ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳಾ ಉದ್ಯಮಿಗಳಿಗೆ ಭೂಮಿ, ಪ್ರೋತ್ಸಾಹ ಧನ

By Kiran B Hegde
|
Google Oneindia Kannada News

ಬೆಂಗಳೂರು, ನ. 17: ಕರ್ನಾಟಕ ಸರ್ಕಾರವು ಮಾಹಿತಿ ತಂತ್ರಜ್ಞಾನ ಬಂಡವಾಳ ಪ್ರದೇಶ (ಐಟಿಆರ್‌ವಿ), ಐಟಿ ಪಾರ್ಕ್ ಮತ್ತು ಕೈಗಾರಿಕಾ ವಲಯಗಳಲ್ಲಿ ಮಹಿಳಾ ಉದ್ಯಮಿಗಳಿಗಾಗಿ ಜಮೀನು ಕಾಯ್ದಿರಿಸಿದೆ. ಪ್ರೋತ್ಸಾಹ ಧನ ನೀಡುವ ಜತೆಗೆ ಉದ್ಯಮ ಸ್ಥಾಪನೆಯ ನಿಯಮಗಳನ್ನೂ ಸರಳೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. [ಕರ್ನಾಟಕದ ನೂತನ ಕೈಗಾರಿಕಾ ನೀತಿ]

ಸ್ಟಾಂಪ್ ಸುಂಕಕ್ಕೆ ಬೆಂಗಳೂರಿನಂತಹ ಪ್ರಮುಖ ನಗರಗಳ ವಲಯದಲ್ಲಿ ಶೇ. 75ರಷ್ಟು ಹಾಗೂ ಹೈದರಾಬಾದ್ ಕರ್ನಾಟಕ ವಲಯದಲ್ಲಿ ಶೇ. 100ರಷ್ಟು ವಿನಾಯಿತಿ ಘೋಷಿಸಲಾಗಿದೆ. ನೋಂದಣಿ ಶುಲ್ಕವನ್ನು 1,000 ರೂ. ಗಳಿಗೆ ಕೇವಲ 50 ಪೈಸೆಯಷ್ಟು ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. [ಪ್ರಪ್ರಥಮ ಮಹಿಳಾ ಬ್ಯಾಂಕ್ ಆರಂಭ]

siddu

ಆರ್ಥಿಕ ಸಹಾಯ: ಅತಿ ಸಣ್ಣ ಉದ್ಯಮಗಳು 8- 22 ಲಕ್ಷ, ಸಣ್ಣ ಉದ್ಯಮಗಳು 10-55 ಲಕ್ಷ ಹಾಗೂ ಮಧ್ಯಮ ಗಾತ್ರದ ಉದ್ಯಮಗಳು 20- 65 ಲಕ್ಷ ರೂ. ಆರ್ಥಿಕ ಸಹಾಯ ಪಡೆಯಲಿವೆ. ಹಾರೋಹಳ್ಳಿ ಹಾಗೂ ಹುಬ್ಬಳ್ಳಿಯಲ್ಲಿ ಎರಡು ಕೈಗಾರಿಕಾ ವಲಯ ಸ್ಥಾಪಿಸಿ ಸ್ಥಳೀಯ ಮಹಿಳೆಯರಿಗೆ ಉದ್ಯಮ ಮಾಡಲು ಪ್ರೋತ್ಸಾಹಿಸಲಾಗುವುದು. [ಪುರುಷರಿಗಾಗಿ ಮಹಿಳೆ ಆರಂಭಿಸಿದ ಟೇಲರ್ ಮ್ಯಾನ್]

ಎಲ್ಲೆಡೆ 2013ರ ಲೈಂಗಿಕ ಕಿರುಕುಳ ಕಾಯ್ದೆಯನ್ನು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮುಖ ವೆಬ್‌ಸೈಟ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಭರವಸೆ ನೀಡಿದ್ದಾರೆ.

English summary
Karnataka government is reserving land for women entrepreneurs with other incentives and reducing entry barriers. Government has decreased stamp duty somewhere up to 75% and 100% in Hyderabad Karnataka region. And women entrepreneurs will get lacks of financial assistance from government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X