಕತೆ ವೈಭವವನ್ನು ತಿಳಿಸಲು ಕಾಮಿಕ್ ಸರಣಿಯನ್ನು ಆರಂಭಿಸಿದರು. ರೋಮನ್, ಗ್ರೀಕ್ ಪುರಾಣದ ಕುರಿತು ಭಾರತೀಯ ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳು, ನಮ್ಮದೇ ಸ್ವಂತ ಇತಿಹಾಸದಲ್ಲಿನ ಅಜ್ಞಾನ ಅವರನ್ನು ಅಚ್ಚರಿಗೊಳ್ಳುವಂತೆ ಮಾಡಿತು. 2007ರಲ್ಲಿ ಈ ಎಲ್ಲ ಪುಸ್ತಕಗಳು ಹಾಗೂ ಹೆಸರುಗಳನ್ನು ಹೊಸ ಸಂಸ್ಥೆ ಎಸಿಕೆ ಮೀಡಿಯಾ ಖರೀದಿಸಿತು.

ಲ್ಯಾಂಡ್‍ಮಾರ್ಕ್ ಕುರಿತು: ಲ್ಯಾಂಡ್ ಮಾರ್ಕ್ ಟಾಟಾ ಉದ್ಯಮದ ಭಾಗವಾಗಿದ್ದು ಭಾರತದಲ್ಲಿ ಅತೀ ದೊಡ್ಡ ವಿಶ್ರಾಂತಿ ಹಾಗೂ ಮನರಂಜನೆ ಮಳಿಗೆ. 25 ವರ್ಷಕ್ಕೂ ಅಧಿಕ ರೀಟೇಲ್ ಅನುಭವ ಹೊಂದಿರುವ ಸಂಸ್ಥೆ 1987ರಲ್ಲಿ ಸ್ಥಾಪನೆಗೊಡಿತು. ಈ ತಲೆಮಾರಿನ ಜನರನ್ನು ಜ್ಞಾನಭರಿತರಾಗಿಸುವ ಜೊತೆಗೆ ನಂತರದ ದಿನಗಳಲ್ಲಿ ನಾನಾ ವಿಧ ಆಟಿಕೆಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಉಡುಗೊರೆ ಸಾಮಾಗ್ರಿ ಮತ್ತು ಕ್ರೀಡಾ ಸಾಮಗ್ರಿಗಳನ್ನು ತಯಾರಿಸುತ್ತ ಬಂದಿದೆ. ಲ್ಯಾಂಡ್ ಮಾರ್ಕ್ ಸುಮಾರು 18ಕ್ಕೂ ಹೆಚ್ಚು ಮಳಿಗೆಯನ್ನು ಹೊಂದಿದೆ. ಭಾರತದಲ್ಲಿ 6 ನಗರಗಳಲ್ಲಿ 10ಕ್ಕೂ ಬೃಹತ್ ಮಾದರಿ ಮಳಿಗೆ ಸ್ಥಾಪಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Landmark Store and Amar Chitra Katha are delighted to launch the book ‘Sahasasimha’ in Landmark Store at Forum Mall, Koramangala on Friday, 23rd January 2015. Amar Chitra Katha is one of India’s largest selling comic book series, with more than 90 million copies sold in 20 Indian languages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more